Select Your Language

Notifications

webdunia
webdunia
webdunia
webdunia

ಪುಂಡಿ ಅಥವಾ ಅಕ್ಕಿ ತರಿಯ ಕಡುಬು...

ಪುಂಡಿ ಅಥವಾ ಅಕ್ಕಿ ತರಿಯ ಕಡುಬು...
ಬೆಂಗಳೂರು , ಗುರುವಾರ, 14 ಮಾರ್ಚ್ 2019 (15:46 IST)
ನೀವು ಮುಂಜಾನೆಯ ದಿಢೀರ್ ಉಪಹಾರಕ್ಕಾಗಿ ನೋಡುತ್ತಿದ್ದರೆ ಈ ಪುಂಡಿ ಅಥವಾ ಅಕ್ಕಿ ತರಿಯ ಕಡುಬು ಸರಿಯಾದುದಾಗಿದೆ. ಇದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಾದುದಾಗಿದೆ. ದಕ್ಷಿಣ ಕನ್ನಡದ ಕಡೆ ಇದು ಪುಂಡಿ ಎಂದು ಪ್ರಚಲಿತದಲ್ಲಿದ್ದು ಕರ್ನಾಟಕದ ಇತರೆಡೆ ಅಕ್ಕಿ ತರಿಯ ಕಡುಬು ಎನ್ನುತ್ತಾರೆ.
ಬೇಕಾಗುವ ಸಾಮಗ್ರಿಗಳು:
ಎಣ್ಣೆ - ಸ್ವಲ್ಪ
ಸಾಸಿವೆ - 1/2 ಚಮಚ
ಉದ್ದಿನ ಬೇಳೆ - 1 ಚಮಚ
ಜೀರಿಗೆ - 1 ಚಮಚ
ಕಡಲೆ ಬೇಳೆ - 1 ಚಮಚ
ಹೆಚ್ಚಿದ ಕರಿಬೇವು - 2 ಚಮಚ
ಉಪ್ಪು - ರುಚಿಗೆ
ಕಾಯಿತುರಿ - 1/2 ಕಪ್
ಅಕ್ಕಿ ರವೆ - 1 ಕಪ್
 
ಮಾಡುವ ವಿಧಾನ:
 
ಒಂದು ಬಾಣಲೆಗೆ 2-3 ಚಮಚ ಎಣ್ಣೆಯನ್ನು ಹಾಕಿ ಸ್ವಲ್ಪ ಬಿಸಿಯಾದ ನಂತರ ಸಾಸಿವೆ, ಉದ್ದಿನಬೇಳೆ, ಜೀರಿಗೆ, ಕಡಲೆ ಬೇಳೆ ಮತ್ತು ಹೆಚ್ಚಿದ ಕರಿಬೇವನ್ನು ಹಾಕಿ ಬೇಳೆಗಳು ಕೆಂಪಾಗುವವರೆಗೆ ಹುರಿಯಿರಿ. ನಂತರ ಇದಕ್ಕೆ 2 ಕಪ್ ನೀರನ್ನು ಹಾಕಿ. ಸ್ವಲ್ಪ ಕುದಿದ ನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕಾಯಿ ತುರಿಯನ್ನು ಹಾಕಿ ಚೆನ್ನಾಗಿ ಕುದಿಸಿ. ಈಗ ಇದಕ್ಕೆ ಅಕ್ಕಿ ತರಿಯನ್ನು ಬೆರೆಸಿ ನೀರು ಆರುವವರೆಗೆ ಚೆನ್ನಾಗಿ ಮಿಕ್ಸ್ ಮಾಡುತ್ತಿರಿ. ನಂತರ ಸ್ಟೌ ಆಫ್ ಮಾಡಿ ಈ ಮಿಶ್ರಣವು ಸ್ವಲ್ಪ ತಣ್ಣಗಾದ ನಂತರ ಮಧ್ಯಮ ಗಾತ್ರದ ಉಂಡೆಗಳನ್ನಾಗಿ ಮಾಡಿ ಉಗಿಯಲ್ಲಿ ಬೇಯಿಸಿಕೊಂಡರೆ ಪುಂಡಿ ಅಥವಾ ಅಕ್ಕಿ ತರಿಯ ಕಡುಬು ಸವಿಯಲು ಸಿದ್ದವಾಗುತ್ತದೆ. ಇದು ಖಾರವಾದ ಚಟ್ನಿ ಮತ್ತು ಸಾಂಬಾರ್ ಜೊತೆ ರುಚಿಯಾಗಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್‌ಸ್ಟಂಟ್ ಬೆಣ್ಣೆ ಚಕ್ಕುಲಿ