Webdunia - Bharat's app for daily news and videos

Install App

ಆಲೂಗಡ್ಡೆ ಶೇಂಗಾ ಪುಡಿಯಿಂದ ಸ್ವಾದಿಷ್ಟವಾದ ಪರೋಟಾ..

Webdunia
ಮಂಗಳವಾರ, 26 ಮಾರ್ಚ್ 2019 (20:04 IST)
ತಯಾರಿಸಲು ಬೇಕಾಗುವ ಸಾಮಗ್ರಿಗಳು:
* ಆಲೂಗಡ್ಡೆ 1/2 ಕೆಜಿ
* ಗೋಧಿ ಹಿಟ್ಟು 1/2 ಕೆಜಿ
* ಶೇಂಗಾ ಬೀಜ ಅರ್ಧ ಬಟ್ಟಲು
* ಗರಂ ಮಸಾಲಾ 1 ಚಮಚ
* ಟೊಮೆಟೊ 2
* ಈರುಳ್ಳಿ 2
* ಹಸಿಮೆಣಸಿನಕಾಯಿ ಖಾರಕ್ಕೆ ತಕ್ಕಷ್ಟು
* ಅರಿಶಿನ ಪುಡಿ 1/2 ಚಮಚ
* ಜೀರಿಗೆ 2 ಚಮಚ
* ಕರಿಬೇವು ಮತ್ತು ಕೊತ್ತಂಬರಿ ಸಣ್ಣಗೆ ಹೆಚ್ಚಿದ್ದು
 
 ತಯಾರಿಸುವ ವಿಧಾನ:
 
  ಮೊದಲು ಆಲೂಗಡ್ಡೆಯನ್ನು ಬೇಯಿಸಿಕೊಳ್ಳಬೇಕು. ನಂತರ ಅದರ ಸಿಪ್ಪೆಯನ್ನು ತೆಗೆದು ಸ್ಮ್ಯಾಶ್ ಮಾಡಿಕೊಳ್ಳಬೇಕು. ನಂತರ ಈರುಳ್ಳಿ, ಟೊಮೆಟೊವನ್ನು ಸಣ್ಣಗೆ ಹೆಚ್ಚಿಕೊಂಡು ಮೆಣಸಿನಕಾಯಿಯ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಶೇಂಗಾವನ್ನು ಹುರಿದು ಬೇಳೆ ಮಾಡಿಕೊಂಡು ತರಿ ತರಿಯಾಗಿ ಪುಡಿ ಮಾಡಿಕೊಳ್ಳಬೇಕು. ನಂತರ ಬಾಣಲೆಯನ್ನು ತೆಗೆದುಕೊಂಡು 4 ಚಮಚ ಎಣ್ಣೆಯನ್ನು ಹಾಕಿ ಜೀರಿಗೆ, ಸಾಸಿವೆ, ಕರಿಬೇವು, ಕೊತ್ತಂಬರಿ ಸೊಪ್ಪು, ಈರುಳ್ಳಿ, ಟೊಮೆಟೊವನ್ನು ಹಾಕಿ ಬಾಡಿಸಿಕೊಳ್ಳಬೇಕು ನಂತರ ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸಿನಕಾಯಿ ಪೇಸ್ಟ್, ಗರಂ ಮಸಾಲಾ ಪುಡಿಯನ್ನು ಹಾಕಿ ನಂತರ ಸ್ಮ್ಯಾಶ್ ಮಾಡಿಟ್ಟುಕೊಂಡ ಅಲೂಗಡ್ಡೆ ಶೇಂಗಾ ಪುಡಿಯನ್ನು ಹಾಕಿ ಚೆನ್ನಾಗಿ ಕಲೆಸಿಕೊಳ್ಳಬೇಕು.
 
ನಂತರ ಗೋಧಿ ಹಿಟ್ಟಿಗೆ 2 ಚಮಚ ಎಣ್ಣೆ, ಚಿಟಿಕೆ ಉಪ್ಪು, ಅರ್ಧ ಚಮಚ ಸಕ್ಕರೆಯನ್ನು ಹಾಕಿ ಚಪಾತಿ ಹಿಟ್ಟಿಗಿಂತ ಸ್ವಲ್ಪ ಮೆತ್ತಗೆ ಕಲೆಸಿಕೊಳ್ಳಬೇಕು. ನಂತರ ಅರ್ಧ ಗಂಟೆಯ ನಂತರ ಪರೋಟಾವನ್ನು ಲಟ್ಟಿಸಿಕೊಳ್ಳಬೇಕು. ಈ ಪರೋಟಾವನ್ನು ಬಿಸಿ ಇದ್ದರೆ ತುಪ್ಪ ಹಾಕಿಕೊಂಡು ಮತ್ತು ತಣ್ಣಗಾದರೆ ಮೊಸರನ್ನು ಹಾಕಿಕೊಂಡು ತಿಂದರೆ ರುಚಿಯಾಗಿರುತ್ತದೆ.  

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments