Webdunia - Bharat's app for daily news and videos

Install App

ಬಟಾಟೆ ಮತ್ತು ಪಾಲಾಕ್ ಕಟ್ಲೆಟ್..

Webdunia
ಗುರುವಾರ, 27 ಸೆಪ್ಟಂಬರ್ 2018 (15:56 IST)
ಸಂಜೆಯ ಸಮಯದಲ್ಲಿ ಟೀ ಅಥವಾ ಕಾಫೀ ಜೊತೆ ಏನಾದರೂ ಬಿಸಿ ಬಿಸಿಯಾದ ತಿಂಡಿಯಿದ್ದರೆ ಅದರ ಮಜವೇ ಬೇರೆ. ಆದರೆ ಅದರ ಜೊತೆ ಆರೋಗ್ಯಕ್ಕೂ ಉತ್ತಮವಾದ ಅಂಶಗಳಿದ್ದರೆ ಇನ್ನೂ ಒಳ್ಳೆಯದಲ್ಲವೇ.. ಬಟಾಟೆ ಪಾಲಾಕ್ ಕಟ್ಲೆಟ್‌ನಲ್ಲಿ ಪಾಲಾಕ್ ಬಳಸುವುದರಿಂದ ಇದು ನಿಮ್ಮ ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದು. ಚಿಕ್ಕ ಮಕ್ಕಳಿಗೆ ಸಾಯಂಕಾಲ ಶಾಲೆ ಬಿಟ್ಟು ಬಂದ ನಂತರ ನೀಡಲೂ ಸಹ ನೀವು ಇದನ್ನು ಮಾಡಬಹುದಾಗಿದೆ. ಬಟಾಟೆ ಹಾಗೂ ಪಾಲಾಕ್ ಕಟ್ಲೆಟ್ ಮಾಡುವ ವಿಧಾನಕ್ಕಾಗಿ ಇಲ್ಲಿ ನೋಡಿ.
ಬೇಕಾಗುವ ಸಾಮಗ್ರಿಗಳು:
ಹೆಚ್ಚಿದ ಪಾಲಾಕ್ - 1 ಕಪ್
ಬಟಾಟೆ - 2
ಕಡಲೆ ಹಿಟ್ಟು - 1/2 ಕಪ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ
ಹಸಿಮೆಣಸು - 1 - 2
ನಿಂಬೆ ರಸ - 1 ಚಮಚ
ಈರುಳ್ಳಿ - 1
ಎಣ್ಣೆ - ಸ್ವಲ್ಪ
ಅರಿಶಿಣ - 1/2 ಚಮಚ
ಅಚ್ಚಖಾರದ ಪುಡಿ - 1 ಚಮಚ
ಜೀರಿಗೆ ಪುಡಿ - 1 ಚಮಚ
ಗರಂ ಮಸಾಲಾ - 1 ಚಮಚ
ಉಪ್ಪು - ರುಚಿಗೆ
ಬಿಳಿ ಎಳ್ಳು - 1/4 ಕಪ್
 
ಮಾಡುವ ವಿಧಾನ:
ಒಂದು ಬೌಲ್‌ನಲ್ಲಿ ಹೆಚ್ಚಿದ ಪಾಲಾಕ್, ಬೇಯಿಸಿ ಸ್ಮ್ಯಾಶ್ ಮಾಡಿಕೊಂಡಿರುವ ಬಟಾಟೆ, ಹೆಚ್ಚಿದ ಹಸಿಮೆಣಸು ಮತ್ತು ಈರುಳ್ಳಿ, ನಿಂಬೆ ರಸ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲಾ ಜೀರಿಗೆ ಪುಡಿ, ಅಚ್ಚಖಾರದ ಪುಡಿ, ಅರಿಶಿಣ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕಡಲೆ ಹಿಟ್ಟನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
 
ಈಗ ಕೈಗೆ ಸ್ವಲ್ಪ ಎಣ್ಣೆಯನ್ನು ಸವರಿಕೊಂಡು ಅದನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ. ನಂತರ ಆ ಉಂಡೆಗಳನ್ನು ಸ್ವಲ್ಪ ತಟ್ಟಿ ಬಿಳಿ ಎಳ್ಳಿನಲ್ಲಿ ಹೊರಳಿಸಿ. ಒಂದು ಪ್ಯಾನ್‌ನಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ ಈಗಾಗಲೇ ತಟ್ಟಿ ಇಟ್ಟಿರುವ ಹಿಟ್ಟನ್ನು ಎಣ್ಣೆಯಲ್ಲಿ ಬಿಟ್ಟು ಮಧ್ಯಮ ಉರಿಯಲ್ಲಿ ಚೆನ್ನಾಗಿ ಹುರಿದರೆ ಬಟಾಟೆ ಮತ್ತು ಪಾಲಾಕ್ ಕಟ್ಲೆಟ್ ರೆಡಿಯಾಗುತ್ತದೆ. ಇದು ಟೊಮೆಟೋ ಸಾಸ್ ಜೊತೆಗೆ ತಿನ್ನಲು ರುಚಿಯಾಗಿರುತ್ತದೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

ಬಾಳೆಕಾಯಿ ಹಚ್ಚಿ ಕೈ ಕಪ್ಪಗಾಗಿದ್ದರೆ ಈ ಸಿಂಪಲ್ ಟ್ರಿಕ್ ಉಪಯೋಗಿಸಿ

ಮುಂದಿನ ಸುದ್ದಿ
Show comments