ಚಾಕೋಲೇಟ್ ಟೀ

Webdunia
ಮಂಗಳವಾರ, 9 ಅಕ್ಟೋಬರ್ 2018 (15:53 IST)
ಟೀ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲಿಯೂ ಜೋರಾದ ಮಳೆ ಬರುವಾಗ ಬಿಸಿ ಬಿಸಿ ಚಾ ಕುಡಿಯುವ ಮಜವೇ ಬೇರೆ. ಆದರೆ ದಿನವೂ ಒಂದೇ ರೀತಿಯ ಚಾ ಕುಡಿದು ಬೇಜಾರಾಗಿದ್ದರೆ ಚಾಕೋಲೇಟ್ ಟೀ ತಯಾರಿಸಿ ಸವಿಯಬಹುದು. ಈ ಟೀ ಮಕ್ಕಳಿಂದ ಹಿಡಿದು ದೊಡ್ಡವರ ತನಕವೂ ಇಷ್ಟವಾಗಬಹುದು. ಹಾಗಾದರೆ ಹೇಗೆ ತಯಾರಿಸುವುದು ಎಂದು ಹೇಳ್ತೀವಿ.. ನೀವೂ ಒಮ್ಮೆ ಟ್ರೈ ಮಾಡಿ ನೋಡಿ...
ತಯಾರಿಸಲು ಬೇಕಾಗುವ ಸಾಮಗ್ರಿಗಳು :
* ಹಾಲು 3/4 ಕಪ್
* ನೀರು 1/4 ಕಪ್
* ಸಕ್ಕರೆ 2 ಚಮಚ
* ಟೀ ಪೌಡರ್ 1 ಚಮಚ
* ಚಾಕೋಲೇಟ್ ಪೌಡರ್ 1/2 ಚಮಚ
 
ತಯಾರಿಸುವ ವಿಧಾನ :
 
ಮೊದಲು ಒಂದು ಪಾತ್ರೆಯಲ್ಲಿ ಹಾಲು ಮತ್ತು ನೀರನ್ನು ಹಾಕಿ ಅದರ ಜೊತೆಗೆ ಟೀ ಪೌಡರ್ ಅನ್ನು ಹಾಕಿ ಎರಡು ನಿಮಿಷ ಕುದಿಸಬೇಕು. ನಂತರ ಸಕ್ಕರೆ ಮತ್ತು ಚಾಕೋಲೇಟ್ ಪೌಡರ್ ಹಾಕಿ ಸಣ್ಣ ಉರಿಯಲ್ಲಿ ಎರಡು ನಿಮಿಷ ಕುದಿಸಬೇಕು. ನಂತರ ಕುದಿ ಬಂದ ಟೀಯನ್ನು ಗ್ಲಾಸ್‌ಗಳಲ್ಲಿ ಹಾಕಿದರೆ ರುಚಿಯಾದ ಚಾಕೋಲೇಟ್ ಟೀ ಸವಿಯಲು ಸಿದ್ಧ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ತಲೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ಆರೋಗ್ಯಕ್ಕೆ ಸಿಗುವ ಲಾಭವೇನು ಗೊತ್ತಾ

ಮನೆ ಸುತ್ತಮುತ್ತಾ ಸಿಗುವ ನುಗ್ಗೆ ಸೊಪ್ಪಿನ ಆರೋಗ್ಯ ಪ್ರಯೋಜನಗಳು ಇಲ್ಲಿದೆ

ಬೇಸಿಗೆಯಲ್ಲಿ ಚರ್ಮದಲ್ಲಿ ಬರುವ ಕೆಂಪು ಗುಳ್ಳೆಗೆ ಸಿಂಪಲ್, ಪರಿಣಾಮಕಾರೀ ಪರಿಹಾರಗಳು

ಒಂದು ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬಹುದು, ಹೆಚ್ಚು ಸೇವಿಸಿದರೆ ಏನಾಗುತ್ತದೆ

ಮುಟ್ಟು ಮುಂದೂಡುವುದು ಹೇಗೆ, ಏನು ತೊಂದರೆ ಇಲ್ಲಿದೆ ಟಿಪ್ಸ್

ಮುಂದಿನ ಸುದ್ದಿ
Show comments