Select Your Language

Notifications

webdunia
webdunia
webdunia
webdunia

ರುಚಿಯಾದ ಟೊಮ್ಯಾಟೋ ಕಾಯಿ ಚಟ್ನಿ!

ರುಚಿಯಾದ ಟೊಮ್ಯಾಟೋ ಕಾಯಿ ಚಟ್ನಿ!
ಮೈಸೂರು , ಶನಿವಾರ, 29 ಜನವರಿ 2022 (12:27 IST)
ಚಟ್ನಿ ಎಲ್ಲ ಕಾಲದಲ್ಲಿಯೂ  ತಿನ್ನಬಹುದಾದ ಖಾದ್ಯ.
 
ಎಂಥದೇ ಸಮಾರಂಭಗಳಲ್ಲಿಯೂ ಬಗೆ ಬಗೆಯ ಅಡುಗೆ ಪದಾರ್ಥಗಳ ನಡುವೆ ಚಟ್ನಿಯೂ ಇರುತ್ತದೆ. ಬೆಳಗಿನ ತಿಂಡಿಗಂತೂ  ಚಟ್ನಿ ಬೇಕೇ ಬೇಕು.

ದೋಸೆ, ಚಪಾತಿ ಅದರಲ್ಲೂ ಮಖ್ಯವಾಗಿ ರೊಟ್ಟಿಯೊಂದಿಗೆ ಚಟ್ನಿ ಹೊಂದುತ್ತದೆ. ಅದರಲ್ಲೂ ಈ ವಿಶೇಷ ಚಟ್ನಿಯನ್ನು ಸವಿಯುವ ಮಜವೇ ಬೇರೆ. ಸುಲಭವಾಗಿ ತಯಾರಿಸಬಹುದಾದ ಈ ಟೊಮೆಟೋ  ಕಾಯಿಯ ಚಟ್ನಿಯು ಚಳಿಗಾಲದಲ್ಲಿ  ದೇಹಕ್ಕೆ ಸರಿ ಹೊಂದುವ ಖಾದ್ಯ ಕೂಡ ಹೌದು.

ನೀವೂ ಈ ಖಾದ್ಯದ ರುಚಿ ನೋಡಬೇಕು ಎಂದಾದರೆ ಇದಕ್ಕೆ ಬೇಕಾಗುವ ಸಾಮಾಗ್ರಿಗಳನ್ನು ಸಿದ್ಧ ಪಡಿಸಿಕೊಳ್ಳಿ.

ಬೇಕಾಗುವ ಸಾಮಾಗ್ರಿಗಳು

2 ಸಣ್ಣಗೆ ಕತ್ತರಿಸಿದ ಟೊಮ್ಯಾಟೊ ಕಾಯಿ /ಹಸಿರು ಟೊಮ್ಯಾಟೊ
3 ಟೀ ಸ್ಪೂನ್ ಎಳ್ಳಿನ ಬೀಜ
ಸ್ವಲ್ಪ ಕೊತ್ತೊಂಬರಿ ಸೊಪ್ಪು
1 ಟೀ ಸ್ಪೂನ್ ಅಡುಗೆ ಎಣ್ಣೆ
7 ರಿಂದ 8 ಕರಿಬೇವಿನ ಎಸಳುಗಳು
1/2 ಟೀ ಸ್ಪೂನ್ ಜೀರಿಗೆ
1/2 ಟೀ ಸ್ಪೂನ್ ಸಾಸಿವೆ
1/2 ಟೀ ಸ್ಪೂನ್ ಸಕ್ಕರೆ
3 ರಿಂದ 4 ಹಸಿ ಮೆಣಸಿನ ಕಾಯಿಗಳು
ಒಂದು ಚಿಟಿಕೆ ಇಂಗು
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ

•ಮೊದಲಿಗೆ ಎಳ್ಳಿನ ಬೀಜಗಳನ್ನು ಹುರಿದು ಒಣಗಿಸಿಕೊಳ್ಳಿ.

•ಈಗ ಒಂದು ಪ್ಯಾನ್ನಲ್ಲಿ ಅಡುಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿಕೊಂಡು ಸಾಸಿವೆ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ನಂತರ ಇಂಗು, ಜೀರಿಗೆ, ಹಸಿ ಮೆಣಸಿಕಾಯಿ, ಕರಿಬೇವಿನ ಎಸಳುಗಳು ಹಾಗೂ ಸಣ್ಣದಾಗಿ ಕತ್ತರಿಸಿ ಇಟ್ಟುಕೊಂಡಿದ್ದ ಹಸಿರು ಟೊಮ್ಯಾಟೋವನ್ನು ಹಾಕಿ. ಸುಮಾರು 3 ರಿಂದ 4 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಕೊನೆಯಲ್ಲಿ ಕೊತ್ತೊಂಬರಿ ಸೊಪ್ಪನ್ನು ಸೇರಿಸಿಕೊಳ್ಳಿ. ಇದು ರುಚಿ ಜೊತೆಗೆ ಘಮವನ್ನೂ ಹೆಚ್ಚಿಸುತ್ತದೆ. ನಂತರ ಇದನ್ನುತಣ್ಣಗಾಗಲು ಬಿಡಿ.

•ಮಿಶ್ರಣ ತಣ್ಣಗಾದ ಬಳಿಕ ಅದರೊಂದಿಗೆ ಉಪ್ಪು , ಸಕ್ಕರೆ ಹಾಗೂ ಹುರಿದಿಟ್ಟುಕೊಂಡಿದ್ದ ಎಳ್ಳನ್ನು ಸೇರಿಸಿ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಪಾತ್ರೆಗೆ ಹಾಕಿ ಸರ್ವ್ ಮಾಡಿ.


Share this Story:

Follow Webdunia kannada

ಮುಂದಿನ ಸುದ್ದಿ

ನಿದ್ದೆಗೆ ರಾಮಬಾಣ ಏನ್ ಗೋತ್ತ? ಒಮ್ಮೆ ಟೈ ಮಾಡಿ