ತಯಾರಿಸಿ ನೋಡಿ ರುಚಿಕರ ಮೇಥಿ ಮಟನ್

Webdunia
ಸೋಮವಾರ, 24 ಸೆಪ್ಟಂಬರ್ 2018 (16:51 IST)
ಬೇಕಾಗುವ ಸಾಮಗ್ರಿಗಳು
1 ಕೆಜಿ ಮಟನ್
1 ಚಮಚ ಅರಿಶಿನದ ಪುಡಿ
1 ಚಮಚ ಗರಂ ಮಸಾಲಾ ಪುಡಿ
4 ಹಸಿರು ಮೆಣಸಿನಕಾಯಿಯ ಪೇಸ್ಟ್
2-3 ಹೆಚ್ಚಿದ ಹಸಿರು ಮೆಣಸಿನಕಾಯಿಯ
2-3 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್
3 ಲವಂಗ
1 ಕಪ್ ಮೊಸರು
1 ದೊಡ್ಡ ಟೋಮೆಟೋ
3 ಏಲಕ್ಕಿ
2 ಚಮಚ ಖಾರದ ಪುಡಿ
1 ಚಮಚ ಧನಿಯಾ ಪುಡಿ
2 ಚಮಚ ಉಪ್ಪು
2 ಚಮಚ ಎಣ್ಣೆ
1 ಚಮಚ ಪುಡಿಮಾಡಿದ ಸೋಂಪು ಕಾಳು
2 ಈರುಳ್ಳಿ
250 ಗ್ರಾಂ ಮೆಂತ್ಯೆ ಸೊಪ್ಪು
 
ಮಾಡುವ ವಿಧಾನ
 
* ಒಂದು ಪಾತ್ರೆಯಲ್ಲಿ ಮಟನ್, ಅರಿಶಿನದ ಪುಡಿ, ಮೊಸರು, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸಿನಕಾಯಿಯ ಪೇಸ್ಟ್ ಹಾಕಿ 3-4 ಗಂಟೆಗಳ ಕಾಲ ಮ್ಯಾರಿನೇಟ್ ಮಾಡಿ.
 
* ಒಂದು ಬಾಣಲೆಯಲ್ಲಿ ಎಣ್ಣೆ, ಲವಂಗ, ಹೆಚ್ಚಿದ ಹಸಿರು ಮೆಣಸಿನಕಾಯಿಯ, ಹೆಚ್ಚಿದ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ, ನಂತರ ಅದಕ್ಕೆ ಹೆಚ್ಚಿದ ಟೋಮೆಟೋ, ಮೆಂತ್ಯೆ ಸೊಪ್ಪು ಹಾಕಿ ಚೆನ್ನಾಗಿ ಹುರಿಯಿರಿ.
 
* ನಂತರ ಅದಕ್ಕೆ ಏಲಕ್ಕಿ, ಅರಿಶಿನದ ಪುಡಿ, ಖಾರದ ಪುಡಿ, ಧನಿಯಾ ಪುಡಿ ಮತ್ತು ಗರಂ ಮಸಾಲಾ ಹಾಕಿ ಹುರಿಯಿರಿ.
 
* ನಂತರ ಮ್ಯಾರಿನೇಟ್ ಮಾಡಿದ ಮಟನ್ ಹಾಕಿ, ಅದಕ್ಕೆ 2 ಲೋಟ ನೀರು ಸೇರಿಸಿ ಬಾಣಲೆಯನ್ನು ಮುಚ್ಚಿಟ್ಟು ಮಾಂಸ ಚೆನ್ನಾಗಿ ಬೇಯುವವರೆಗೆ ಬೇಯಿಸಿ.
 
* ಮಾಂಸ ಬೆಂದ ನಂತರ, ಅದರ ಮೇಲೆ ಪುಡಿಮಾಡಿದ ಸೋಂಪನ್ನು ಹಾಕಿ ಬಿಸಿ ಬಿಸಿಯಾದ ಆರೋಗ್ಯಕರ ಹಾಗೂ ರುಚಿಕರ ಮೇಥಿ ಮಟನ್ ಅನ್ನು ಚಪಾತಿ, ಅನ್ನ ಅಥವಾ ರೋಟ್ಟಿ ಜೊತೆ ಸೇವಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಮುಂದಿನ ಸುದ್ದಿ
Show comments