ಸುಸ್ಥಿರ ಆರೋಗ್ಯಕ್ಕೆ ಆಹಾರ ಪದ್ದತಿ ತುಂಬಾ ಮುಖ್ಯ. ಹಾಗೇ ನಮ್ಮ ಭಾರತೀಯ ಸಂಸ್ಕøತಿಯಲ್ಲಿ ರಾಗಿಗೆ ಪ್ರಧಾನ್ಯತೆ ಹೆಚ್ಚು.ಹಿಂದೆ ತಾತಾ ಮುತ್ತಾತನ ಕಾಲದಲ್ಲಿ ತುಂಬಾ ಗಟ್ಟಿಮುಟ್ಟು ಯಾಕೆಂದರೆ ಆ ಕಾಲದ ಆಹಾರ ಅಷ್ಟು ಆರೋಗ್ಯಕರವಾಗಿತ್ತು. ಹೆಚ್ಚಾಗಿ ರಾಗಿಯ ತಿನಿಸುಗಳನ್ನೇ ತಿನ್ನುತ್ತಿದ್ದರು. ಇತ್ತೀಚೆಗೆ ರಾಗಿ ಎಂದರೆ ಮೂಗು ಮುರಿಯುವ ಯುವ ಪೀಳಿಗೆಯನ್ನು ಗಟ್ಟಿಮುಟ್ಟಾಗಿಸಲು ತಾಯಂದಿರು ಅವರಿಗೆ ರುಚಿಕರವಾದ ತಿನಿಸುಗಳನ್ನು ಅವರಿಚ್ಛೆಯಂತೆ ಮಾಡಿಕೊಡುವುದು ವಾಡಿಕೆಯಾಗಿದೆ.