ಮರೆಯಲಾಗದ ರುಚಿ ಚಿಕನ್ ಲಿವರ್ ಡ್ರೈ

Webdunia
ಸೋಮವಾರ, 20 ಡಿಸೆಂಬರ್ 2021 (12:17 IST)
ಅಡುಗೆಯಲ್ಲಿ, ವಿಶೇಷವಾಗಿ ಮಾಡುವ  ಅಡುಗೆ ಮಾಂಸದ ಅಡುಗೆಯಾಗಿದೆ. ನಾವು ಅಡುಗೆ ಮಾಡಲು ಬಳಸುವ ಪದಾರ್ಥಗಳು ಹಿಡಿತದಲ್ಲಿದ್ದಾಗ ಮಾತ್ರ ಅಡುಗೆ ರುಚಿಯಾಗಿ ಆಗುತ್ತದೆ.

ನಾವು ಇಂದು ಖಾರವಾದ ಅಡುಗೆ ತಿನ್ನಲು ಬಯಸುವವರಿಗಾಗಿ ರುಚಿಯಾದ ಖಾರವಾದ ಚಿಕನ್ ಲಿವರ್ ಡ್ರೈ ಮಾಡುವ ವಿಧಾನ ಹೇಳುತ್ತಿದ್ದೇವೆ

ಬೇಕಾಗುವ ಸಾಮಗ್ರಿಗಳು
* ಚಿಕನ್ ಲಿವರ್- ಅರ್ಧ ಕೆಜಿ
* ಈರುಳ್ಳಿ-3
* ಟೊಮೆಟೊ- 1
* ಹಸಿಮೆಣಸಿನಕಾಯಿ -4
* ಕರಿಬೇವು – ಸ್ವಲ್ಪ,
* ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
* ಕಾಳುಮೆಣಸಿನಪುಡಿ – 1 ಚಮಚ,
* ಕೆಂಪು ಮೆಣಸಿನಕಾಯಿಪುಡಿ -1 ಚಮಚ
* ದನಿಯಾ ಪುಡಿ- 1 ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ಅರಿಸಿಣ- ಸ್ವಲ್ಪ
* ಕೊತ್ತಂಬರಿ ಸೊಪ್ಪು – ಸ್ವಲ್ಪ
* ಅಡುಗೆ ಎಣ್ಣೆ- ಅರ್ಧ ಕಪ್

ಮಾಡುವ ವಿಧಾನ
* ಒಂದು ಬಾಣಲೆಯನ್ನು ಬಿಸಿಗಿಟ್ಟು, ಅಡುಗೆ ಎಣ್ಣೆ ಹಾಕಿ ಅದಕ್ಕೆ ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ, ಕರಿಬೇವು ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ.

* ನಂತರ ಚಿಕನ್ ಲಿವರ್ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು, ಅರಿಸಿಣ, ಕೆಂಪುಮೆಣಸಿನ ಪುಡಿ, ಕೊತ್ತಂಬರಿ ಪುಡಿ ಹಾಕಿ ಚಿಕನ್ ಲಿವರ್ ಅನ್ನು ಬೇಯಿಸಿಕೊಳ್ಳಿ.

* ನೀರು ಸೇರಿಸುವ ಅವಶ್ಯಕತೆ ಇಲ್ಲ. ಲಿವರ್ ಬೆಂದ ನಂತರ ಕಾಳುಮೆಣಸಿನ ಪುಡಿ, ಗರಂಮಸಾಲೆ ಸೇರಿಸಿ ಮತ್ತೆ ಬೇಯಿಸಿ ಕೊನೆಯದಾಗಿ ಕೊತ್ತಂಬರಿಯನ್ನು ಹಾಕಿದರೆ ಚಿಕನ್ ಲಿವರ್ ಡ್ರೈ ಸಿದ್ಧವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣಿನ ಜ್ಯೂಸ್ ಕುಡಿಯಿರಿ, ತಿಂಗಳಲ್ಲೇ ಮ್ಯಾಜಿಕ್ ನೋಡಿ

ವಾರಕ್ಕೆ ಎಷ್ಟು ಮದ್ಯ ಸೇವನೆ ಮಾಡಿದರೆ ಆರೋಗ್ಯ ಸುರಕ್ಷಿತ

ನೆಲ್ಲಿಕಾಯಿಯನ್ನು ತಿನ್ನುವುದರಿಂದ ಆರೋಗ್ಯಕ್ಕೆ ಏನ್ ಪ್ರಯೋಜನ ಗೊತ್ತಾ

ಮುಟ್ಟಿನ ದಿನ ಮಹಿಳೆಯರು ಹೆಚ್ಚು ನೀರು ಕುಡಿಯಬೇಕೇ, ಇಲ್ಲಿದೆ ಟಿಪ್ಸ್

ಈ ಆಹಾರ ಕ್ರಮ ಅನುಸರಿಸಿದರೆ ಬಿಪಿ ಸಮತೋಲನದಲ್ಲಿಡಲು ಸಹಕಾರಿ

ಮುಂದಿನ ಸುದ್ದಿ
Show comments