Select Your Language

Notifications

webdunia
webdunia
webdunia
webdunia

ಬ್ರೆಡ್ ಸಮೋಸಾ

ಬ್ರೆಡ್ ಸಮೋಸಾ

ಅತಿಥಾ

ಬೆಂಗಳೂರು , ಶುಕ್ರವಾರ, 2 ಫೆಬ್ರವರಿ 2018 (19:24 IST)
ಬೇಕಾಗುವ ಸಾಮಗ್ರಿಗಳು -
2 ಚಮಚ ಎಣ್ಣೆ
1/2 ಚಮಚ ಜೀರಿಗೆ
1/2 ಚಮಚ ಬಡೆಸೊಪ್ಪು
2 ಹಸಿ ಮೆಣಸಿನಕಾಯಿ ಚಿಕ್ಕದಾಗಿ ಹೆಚ್ಚಿದ್ದು
1 ಚಮಚ ಕೊತ್ತಂಬರಿ ಬೀಜ
1 ಚಮಚ ಶುಂಠಿಯ ಪೇಸ್ಟ್
1 ಕಪ್ ಹಸಿರು ಬಟಾಣಿ (ಬೇಯಿಸಿದ್ದು)
1 1/2 ಚಮಚ ಉಪ್ಪು
1/2 ಚಮಚ ಖಾರ ಪುಡಿ
1 ಚಮಚ ಆಂಚೂರ್
1/2 ಚಮಚ ಗರಮ್ ಮಸಾಲಾ
2 ಆಲೂಗೆಡ್ಡೆ ಬೇಯಿಸಿದ್ದು
1/2 ಕಪ್ ಕೊತ್ತಂಬರಿ ಸೊಪ್ಪು
ಬ್ರೆಡ್
ಮಾಡುವ ವಿಧಾನ -
- ಒಂದು ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಜೀರಿಗೆ, ಬಡೆಸೊಪ್ಪು, ಹಸಿರು ಮೆಣಸಿನಕಾಯಿಗಳು, ಕೊತ್ತಂಬರಿ ಬೀಜಗಳು ಮತ್ತು ಶುಂಠಿ ಪೇಸ್ಟ್ ಹಾಕಿ ಚೆನ್ನಾಗಿ ಬೆರೆಸಿ.
- ಇದಕ್ಕೆ ಬೇಯಿಸಿದ ಹಸಿರು ಬಟಾಣಿ ಹಾಕಿ ಸ್ವಲ್ಪ ಸಮಯ ಬೇಯಿಸಿ.
- ಈಗ ಉಪ್ಪು, ಮೆಣಸಿನ ಪುಡಿ, ಆಮ್ಚೂರು ಮತ್ತು ಗರಂ ಮಸಾಲಾ ಹಾಕಿ ಚೆನ್ನಾಗಿ ಬೆರೆಸಿ.
- ಇದಕ್ಕೆ ಬೇಯಿಸಿ-ಹಿಸುಕಿದ ಆಲೂಗಡ್ಡೆ ಸೇರಿಸಿ ಮತ್ತು ಒಂದು ನಿಮಿಷ ಬೇಯಿಸಿ.
- ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಅದನ್ನು ತಣ್ಣಗಾಗಲು ಬಿಡಿ.
- ಈಗ ಒಂದು ಬ್ರೆಡ್ ತೆಗೆದುಕೊಂಡು ಲಟ್ಟಣಿಗೆ ಬಳಸಿ ತೆಳ್ಳಗೆ ಲಟ್ಟಿಸಿಕೊಳ್ಳಿ. (ಬ್ರೆಡ್ ತಾಜಾ ಆಗಿರಬೇಕು ಮತ್ತು ಫ್ರಿಜ್ ಒಳಗೆ ಇರಿಸಬಾರದು)
- ಸಣ್ಣ ವೃತ್ತಾಕಾರದ ಮುಚ್ಚಳವನ್ನು ತೆಗೆದುಕೊಂಡು ಬ್ರೆಡ್ ಅನ್ನು ವೃತ್ತಾಕಾರದಲ್ಲಿ ಕತ್ತರಿಸಿ.
- ದುಂಡಗಿನ ಬ್ರೆಡ್ ಅನ್ನು ಅರ್ಧಕ್ಕೆ ಕತ್ತರಿಸಿ.
- ಒಂದು ಭಾಗವನ್ನು ತೆಗೆದುಕೊಂಡು ಕೋನ್‌ ಆಕಾರಕ್ಕೆ ಮಾಡಿ.
- ಈಗ ಸ್ವಲ್ಪ ಆಲೂಗೆಡ್ಡೆ ಮಸಾಲವನ್ನು ಕೋನ್ ಒಳಗೆ ತುಂಬಿ ನಂತರ ನೀರನ್ನು ಬಳಸಿ ಅಂಚನ್ನು ಮುಚ್ಚಿ.
- ಕಂದು ಬಣ್ಣ ಬರುವ ತನಕ ಅದನ್ನು ಎಣ್ಣೆಯಲ್ಲಿ ಹುರಿಯಿರಿ.
- ಚಟ್ನಿ ಅಥವಾ ಟೊಮೆಟೊ ಕೆಚಪ್ ಜೊತೆಗೆ ಬಿಸಿಯಾಗಿ ಸೇವಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿಹಿಯಾದ ರುಚಿಯಾದ ಬಾಸುಂದಿಯನ್ನು ಮಾಡಿ ನೋಡಿ..