Select Your Language

Notifications

webdunia
webdunia
webdunia
webdunia

ವಿವಾದದ ಬಳಿಕ ಕೊನೆಗೂ ಮನು ಭಾಕರ್ ಹೆಸರು ಖೇಲ್ ರತ್ನ ಅವಾರ್ಡ್ ಗೆ ಸೇರ್ಪಡೆ

Manu Bhaker

Krishnaveni K

ನವದೆಹಲಿ , ಬುಧವಾರ, 25 ಡಿಸೆಂಬರ್ 2024 (10:52 IST)
ನವದೆಹಲಿ: ವಿವಾದದ ಬಳಿಕ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ಕೊನೆಗೂ ಖೇಲ್ ರತ್ನ ಅವಾರ್ಡ್ ಗೆ ಒಲಿಂಪಿಕ್ಸ್ ಪದಕ ವಿಜೇತೆ ಶೂಟರ್ ಮನು ಭಾಕರ್ ಹೆಸರು ಸೇರ್ಪಡೆಗೊಳಿಸಿದೆ.

ಈ ಮೊದಲು ಮನು ಭಾಕರ್ ಹೆಸರು ಕೈ ಬಿಟ್ಟಿದ್ದು ಭಾರೀ ವಿವಾದಕ್ಕೆ ಒಳಗಾಗಿತ್ತು. ಮನು ಭಾಕರ್ ಅರ್ಜಿ ಸಲ್ಲಿಸಿಲ್ಲ ಎಂದು ಕ್ರೀಡಾ ಸಮಿತಿ ಹೇಳಿದರೆ ಇತ್ತ ಮನು ಭಾಕರ್ ತಂದೆ ಆಕೆ ಅರ್ಜಿ ಸಲ್ಲಿಸಿದ್ದಳು ಎಂದಿದ್ದರು. ದೇಶಕ್ಕಾಗಿ ಎರಡು ಪದಕ ಗೆದ್ದ ಮೇಲೂ ಪ್ರಶಸ್ತಿಗಾಗಿ ಭಿಕ್ಷೆ ಬೇಡಬೇಕೇ? ಎಂದು ಬೇಸರ ವ್ಯಕ್ತಪಡಿಸಿದ್ದರು.

ಅಲ್ಲದೆ ಮನು ಭಾಕರ್ ಕೂಡಾ ಬೇಸರಗೊಂಡಿದ್ದರು. ನಾನು ಒಲಿಂಪಿಕ್ಸ್ ಪದಕ ಗೆದ್ದಿದ್ದೇ ವ್ಯರ್ಥ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಅವರ ತಂದೆ ಹೇಳಿಕೊಂಡಿದ್ದರು. ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲೂ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು.

ಇದರ ಬೆನ್ನಲ್ಲೇ ಈಗ ಮನು ಭಾಕರ್ ಹೆಸರು ಸೇರ್ಪಡೆಗೊಳಿಸಲು ಸ್ವತಃ ಕ್ರೀಡಾ ಸಚಿವ ಮನುಸುಖ್ ಮಾಂಡವಿಯಾ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಕೊನೆಯ ಕ್ಷಣದಲ್ಲಿ ಹಾಕಿ ನಾಯಕ ಹರ್ಮನ್ ಪ್ರೀತ್ ಸಿಂಗ್, ಪ್ಯಾರಾ ಅಥ್ಲೆಟ್ ಪ್ರವೀಣ್ ಕುಮಾರ್ ಜೊತೆಗೆ ಮನು ಭಾಕರ್ ಹೆಸರೂ ಸೇರ್ಪಡೆಗೊಂಡಿದೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಬರಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಾಂಪಿಯನ್ಸ್ ಟ್ರೋಫಿಯ ವೇಳಾಪಟ್ಟಿ ಘೋಷಣೆ; ಫೆ.23ಕ್ಕೆ ಭಾರತ-ಪಾಕ್‌ ಹೈವೋಲ್ಟೇಜ್‌ ಹಣಾಹಣಿ