Select Your Language

Notifications

webdunia
webdunia
webdunia
webdunia

'ಗಾರ್ಲಿಕ್ ಚೀಸ್ ಟೋಸ್ಟ್' ಮತ್ತು 'ದಹಿ ಸ್ಯಾಂಡ್‌ವಿಚ್' ಮಾಡಿ ನೋಡಿ..!!

'ಗಾರ್ಲಿಕ್ ಚೀಸ್ ಟೋಸ್ಟ್' ಮತ್ತು 'ದಹಿ ಸ್ಯಾಂಡ್‌ವಿಚ್' ಮಾಡಿ ನೋಡಿ..!!

ನಾಗಶ್ರೀ ಭಟ್

ಬೆಂಗಳೂರು , ಶುಕ್ರವಾರ, 2 ಫೆಬ್ರವರಿ 2018 (16:12 IST)
ಕೆಲಸಕ್ಕೆ ಹೋಗುತ್ತಿರುವವರು, ಶಾಲೆ ಕಾಲೇಜುಗಳಿಗೆ ಹೋಗುತ್ತಿರುವವರು ಕೆಲಸವನ್ನು ಮುಗಿಸಿ ಮನೆಗೆ ಹಿಂತಿರುಗಿದಾಗ ಏನಾದರೂ ಲಘುವಾದ ತಿಂಡಿಯನ್ನು ತಿನ್ನಬೇಕು ಎಂದೆನಿಸಿದರೆ 'ಗಾರ್ಲಿಕ್ ಚೀಸ್ ಟೋಸ್ಟ್' ಮತ್ತು 'ದಹಿ ಸ್ಯಾಂಡ್‌ವಿಚ್' ಮಾಡಿ ನೋಡಬಹುದು. ಅತ್ಯಂತ ಸರಳವಾಗಿ ಮತ್ತು ವೇಗವಾಗಿ ತಯಾರಿಸಿಕೊಳ್ಳಬಹುದಾದ ಆಧುನಿಕ ತಿಂಡಿ ಇದಾಗಿದೆ. ಚಿಕ್ಕ ಮಕ್ಕಳು ಶಾಲೆ ಮುಗಿಸಿ ಸಾಯಂಕಾಲ ಮನೆಗೆ ಬಂದಾಗ ನೀವು ಇದನ್ನು ಮಾಡಿ ಕೊಡಬಹುದು. 'ಗಾರ್ಲಿಕ್ ಚೀಸ್ ಟೋಸ್ಟ್' ಮತ್ತು 'ದಹಿ ಸ್ಯಾಂಡ್‌ವಿಚ್' ಹೇಗೆ ಮಾಡುವುದು ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಈ ಲೇಖನವನ್ನು ಓದಿ.
 
1. ಗಾರ್ಲಿಕ್ ಚೀಸ್ ಟೋಸ್ಟ್
ಬೇಕಾಗುವ ಸಾಮಗ್ರಿಗಳು:
 
ಬ್ರೆಡ್ ಸ್ಲೈಸ್ - 4
ಬೆಣ್ಣೆ - 2-3 ಚಮಚ
ಮೊಸಿಲ್ಲಾ ಚೀಸ್ - 1/4 ಕಪ್
ಬೆಳ್ಳುಳ್ಳಿ - 5-6
ಕಾಳುಮೆಣಸು ಪುಡಿ - 1 ಚಮಚ
ಮಿಕ್ಸಡ್ ಹರ್ಬ್ಸ್ - 1/2 ಚಮಚ
ಕೊತ್ತಂಬರಿ ಸೊಪ್ಪು - ಸ್ವಲ್ಪ
 
ಮಾಡುವ ವಿಧಾನ:
 
* ಬೆಳ್ಳುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ.
 
* ಬೆಣ್ಣೆ, ಮೊಸಿಲ್ಲಾ ಚೀಸ್, ಹೆಚ್ಚಿದ ಬೆಳ್ಳುಳ್ಳಿ, ಕಾಳುಮೆಣಸಿನ ಪುಡಿ, ಮಿಕ್ಸಡ್ ಹರ್ಬ್ಸ್ ಮತ್ತು ಹೆಚ್ಚಿದ ಕೊತ್ತಂಬರಿಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
 
* ಬ್ರೆಡ್ ಸ್ಲೈಸ್‌ಗಳ ಮೇಲೆ ಈ ಮಿಶ್ರಣವನ್ನು ಹಾಕಿ ಚೆನ್ನಾಗಿ ಹರಡಿಕೊಳ್ಳಿ.
 
* ಒಂದು ಪ್ಯಾನ್ ತೆಗೆದುಕೊಂಡು ಅದರ ಮೇಲೆ ಬೆಣ್ಣೆಯನ್ನು ಹಾಕಿ ಅದು ಕರಗುತ್ತಾ ಬಂದಾಗ ಬ್ರೆಡ್ ಸ್ಲೈಸ್ ಅನ್ನು ಇಟ್ಟು ಮುಚ್ಚಳವನ್ನು ಮುಚ್ಚಿ 3-4 ನಿಮಿಷ ಚಿಕ್ಕ ಉರಿಯಲ್ಲಿ ರೋಸ್ಟ್ ಮಾಡಿದರೆ ಗಾರ್ಲಿಕ್ ಚೀಸ್ ಟೋಸ್ಟ್ ರೆಡಿಯಾಗುತ್ತದೆ.* ಇದನ್ನು ಕಟ್ ಮಾಡಿಕೊಂಡು ಟೊಮೆಟೋ ಸಾಸ್‌ನೊಂದಿಗೆ ತಿಂದರೆ ರುಚಿಯಾಗಿರುತ್ತದೆ.
 
2. ದಹಿ ಸ್ಯಾಂಡ್‌ವಿಚ್:
webdunia
ಬೇಕಾಗುವ ಸಾಮಗ್ರಿಗಳು:
 
ಬ್ರೆಡ್ ಸ್ಲೈಸ್ - 4
ಮೊಸರು - 2 ಕಪ್
ಮಯೊನೀಸ್ - 1/4 ಕಪ್
ತುರಿದ ಕ್ಯಾರೆಟ್ - 2-3 ಚಮಚ
ಹೆಚ್ಚಿದ ಕ್ಯಾಬೆಜ್ - 2-3 ಚಮಚ
ಹೆಚ್ಚಿದ ಕ್ಯಾಪ್ಸಿಕಮ್ - 2-3 ಚಮಚ
ಬೇಯಿಸಿದ ಕಾರ್ನ್ - 2-3 ಚಮಚ
ಮೆಣಸಿನಕಾಳು ಪುಡಿ - 1 ಚಮಚ
ಉಪ್ಪು - 1/2 ಚಮಚ
 
ಮಾಡುವ ವಿಧಾನ:
 
* ಮೊಸರನ್ನು ಒಂದು ತೆಳುವಾದ ಕಾಟನ್ ಬಟ್ಟೆಯಲ್ಲಿ ಹಾಕಿ ಕಟ್ಟಿ 2 ಗಂಟೆ ಅದನ್ನು ಮೇಲೆ ಕಟ್ಟಿಡಿ.
 
* ಹೀಗೆ ನೀರನ್ನು ಬೇರ್ಪಡಿಸಿದ ಮೊಸರನ್ನು ಒಂದು ಬೌಲ್‌ಗೆ ಹಾಕಿ ಅದಕ್ಕೆ ಮಯೊನೀಸ್ ಅನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಅದಕ್ಕೆ ತುರಿದ ಕ್ಯಾರೆಟ್, ಚಿಕ್ಕದಾಗಿ ಹೆಚ್ಚಿದ ಕ್ಯಾಬೆಜ್, ಕ್ಯಾಪ್ಸಿಕಮ್, ಬೇಯಿಸಿದ ಕಾರ್ನ್, ಮೆಣಸಿನಕಾಳು ಪುಡಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
 
* ಎರಡು ಬ್ರೆಡ್‌ಗಳನ್ನು ತೆಗೆದುಕೊಂಡು ಅದರ ಅಂಚುಗಳನ್ನು ಕಟ್ ಮಾಡಿ ಬೇರ್ಪಡಿಸಿಕೊಳ್ಳಿ. ನಂತರ ಒಂದು ಬ್ರೆಡ್ ಸ್ಲೈಸ್ ಮೇಲೆ ಈ ಮೊದಲೇ ತಯಾರಿಸಿಟ್ಟುಕೊಂಡ ಮಿಶ್ರಣವನ್ನು ಹಾಕಿ ಸರಿಯಾಗಿ ಹರಡಿ ಅದರ ಮೇಲೆ ಇನ್ನೊಂದು ಬ್ರೆಡ್ ಸ್ಲೈಸ್ ಇಟ್ಟು ಕಟ್ ಮಾಡಿಕೊಂಡರೆ ದಹಿ ಸ್ಯಾಂಡ್‌ವಿಚ್ ರೆಡಿ.
 
ಹೀಗೆ ಶೀಘ್ರವಾಗಿ, ಸರಳವಾಗಿ ಮತ್ತು ಸುಲಭವಾಗಿ ಮಾಡಿಕೊಳ್ಳಬಹುದಾದ 'ದಹಿ ಸ್ಯಾಂಡ್‌ವಿಚ್' ಮತ್ತು 'ಗಾರ್ಲಿಕ್ ಚೀಸ್ ಟೋಸ್ಟ್' ಅನ್ನು ನೀವೂ ಒಮ್ಮೆ ಮಾಡಿ ನೋಡಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕೆಂಪು ರಕ್ತಕಣಗಳನ್ನು ಹೆಚ್ಚಿಸಲು ಮನೆಯಲ್ಲಿಯೇ ಮಾಡಬಹುದಾದ ಅದ್ಭುತ ಟಾನಿಕ್‌