Daily Horoscope

Select Your Language

Notifications

webdunia
webdunia
webdunia
webdunia

ಸುಲಭವಾಗಿ ಬಾಳೆಹಣ್ಣಿನಿಂದ ಶ್ಯಾವಿಗೆ ಮಾಡಬಹುದು ಗೊತ್ತಾ?

ಬಾಳೆಹಣ್ಣು
ಬಾಳೆಹಣ್ಣಿನಿಂದ ವಿಧ ವಿಧವಾದ ಖಾದ್ಯಗಳನ್ನು ತಯಾರಿಸಬಹುದು. ಅವು ರುಚಿಯಾಗಿಯೂ ಶುಚಿಯಾಗಿಯೂ ಇರುತ್ತದೆ. ಅದರಲ್ಲಿ ಬಾಳೆಹಣ್ಣಿನ ಶ್ಯಾವಿಗೆಯೂ ಒಂದು. 
ಬೇಕಾಗುವ ಸಾಮಗ್ರಿಗಳು :
 
ಅಕ್ಕಿ 2 ಕಪ್
ಬಾಳೆಹಣ್ಣು 12 ರಿಂದ 13 
ಬೆಲ್ಲ 1/2 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಏಲಕ್ಕಿ 5 ರಿಂದ 6
 
ಮಾಡುವ ವಿಧಾನ :
 
ಮೊದಲು ಅಕ್ಕಿಯನ್ನು 3 ರಿಂದ 4 ಗಂಟೆಗಳ ಕಾಲ ನೆನೆಸಿಡಬೇಕು. ನೆನೆಸಿಟ್ಟ ಅಕ್ಕಿಯನ್ನು ತೊಳೆದು ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ರುಬ್ಬಿಕೊಂಡ ಅಕ್ಕಿಯ ಜೊತೆ ಬಾಳೆಹಣ್ಣನ್ನು ಹಾಕಿ ಏಲಕ್ಕಿಯನ್ನು ಸೇರಿಸಿ ಮತ್ತೆ ಚೆನ್ನಾಗಿ ರುಬ್ಬಿಕೊಂಡು ಅದಕ್ಕೆ ಸಾಗಾಗುವಷ್ಟು ಬೆಲ್ಲ ಮತ್ತು ಅದು ಸವಳು ಆಗದೇ ಇರಲು 1 ಚಮಚ ಉಪ್ಪನ್ನು ಸೇರಿಸಬೇಕು. ನಂತರ ಈ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ಹಾಕಿ ಕಡುಬು ಅಥವಾ ಇಡ್ಲಿ ಮಾಡುವ ಪಾತ್ರೆಯಲ್ಲಿ ಸುಮಾರು 30 ನಿಮಿಷಗಳ ಕಾಲ ಬೇಯಿಸಬೇಕು. ನಂತರ ಇದು ಬಿಸಿಯಿರುವಾಗಲೇ ಶ್ಯಾವಿಗೆ ಮಟ್ಟಿನಿಂದ ಒತ್ತಬೇಕು. (ಈ ಮಿಶ್ರಣವು ತಣ್ಣಗಾದರೆ ಮುದ್ದೆಯಾಗುತ್ತದೆ) ಈ ಶ್ಯಾವಿಗೆಗೆ ತುಪ್ಪ ಅಥವಾ ತೆಂಗಿನ ಹಾಲು ಹಾಕಿಕೊಂಡು ತಿಂದರೆ ಚೆನ್ನಾಗಿರುತ್ತದೆ 
 
ತೆಂಗಿನ ಹಾಲನ್ನು ಮಾಡುವ ವಿಧಾನ : ಕಾಯಿಯನ್ನು ತುಂಬಾ ನುಣ್ಣಗೆ ರುಬ್ಬಿ ಅದರ ರಸವನ್ನು ಹಿಂಡಿ, ಆ ರಸಕ್ಕೆ ಬೆಲ್ಲ ಮತ್ತು ಏಲಕ್ಕಿ ಪುಡಿಯನ್ನು ಹಾಕಿದರೆ ತೆಂಗಿನ ಹಾಲು ಸವಿಯಲು ಸಿದ್ಧ.

Share this Story:

Follow Webdunia kannada

ಮುಂದಿನ ಸುದ್ದಿ

ಸುಲಭವಾಗಿ ಮಾಡಬಹುದಾದ ರುಚಿಯದ ಡ್ರೈ ಫ್ರೂಟ್ಸ್ ಲಡ್ಡು