ಬೇಕಾಗುವ ಸಾಮಗ್ರಿಗಳು- ಗೋಧಿ ಹಿಟ್ಟು - 300 ಗ್ರಾಂ ಅಜವಾನ/ಓಮ ಕಾಳು - 1/2 ಚಮಚ ಉಪ್ಪು - 1/2 ಚಮಚ ನೀರು - 200 ಮಿಲಿಲೀಟರ್ ತುಪ್ಪ ಖಾರ ಪುಡಿ - ರುಚಿಗೆ ಚಟ್ ಮಸಾಲಾ - ರುಚಿಗೆ ಮಾಡುವ ವಿಧಾನ - ಒಂದು ಬಟ್ಟಲಿನಲ್ಲಿ, 300 ಗ್ರಾಂ ಗೋಧಿ ಹಿಟ್ಟು, 1/2 ಚಮಚ ಅಜವಾನ/ಓಮ ಕಾಳು, ಉಪ್ಪು, 200 ಮಿಲಿಲೀಟರ್ ನೀರು ಸೇರಿಸಿ ಮೃದುವಾಗಿ ಹಿಟ್ಟನ್ನು ಕಲಸಿ 10 ನಿಮಿಷಗಳ ಕಾಲ ಪಕ್ಕಕ್ಕಿರಿಸಿ - ಸಣ್ಣ ಹಿಟ್ಟಿನ ಉಂಡೆ ಮಾಡಿ ಚಪಾತಿ ರೀತಿಯಲ್ಲಿ ಲಟ್ಟಿಸಿ - ಲಟ್ಟಿಸಿದ ಚಪಾತಿ ಮೇಲೆ ತುಪ್ಪ ಸವರಿ, ಖಾರ ಪುಡಿ, ಚಟ್ ಮಸಾಲಾ ಉದುರಿಸಿ ರೋಟಿಯನ್ನು ರೋಲ್ ಮಾಡಿ. - ಮತ್ತೆ ಲಟ್ಟಿಸಿ ತವಾದ ಮೇಲೆ ಹಾಕಿ ಎರಡು ಬದಿಯಲ್ಲಿ ಚೆನ್ನಾಗಿ ತುಪ್ಪ ಸವರಿ, ಹುರಿಯಿರಿ. ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.