Select Your Language

Notifications

webdunia
webdunia
webdunia
webdunia

ರುಚಿಕರವಾದ ಅಕ್ಕಿರೊಟ್ಟಿ ಮಾಡುವುದು ಹೇಗೆ ಗೊತ್ತಾ?

ರುಚಿಕರವಾದ ಅಕ್ಕಿರೊಟ್ಟಿ ಮಾಡುವುದು ಹೇಗೆ ಗೊತ್ತಾ?
ಬೆಂಗಳೂರು , ಮಂಗಳವಾರ, 9 ಜೂನ್ 2020 (10:39 IST)
ಬೆಂಗಳೂರು : ಮಳೆಗಾಲ ಹತ್ತಿರ ಬರುತ್ತಿದೆ, ಈ ವೇಳೆಯಲ್ಲಿ ಎಲ್ಲರೂ ಇಷ್ಟಪಡುವಂತಹ ಅಕ್ಕಿರೊಟ್ಟಿಯನ್ನು ಮಾಡಿ ತಿನ್ನಿ.


ಬೇಕಾಗುವ ಸಾಮಾಗ್ರಿಗಳು: 2 ಕಪ್ ಅಕ್ಕಿ ಹಿಟ್ಟು, /2 ಕಪ್ ಸಣ್ಣಗೆ ಕತ್ತರಿಸಿಟ್ಟುಕೊಂಡ ಈರುಳ್ಳಿ, ಕ್ಯಾರಟ್ ತುರಿ ಒಂದು ಅರ್ಧ ಕಪ್, ¼ ಕಪ್ ಸೌತೆಕಾಯಿ, ಸಬ್ಬಸಿಗೆ ಸೊಪ್ಪು-ಕಾಲು ಕಪ್, ಹಸಿಮೆಣಸಿನಕಾಯಿ- ಒಂದು ದೊಡ್ಡದ್ದು, ಉಪ್ಪು.


ಮಾಡುವ ವಿಧಾನ: ಕತ್ತರಿಸಿಟ್ಟುಕೊಂಡ ಈರುಳ್ಳಿ, ಸೌತೆಕಾಯಿ, ಸಬ್ಬಸಿಗೆ ಸೊಪ್ಪು, ತುರಿದ ಕ್ಯಾರೆಟ್, ಹಸಿಮೆಣಸು, ಸೌತೆಕಾಯಿ, ಉಪ್ಪು ಇವನ್ನೆಲ್ಲವನ್ನು ಒಂದು ಪಾತ್ರೆಗೆ ಹಾಕಿಕೊಂಡು ಕೈಯಿಂದ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಈ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವೇ ಅಕ್ಕಿಹಿಟ್ಟನ್ನು ಸೇರಿಸಿ. ಮಿಶ್ರಣ ಚಪಾತಿ ಹಿಟ್ಟಿನ ಹದಕ್ಕೆ ಬರಬೇಕು. ಕೈಗೆ ತುಸು ಎಣ್ಣೆ ಸವರಿಕೊಂಡು ಈ ಹಿಟ್ಟಿನ ಮಿಶ್ರಣವನ್ನು ಲಿಂಬೆ ಹಣ್ಣಿನ ಗಾತ್ರದಷ್ಟು ಉಂಡೆ ಮಾಡಿಕೊಳ್ಳಿ. ಬಾಳೆಎಲೆಯಲ್ಲಿ ಎಣ್ಣೆ ಸವರಿ ಈ ಉಂಡೆ ಇಟ್ಟು ತೆಳುವಾಗಿ ರೊಟ್ಟಿ ತಟ್ಟಿರಿ.


ಆಮೇಲೆ ಕಾದ ಕಾವಲಿಗೆ ಎಲೆಯ ಸಮೇತವಾಗಿ ರೊಟ್ಟಿಯನ್ನು ಮೇಲೆ ಕವಚು ಹಾಕಿ.  ನಿಧಾನಕ್ಕೆ ಎಲೆಯನ್ನು ತೆಗೆಯರಿ. ರೊಟ್ಟಿಯನ್ನು ಎರಡು ಬದಿ ಹದವಾಗಿ ಬೇಯಿಸಿ. ಈ ರೊಟ್ಟಿ ಬಿಸಿಯಾಗಿರುವಾಗ ಕಾಯಿ ಚಟ್ನಿ ಇಲ್ಲವೇ ತುಪ್ಪದ ಜತೆ ಸವಿಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ತ್ವಚೆಯ ಕಾಂತಿ ಹೆಚ್ಚಲು ಫೇಸ್ ವಾಶ್ ಬದಲು ಇದರಿಂದ ಮುಖ ವಾಶ್ ಮಾಡಿಕೊಳ್ಳಿ