Select Your Language

Notifications

webdunia
webdunia
webdunia
webdunia

ರುಚಿ ರುಚಿಯಾದ ಬಾಳೆಹಣ್ಣಿನ ಕೇಕ್

ರುಚಿ ರುಚಿಯಾದ ಬಾಳೆಹಣ್ಣಿನ ಕೇಕ್
ಬೆಂಗಳೂರು , ಮಂಗಳವಾರ, 4 ಸೆಪ್ಟಂಬರ್ 2018 (16:08 IST)
ಸಾಮಾನ್ಯವಾಗಿ ದಿನನಿತ್ಯದ ಬಳಕೆಯಲ್ಲಿ ಬಳಕೆಯಾಗುವ ಹಣ್ಣು ಬಾಳೆಹಣ್ಣು ಎಂದರೆ ತಪ್ಪಾಗಲಾರದು. ಈ ಹಣ್ಣನ್ನು ಎಲ್ಲಾ ವಯಸ್ಸಿನವರೂ ತಿನ್ನುತ್ತಾರೆ. ಬಾಳೆಹಣ್ಣಿನ ವಿವಿಧ ಭಕ್ಷ್ಯಗಳನ್ನೂ ತಯಾರಿಸುತ್ತಾರೆ. ಪ್ರಮುಖವಾಗಿ ಪೂಜೆಗಳಲ್ಲಿಯೂ ಬಳಕೆಯಾಗುವ ಬಾಳೆಹಣ್ಣಿನಿಂದ ಕೇಕ್ ಕೂಡಾ ತಯಾರಿಸಬಹುದು. ಅದು ಹೇಗೆ ಅಂತೀರಾ? 
ಬೇಕಾಗುವ ಸಾಮಗ್ರಿಗಳು:
 
1 ಕಪ್ ಗೋಧಿ ಹಿಟ್ಟು
2 ಬಾಳೆಹಣ್ಣು
11/2 ಚಮಚ ರಿಫೈನ್ಡ್ ಎಣ್ಣೆ
1/2 ಕಪ್ ಹಾಲು
1 ಟೀ ಚಮಚ ವಿನಿಗರ್ ಅಥವಾ 1 ಟೀ ಚಮಚ ನಿಂಬೆರಸ
ಸ್ವಲ್ಪ ಸಕ್ಕರೆ ಪುಡಿ (ಬೇಕಾದರೆ)
1 ಟೀ ಸ್ಪೂನ್ ಬೇಕಿಂಗ್ ಪೌಡರ್
1 ಟೀ ಸ್ಪೂನ್ ಬೇಕಿಂಗ್ ಸೋಡಾ
1/2 ಟೀ ಸ್ಪೂನ್ ವೆನಿಲ್ಲಾ ಎಸ್ಸೆನ್ಸ್
 
ಕೇಕ್ ಮಾಡುವ ವಿಧಾನ:
 
ಮೊದಲು ಓವನ್ ಅನ್ನು 180 ಡಿಗ್ರಿಯಲ್ಲಿ ಹೀಟ್ ಮಾಡಬೇಕು. ನಂತರ ಒಂದು ಜರಡಿಯಲ್ಲಿ ಗೋಧಿ ಹಿಟ್ಟು, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ಸಕ್ಕರೆ ಪುಡಿ ಹಾಕಿ ಸಾಣಿಸಬೇಕು. ನಂತರ ಬಾಳೆಹಣ್ಣನ್ನು ಹಾಲಿನ ಜೊತೆ ಮಿಕ್ಸಿಗೆ ಹಾಕಿ ನುಣ್ಣಗೆ ಪೇಸ್ಟ್ ಮಾಡಬೇಕು. ಈ ಪೇಸ್ಟ್‌ಗೆ ಎಣ್ಣೆ ಮತ್ತು ಸಕ್ಕರೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಈಗ ಸಾಣಿಸಿ ಇಟ್ಟ ಗೋಧಿ ಹಣ್ಣಿನ ಮಿಶ್ರಣವನ್ನು ಹಾಕಿ ಚೆನ್ನಾಗಿ 2 ನಿಮಿಷಗಳವರೆಗೆ ಬೀಟ್ ಮಾಡುತ್ತಾ ಅದಕ್ಕೆ ವೆನಿಲ್ಲಾ ಎಸ್ಸೆನ್ಸ್ ಹಾಕಬೇಕು. 
 
ನಂತರ 1 ಕೇಕ್ ಮೌಲ್ಡ್‌ಗೆ ಎಣ್ಣೆ ಸವರಿ ಅದರ ಮೇಲೆ ಗೋಧಿ ಹಿಟ್ಟನ್ನು ಸ್ವಲ್ಪ ಸಿಂಪಡಿಸಿ ಅದರ ಮೇಲೆ 2 ರಿಂದ 3 ಡೇಟ್ಸ್ ಅನ್ನು ಕಟ್ ಮಾಡಿ ಹಾಕಿ ಫ್ರೀ ಹಿಟ್ ಆದ ಓವನ್‌ನಲ್ಲಿ ಕೇಕ್ ಅನ್ನು 180 ಡಿಗ್ರಿಯಲ್ಲಿ 35 ರಿಂದ 40 ನಿಮಿಷಗಳವರೆಗೆ ಬೇಕ್ ಮಾಡಿ. ಕೇಕ್ ತಯಾರಾದ ನಂತರ ಕೇಕ್ ಅನ್ನು ಡಿಮೌಲ್ಡ್ ಮಾಡಿ.
 
ಸೂಚನೆ : ಕುಕ್ಕರ್‌ನಲ್ಲಿ ಕೇಕ್ ಬೇಕ್ ಮಾಡುವುದಾದರೆ ಕುಕ್ಕರ್ ಅನ್ನು ಮೊದಲು ಗ್ಯಾಸ್ಕೆಟ್ ಮತ್ತು ವಿಸ್ಸೆಲ್ ತೆಗೆದು 5 ನಿಮಿಷ ಮೀಡಿಯಂ ಫ್ಲೇಮ್‌ನಲ್ಲಿ ಬಿಸಿ ಮಾಡಿ ನಂತರ ತಯಾರಿಸುವ ಕೇಕ್ ಮಿಶ್ರಣವನ್ನು ಕೇಕ್ ಮೌಲ್ಡ್‌ನಲ್ಲಿ ಹಾಕಿ. ನಂತರ ಬಿಸಿ ಮಾಡಿರುವ ಕುಕ್ಕರ್‌ದಲ್ಲಿ 1 ಕುಕ್ಕರ್ ಸ್ಟ್ಯಾಂಡ್ ಇಟ್ಟು ಅದರ ಮೇಲೆ ಕೇಕ್ ಮೌಲ್ಡ್ ಇಟ್ಟು ಕುಕ್ಕರ್ ಮುಚ್ಚಳ ಮುಚ್ಚಿ 50 ರಿಂದ 60 ನಿಮಿಷಗಳವರೆಗೆ ಇಟ್ಟು ಬೇಕ್ ಮಾಡಿ.... ಈಗ ರುಚಿ ರುಚಿಯಾದ ಬಾಳೆಹಣ್ಣಿನ ಕೇಕ್ ಸವಿಯಲು ಸಿದ್ಧ.

Share this Story:

Follow Webdunia kannada

ಮುಂದಿನ ಸುದ್ದಿ

ರುಚಿಯಾದ ತಾಳಿಪಟ್ಟು ಮಾಡಿ ಸವಿಯಿರಿ..