ಬೆಂಗಳೂರು : ಬಾಗಲಕೋಟೆಯಲ್ಲಿ ಹೋಳಿ ಹಬ್ಬಕ್ಕೆ ಮಾಡುವ ಸ್ಪೇಷಲ್ ಸಿಹಿತಿನಿಸು ಎಂದರೆ ಅದು ಗೆಣಸಿನ ಹೋಳಿಗೆ. ಇದನ್ನು ಕಾಮದೇವನಿಗೆ ನೈವೇದ್ಯಕ್ಕೆ ಇಡಲು ಮಾಡುತ್ತಾರೆ. ಇದನ್ನು ಮಾಡುವುದು ಹೇಗೆಂದು ತಿಳಿಯೋಣ.
									
										
								
																	
ಬೇಕಾಗುವ ಸಾಮಾಗ್ರಿ: ಕೆಂಪುಗೆಣಸು 2, ತುರಿದ ಬೆಲ್ಲ 1 ಕಪ್, ೇಲಕ್ಕಿ ಪುಡಿ ಸ್ವಲ್ಪ, ಹುರಿದ ಗಸಗಸೆ, ತಯಾರಿಸಿಟ್ಟುಕೊಂಡ ಗೋದಿ ಹಿಟ್ಟು, ಸ್ವಲ್ಪ ಎಣ್ಣೆ
									
			
			 
 			
 
 			
			                     
							
							
			        							
								
																	
ಮಾಡುವ ವಿಧಾನ: ಕುಕ್ಕರ್ ಗೆ ನೀರು ಹಾಕಿ ಅದರ ಮೇಲೆ ಒಂದು ಪಾತ್ರೆಯಲ್ಲಿ ನೀರು ಹಾಕದೆ ಗೆಣಸನ್ನು ಇಟ್ಟು ಮುಚ್ಚಳ ಮುಚ್ಚಿ 2 ವಿಷಲ್ ತೆಗೆಯಿರಿ. ಬಳಿಕ ಅದರ ಸಿಪ್ಪೆ ತೆಗೆದು ತುರಿದಿಟ್ಟುಕೊಳ್ಳಿ. ಒಂದು ಬಾಣಲೆ ಬಿಸಿ ಮಾಡಿ  ಅದರಲ್ಲಿ 1 ಬಟ್ಟಲಿನಷ್ಟು ಗೆಣಸು ಹಾಕಿ, ಅದಕ್ಕೆ ½ ಬಟ್ಟಲು ಬೆಲ್ಲ ಹಾಕಿ ಬಿಸಿ ಮಾಡುತ್ತಾ ಕೈಯಾಡಿಸುತ್ತಿರಿ. ಅದು ನೀರಾಗಿ ಬಳಿಕ ಗಟ್ಟಿಯಾಗುತ್ತದೆ. ಬಳಿಕ ಅದನ್ನುಕೆಳಗಿಳಿಸಿ ತಣ್ಣಗಾಗಿಸಿ. ಅದಕ್ಕೆ ಯಾಲಕ್ಕಿ ಪುಡಿ ಹಾಕಿ  ಮಿಕ್ಸ್ ಮಾಡಿ ಉಂಡೆಗಳನ್ನು ಮಾಡಿಟ್ಟುಕೊಳ್ಳಿ.
 
									
										
								
																	
ಗೋದಿಹಿಟ್ಟಿನ ಉಂಡೆಯೊಳಗೆ ಗೆಣಸಿನ ಉಂಡೆಗಳನ್ನು ಇಟ್ಟು ಮತ್ತೆ ಉಂಡೆ ಮಾಡಿ ಗಸೆಗಸೆಗೆ ಅದ್ದಿ ಹೋಳಿಗೆ ಮಾಡುವ ರೀತಿಯಲ್ಲಿ ಲಟ್ಟಿಸಿ. ಬಳಿಕ ತವಾ ಮೇಲಿಟ್ಟು ಎಣ್ಣೆ ಹಾಕಿ ಬೇಯಿಸಿ. ಆಗ ಗೆಣಸಿನ ಹೋಳಿಗೆ ರಡಿಯಾಗುತ್ತದೆ. ಅದನ್ನು ತುಪ್ಪದ ಜೊತೆ ಸವಿಯಿರಿ.