ಬೆಂಡೆಕಾಯಿ ಕಾಯಿರಸ

Webdunia
ಮಂಗಳವಾರ, 30 ಅಕ್ಟೋಬರ್ 2018 (18:12 IST)
ಬೇಕಾಗುವ ಸಾಮಗ್ರಿಗಳು :
 
* 1/4 ಕಿಲೋ ಬೆಂಡೆಕಾಯಿ
* ತೆಂಗಿನಕಾಯಿ ತುರಿ 1 ಕಪ್
* ಹಸಿಮೆಣಸಿನಕಾಯಿ 5 ರಿಂದ 6
* ಉದ್ದಿನಬೇಳೆ 2 ಟೀ ಚಮಚ
* ಜೀರಿಗೆ 1 ಟೀ ಚಮಚ
* ಎಣ್ಣೆ ಸ್ವಲ್ಪ
* ಅರಿಶಿನ ಅರ್ಧ ಟೀ ಚಮಚ
* ಕೊತ್ತಂಬರಿ ಸೊಪ್ಪು ಸ್ವಲ್ಪ
* ನಿಂಬೆಹಣ್ಣು 1
 
ಒಗ್ಗರಣೆಗೆ
 
* ತುಪ್ಪ 1 ಟೀ ಚಮಚ
* ಸಾಸಿವೆ 1 ಟೀ ಚಮಚ
* ಕರಿಬೇವು ಸ್ವಲ್ಪ
* ಉಪ್ಪು ರುಚಿಗೆ ತಕ್ಕಷ್ಟು
 
ತಯಾರಿಸುವ ವಿಧಾನ :
 
 ಮೊದಲಿಗೆ ಬೆಂಡೆಕಾಯಿಯನ್ನು ಒಂದೇ ಅಳತೆಯಲ್ಲಿ ಕತ್ತರಿಸಿಟ್ಟುಕೊಳ್ಳಬೇಕು. ನಂತರ ಬಾಣಲೆಯಲ್ಲಿ ಬೆಂಡೆಕಾಯಿ, ಅರಿಶಿನ ಮತ್ತು 4 ಟೀ ಚಮಚ ಎಣ್ಣೆಯನ್ನು ಹಾಕಿ ಲೋಳೆ ಹೋಗುವವರಿಗೆ ಚೆನ್ನಾಗಿ ಹುರಿಯಬೇಕು. ನಂತರ ಉದ್ದಿನಬೇಳೆ, ಜೀರಿಗೆ, ಹಸಿಮೆಣಸಿನಕಾಯಿ ಮತ್ತು 1 ಟೀ ಚಮಚ ಎಣ್ಣೆಯನ್ನು ಹಾಕಿ ಕೆಂಬಣ್ಣ ಬರುವವರೆಗೆ ಹುರಿಯಬೇಕು. ನಂತರ ಹುರಿದ ಪದಾರ್ಥಗಳನ್ನು ಮಿಕ್ಸಿಯಲ್ಲಿ ಜೊತೆಗೆ ತೆಂಗಿನತುರಿ, ಉಪ್ಪು, ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಹುರಿದುಕೊಂಡ ಬೆಂಡೆಕಾಯಿ ಮತ್ತು ರುಬ್ಬಿಕೊಂಡ ಪದಾರ್ಥಗಳನ್ನು ಮಿಶ್ರಣ ಮಾಡಬೇಕು. ಅದು ತುಂಬಾ ಗಟ್ಟಿಯಾಗಿಯೂ ಅಥವಾ ತೆಳ್ಳಗೆ ಸಹ ಇರಬಾರದು. ಇದಕ್ಕೆ ನಿಂಬೆರಸ ಸೇರಿಸಿ ಮಿಶ್ರಣ ಮಾಡಬೇಕು. ಕೊನೆಯಲ್ಲಿ ಒಗ್ಗರಣೆಯನ್ನು ಹಾಕಿ ಜೊತೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಸೇರಿಸಿದರೆ ರುಚಿಯಾದ ಕಾಯಿರಸ ಸವಿಯಲು ಸಿದ್ಧ. ಇದನ್ನು ಅನ್ನದೊಂದಿಗೆ ಸವಿದರೆ ರುಚಿಯಾಗಿರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ
Show comments