Webdunia - Bharat's app for daily news and videos

Install App

ಗರಿಗರಿಯಾದ ಉದ್ದಿನ ರವಾ ದೋಸೆ

Webdunia
ಶುಕ್ರವಾರ, 21 ಸೆಪ್ಟಂಬರ್ 2018 (17:35 IST)
ಸಾಮಗ್ರಿಗಳು: 
 
ಗೋಧಿ ರವೆ (ಉಪ್ಪಿಟ್ಟಿನ ರವೆ) : 2 1/4 ಕಪ್,
ಉದ್ದಿನ ಬೇಳೆ : 1 ಕಪ್,
ಉಪ್ಪು : ರುಚಿಗೆ 
 
ಉದ್ದಿನ ಬೇಳೆಯನ್ನು ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ ನಂತರ ಅದನ್ನು 3 ರಿಂದ 4 ಘಂಟೆಗಳ ಕಾಲ ನೀರಿನಲ್ಲಿ ನೆನೆಹಾಕಿ ನಂತರ ಅದನ್ನು ರಾತ್ರಿ ನುಣ್ಣಗೆ ರುಬ್ಬಿ ಮುಚ್ಚಿಡಿ. ಬೆಳಿಗ್ಗೆ ಎನ್ನುವಷ್ಟರಲ್ಲಿ ಸ್ವಲ್ಪ  ಹುದುಗು ಬಂದಿರುತ್ತದೆ. ಬೆಳಿಗ್ಗೆ  ಇನ್ನೊಂದು ಪಾತ್ರೆಯಲ್ಲಿ ಮೇಲೆ ಹೇಳಿದಷ್ಟು ರವೆಯನ್ನು ತೆಗೆದುಕೊಂಡು ಅದು ಮುಳುಗುವಷ್ಟು ನೀರು ಹಾಕಿ ಅರ್ಧ ಗಂಟೆಗಳ ಕಾಲ ನೆನೆಸಿಡಿ. ರವೆ ನೆಂದ ಮೇಲೆ ನೀರು ಜಾಸ್ತಿ ಇದ್ದಲ್ಲಿ ಬಸಿದುಕೊಳ್ಳಿ. ನಂತರ ಅದಕ್ಕೆ ರುಬ್ಬಿದ ಉದ್ದಿನ ಹಿಟ್ಟು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ 15 ರಿಂದ 20 ನಿಮಿಷ ಬಿಡಿ. ಈ ಮಿಶ್ರಣ ಉಳಿದ ದೋಸೆ ಹಿಟ್ಟಿನ ಮಿಶ್ರಣಕ್ಕಿಂತ ಗಟ್ಟಿ ಇರಲಿ ಮತ್ತು ಇಡ್ಲಿ ಹಿಟ್ಟಿನಕಿಂತ ಸ್ವಲ್ಪ ತೆಳ್ಳಗಿರಲಿ. ಕಾದ ತವಾ ಮೇಲೆ ದೋಸೆ ಹಿಟ್ಟನ್ನು ಹಾಕಿ ಎರೆದು ಎರಡೂ ಕಡೆ ಚೆನ್ನಾಗಿ ಬೇಯಿಸಿದರೆ ಬಿಸಿ ಬಿಸಿ ರವಾ ಉದಿನ ದೋಸೆ ಸಿದ್ಧ ಇದು ತುಪ್ಪ ಮತ್ತು ಚಟ್ನಿಯ ಉತ್ತಮವಾಗಿರುತ್ತದೆ
 
 
ಚಟ್ನಿ :
ಸಾಮಗ್ರಿಗಳು :
ತೆಂಗಿನ ತುರಿ : 1 ಕಪ್,
ಕೆಂಪು ಮೆಣಸಿನಕಾಯಿ ಕಾಯಿ : 6-7, 
ಉದ್ದಿನ ಬೇಳೆ : 1 ಚಮಚ,
ಬಿಳಿ ಎಳ್ಳು: 1/2 ಚಮಚ,  
ಹುಣಸೆಹಣ್ಣು : ರುಚಿಗೆ ತಕ್ಕಷ್ಟು
ಬೆಲ್ಲ : 1 ಚಮಚ,
ಎಣ್ಣೆ : 1/4 ಚಮಚ, 
ಉಪ್ಪು : ರುಚಿಗೆ  
 
ವಿಧಾನ : 
ಉದ್ದಿನ ಬೇಳೆ, ಒಣ ಮೆಣಸಿನ ಕಾಯಿಗೆ ಎಣ್ಣೆ ಹಾಕಿ ಹುರಿದು ಕೊನೆಯಲ್ಲಿ ಎಳ್ಳು ಹಾಕಿ ಹುರಿದುಕೊಳ್ಳಿ. ಮಿಕ್ಸಿ ಜಾರ್‌ಗೆ ಹುರಿದ ಮಿಶ್ರಣದ ಜೊತೆ ಉಳಿದೆಲ್ಲಾ ಸಾಮಗ್ರಿ ಸೇರಿಸಿ ರುಬ್ಬಿದರೆ ಚಟ್ನಿ ಸಿದ್ಧ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

ಮುಂದಿನ ಸುದ್ದಿ
Show comments