ಸ್ವಾದಿಷ್ಠಕರವಾದ ಅವಲಕ್ಕಿ ಪಾಯಸ

Webdunia
ಗುರುವಾರ, 25 ಜನವರಿ 2018 (12:38 IST)
ಬೇಕಾಗುವ ಪದಾರ್ಥಗಳು-
ಅವಲಕ್ಕಿ 1 ಕಪ್‌
ಹಾಲು 1 ಕಪ್‌
ಸಕ್ಕರೆ 1/2 ಕಪ್‌
ಗೋಡಂಬಿ, ಒಣ ದ್ರಾಕ್ಷಿ ಸ್ವಲ್ಪ
ತುಪ್ಪ 3 ಚಮಚ
ಏಲಕ್ಕಿ 1/4 ಚಮಚ
ಮಿಲ್ಕ್‌ ಮೇಡ್‌ 3 ಚಮಚ
ತಯಾರಿಸುವ ವಿಧಾನ : 
 
- ಬಾಣಲೆಯಲ್ಲಿ 1 ಚಮಚ ತುಪ್ಪ ಹಾಕಿ. ನಂತರ ಅವಲಕ್ಕಿ ಹಾಕಿ ಕಂದು ಬಣ್ಣ ಬರುವಂತೆ ಫ್ರೈ ಮಾಡಿ ನಂತರ ತೆಗೆಯಿರಿ.
- ಒಂದು ಬೌಲ್‌ನಲ್ಲಿ ಹಾಲು ಹಾಕಿ ಕುದಿ ಬರಿಸಿ. ಅದಕ್ಕೆ ಫ್ರೈ ಮಾಡಿದ ಅವಲಕ್ಕಿ ಹಾಕಿ ಸರಿಯಾಗಿ ಮಿಕ್ಸ್‌ ಮಾಡಿ.
- ಈ ಹಾಲಿಗೆ ಸಕ್ಕರೆ, ಮಿಲ್ಕ್‌ ಮೇಡ್‌ ಹಾಕಿ ಸರಿಯಾಗಿ ಕಲಸಿ. ಸಕ್ಕರೆ ಪೂರ್ತಿಯಾಗಿ ಕರಗುವಂತೆ ನೋಡಿ. ಅದಕ್ಕೆ ಏಲಕ್ಕಿ ಪುಡಿ ಹಾಕಿ ಕೆಳಗಿಳಿಸಿ.
- ನಂತರ ಗೋಡಂಬಿ ಮತ್ತು ದ್ರಾಕ್ಷಿಯನ್ನು ತುಪ್ಪದಲ್ಲಿ ಫ್ರೈ ಮಾಡಿ ಅದನ್ನು ಹಾಗೂ ಉಳಿದ ತುಪ್ಪವನ್ನು ಸಹ ಪಾಯಸಕ್ಕೆ ಹಾಕಿದರೆ ರುಚಿಕರ ಅವಲಕ್ಕಿ ಪಾಯಸ ಸಿದ್ದ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬೇಸಿಗೆಯ ಸಮಯದಲ್ಲಿ ಸೇವಿಸಲೇಬೇಕಾದ ಐದು ಹಣ್ಣುಗಳ ಮಾಹಿತಿ ಇಲ್ಲಿದೆ

ಬಿಸಿಲ ಧಗೆಗೆ ಪ್ರಿಡ್ಜ್ ನೀರು ಕುಡಿಯುತ್ತಿದ್ದೀರಾ, ಹಾಗಾದರೆ ಈ ಲೇಖನ ಓದಿ

ಬಿಸಿಲ ಧಗೆಗೆ ಹೆಚ್ಚು ಕಾಡುವ ಬೆವರು ಗುಳ್ಳೆಗೆ ಇಲ್ಲಿದೆ ಮನೆ ಮದ್ದು

ಇದೀಗ ಮದುವೆ ಸೀಸನ್‌, ಮೆಹೆಂದಿ ಕೆಪ್ಪಾಗಲು ಈ ಟ್ರಿಕ್ಸ್ ಬಳಸಿ

ವೇಗದ ಜಗತ್ತಿನಲ್ಲಿ ಒತ್ತಡ ನಿವಾರಣೆಗೆ ಇಲ್ಲಿದೆ ಕೆಲ ಟಿಪ್ಸ್‌

ಮುಂದಿನ ಸುದ್ದಿ
Show comments