ಅಕ್ಕಿಯಿಂದ ಮೃದುವಾದ ಹಾಗೂ ಆರೋಗ್ಯಕರವಾದ ಆಹಾರವನ್ನು ತಯಾರಿಸಬೇಕು ಎಂದರೆ ಅದು ಇಡ್ಲಿ ಪಾಕವಿಧಾನ.ಪೋಷಕಾಂಶ ಭರಿತವಾದ ಈ ಖಾದ್ಯವನ್ನು ಎಲ್ಲಾ ವಯೋಮಾನದವರು ಸಹ ಸವಿಯಬಹುದು. ರೋಗ ಪೀಡಿತರಿಗೂ ಈ ತಿಂಡಿ ಉತ್ತಮ ಆಯ್ಕೆ ಆಗುವುದು. ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮುಂಜಾನೆಯ ತಿಂಡಿಯನ್ನಾಗಿ ತಯಾರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮುಂಜಾನೆಯ ತಿಂಡಿಯನ್ನಾಗಿ ತಯಾರಿಸಲಾಗುತ್ತದೆ. ಇದನ್ನು ದಿನದ ಎಲ್ಲಾ ಸಮಯದಲ್ಲಿಯೂ ಸವಿಯಬಹುದು. ಯಾವುದೇ ಆರೋಗ್ಯ ಸಮಸ್ಯೆ ಅಥವಾ ಅಡ್ಡ ಪರಿಣಾಮ ಬೀರದು. ಆರೋಗ್ಯಕರವಾದ ಈ ತಿಂಡಿಯನ್ನು ನೀವು ಸಹ ತಯಾರಿಸಬೇಕು ಎಂದರೆ ಈ ಮುಂದಿನ ಸರಳ ವಿಧಾನವನ್ನು ಅನುಸರಿಸಿ, ತಯಾರಿಸಿ.