Select Your Language

Notifications

webdunia
webdunia
webdunia
webdunia

ಸುಲಭವಾಗಿ ಮನೆಯಲ್ಲೇ ಚಾಕೊಲೇಟ್ ಮಾಡಬಹುದು ಗೊತ್ತಾ?

ಸುಲಭವಾಗಿ ಮನೆಯಲ್ಲೇ ಚಾಕೊಲೇಟ್ ಮಾಡಬಹುದು ಗೊತ್ತಾ?
ಬೆಂಗಳೂರು , ಗುರುವಾರ, 27 ಸೆಪ್ಟಂಬರ್ 2018 (19:11 IST)
ಚಾಕೋಲೇಟ್ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ!! ಚಿಕ್ಕ ವಯಸ್ಸಿನ ಮಕ್ಕಳಿಂದ ಹಿಡಿದು ವಯೋವೃದ್ದರವರೆಗೂ ಚಾಕೋಲೇಟ್ ಅನ್ನು ಇಷ್ಟಪಡುತ್ತಾರೆ. ಅಳುವ ಮಕ್ಕಳನ್ನು ಸಮಾಧಾನಪಡಿಸುವುದರಿಂದ ಹಿಡಿದು ವಯಸ್ಸಾದಾಗ ಮಧುಮೇಹದಂತಹ ರೋಗವನ್ನು ನಿಯಂತ್ರಣದಲ್ಲಿಡಲೂ ಸಹ ಚಾಕೋಲೇಟ್ ಸಹಕಾರಿ. ಚಾಕೋಲೇಟ್ ಅನ್ನು ನಾವು ಸುಲಭವಾಗಿ ಮನೆಯಲ್ಲಿಯೇ ಮಾಡಬಹುದು. ವಿಧಾನವೂ ಸಹ ಸರಳವಾಗಿದೆ. ನೀವೂ ಒಮ್ಮೆ ಟ್ರೈ ಮಾಡಿ ನೋಡಿ.. 
 ಬೇಕಾಗುವ ಸಾಮಗ್ರಿಗಳು :
 
* ಅಮೂಲ್ ಹಾಲಿನ ಪುಡಿ 3 ಕಪ್
* ಚಾಕೋಲೇಟ್ ಪುಡಿ 1 ಕಪ್
* ಸಕ್ಕರೆ 2 ಕಪ್
* ಬೆಣ್ಣೆ 1/2 ಕಪ್
 
ತಯಾರಿಸುವ ವಿಧಾನ :
 
ಮೊದಲು ಒಂದು ಪಾತ್ರೆಯಲ್ಲಿ ಹಾಲಿನ ಪುಡಿ ಮತ್ತು ಚಾಕೋಲೇಟ್ ಪುಡಿಯನ್ನು ಬೆರೆಸಬೇಕು. ನಂತರ ದಪ್ಪದ ಕಡಾಯಿಯನ್ನು ತೆಗೆದುಕೊಂಡು ಅದರಲ್ಲಿ ನೀರು ಹಾಕಿ ಅದು ಬಿಸಿಯಾಗುವಾಗ ಸಕ್ಕರೆಯನ್ನು ಹಾಕಿ ಚೆನ್ನಾಗಿ ಕಲುಕಬೇಕು. ನಂತರ ಪಾಕ ಸ್ವಲ್ಪ ಮಂದವಾಗುತ್ತಾ ಬಂದಾಗ ಬೆಣ್ಣೆಯನ್ನು ಹಾಕಬೇಕು. ನಂತರ ಈಗಾಗಲೇ ಬೆರೆಸಿದ ಚಾಕೋಲೇಟ್ ಪುಡಿ ಮತ್ತು ಹಾಲಿನ ಪುಡಿಯನ್ನು ಸೇರಿಸಿ ಕಲೆಸಬೇಕು. ಅದು ಗಟ್ಟಿಯಾಗುತ್ತಾ ಬಂದಾಗ ಪಾತ್ರೆಯನ್ನು ಕೆಳಗಿಳಿಸಬೇಕು. ನಂತರ ಈ ಮಿಶ್ರಣವನ್ನು ತುಪ್ಪ ಸವರಿದ ಪಾತ್ರೆಯಲ್ಲಿ ಹಾಕಿ ನಂತರ ತಟ್ಟೆಗೆ ಸುರಿದು ಅದು ತಣ್ಣಗಾಗಲು ಬಿಡಬೇಕು. ನಂತರ ಅದು ತಣ್ಣಗಾದ ನಂತರ ಚಾಕುವನ್ನು ತೆಗೆದುಕೊಂಡು ಗಟ್ಟಿಯಾದ ಚಾಕೋಲೇಟ್ ಅನ್ನು ಚೌಕಾಕಾರದಲ್ಲಿ ಕತ್ತರಿಸಿದರೆ ರುಚಿಕರವಾದ ಚಾಕೋಲೇಟ್ ಸವಿಯಲು ಸಿದ್ದ. 

Share this Story:

Follow Webdunia kannada

ಮುಂದಿನ ಸುದ್ದಿ

ರುಚಿ ರುಚಿಯಾದ ಆಮ್ಲೇಟ್ ಗ್ರೇವಿ