Daily Horoscope

Select Your Language

Notifications

webdunia
webdunia
webdunia
webdunia

ಖಾರವಾದ ಚಿಕನ್ ಮಂಚೂರಿಯನ್

ಮಾಂಸಾಹಾರ
ಮಾಂಸಾಹಾರ ಪ್ರಿಯರಿಗೆ ಸವಿಯಲು ಬಗೆ ಬಗೆಯ ರುಚಿಕರ ಖಾದ್ಯಗಳಿವೆ. ನಾನ್ವೆಜ್ ಅಡುಗೆಯಲ್ಲಿ ಬಗೆ ಬಗೆಯ ತಿನಿಸುಗಳಿವೆ.
ಚಿಕನ್ ಮಂಚೂರಿಯನ್  ಸರಳವಾಗಿ ಮಾಡುವ ಅಡುಗೆಯಲ್ಲಿ ಒಂದಾಗಿದೆ. ಈ ಅಡುಗೆಗೆ ಹೆಚ್ಚಿನ ಸಮಯ, ಪರಿಶ್ರಮವೂ ಅಗತ್ಯವಿಲ್ಲ. ಅಡುಗೆಯಲ್ಲಿ ಹೊಸ ಪ್ರಯತ್ನ ಮಾಡುವವರಿಗೂ ಇದು ಕಷ್ಟವೆನಿಸುವುದಿಲ್ಲ. ಈ ವಿಧಾನವನ್ನು ಅನುಸರಿಸಿ ಮನೆಯಲ್ಲೇ ಚಿಕನ್ ಮಂಚೂರಿಯನ್ ಮಾಡಿ, ಅದರ ರುಚಿ ಸವಿದು ಎಂಜಾಯ್ ಮಾಡಿ.
ಬೇಕಾಗುವ ಸಾಮಗ್ರಿಗಳು
* ಕೋಳಿ ಮಾಂಸ (ಮೂಳೆ ಇಲ್ಲದ್ದು) – 1/2 ಕೆಜಿ
* ಕಾರ್ನ್ ಫ್ಲೋರ್ – 1 ಕಪ್ *ಮೊಟ್ಟೆಗಳು – 2
* ಹಸಿ ಮೆಣಸಿನ ಕಾಯಿ -4
* ಸೋಯಾ ಸಾಸ್ – 3 ಚಮಚ
* ಟೊಮೆಟೋ ಸಾಸ್ – 2 ಚಮಚ
* ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
* ಬೆಳ್ಳುಳ್ಳಿ – 4 ತುಂಡು
* ಶುಂಠಿ – ಸ್ವಲ್ಪ
* ದಪ್ಪ ಮೆಣಸಿನಕಾಯಿ –
* ಅಡುಗೆಎಣ್ಣೆ – 1 ಕಪ್
* ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
* ಒಂದು ಪಾತ್ರೆಯಲ್ಲಿ ಕಾರ್ನ್ ಫ್ಲೋರ್, ಮೊಟ್ಟೆ,  ಹಸಿ ಮೆಣಸಿನ ಕಾಯಿ, ಉಪ್ಪು ಮತ್ತು ಶುಂಠಿ ಬೆಳ್ಳುಳ್ಳಿಗಳ ಪೇಸ್ಟನ್ನು ಹಾಕಿ ಅದಕ್ಕೆ 1/2 ಲೋಟ ಬಿಸಿ ನೀರನ್ನು ಬೆರೆಸಿ ಚೆನ್ನಾಗಿ ಕಲೆಸಿಕೊಳ್ಳಬೇಕು. 
* ಮತ್ತೊಂದು ಪಾತ್ರೆಯಲ್ಲಿ ಅಡುಗೆ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಕೋಳಿ ಮಾಂಸದ ತುಂಡುಗಳನ್ನು ಈ ಮೊದಲು ತಯಾರಿಸಿದ ಮಿಶ್ರಣದಲ್ಲಿ ಚೆನ್ನಾಗಿ ನೆನೆಸಿ ಎಣ್ಣೆಯಲ್ಲಿ ಅವುಗಳನ್ನು ಬಿಡಿ. ಈಗ ಕೋಳಿ ಮಾಂಸದ ತುಂಡುಗಳನ್ನು ಡೀಪ್ ಫ್ರೈ ಮಾಡಿ. 
* ತದನಂತರ ಅಡುಗೆ ಎಣ್ಣೆಯನ್ನು ಒಂದು ಪಾತ್ರೆಯಲ್ಲಿ ಹಾಕಿಕೊಂಡು ಬಿಸಿಯಾಗಲು ಬಿಡಿ, ಇದರ ಮೇಲೆ ಶುಂಠಿ ಮತ್ತು ಬೆಳ್ಳುಳ್ಳಿ, ಹಸಿ ಮೆಣಸಿನ ಕಾಯಿ, ಸೋಯಾ ಸಾಸ್, ಟೊಮೆಟೋ ಸಾಸ್, 1 ಕಪ್ ನೀರು ಹಾಕಿ ಮತ್ತು ನಂತರ ಫ್ರೈ ಮಾಡಿದ ಕೋಳಿ ಮಾಂಸದ ತುಂಡುಗಳನ್ನು ಪಾತ್ರೆಗೆ ಹಾಕಿ ಚೆನ್ನಾಗಿ ಫ್ರೈ ಮಾಡಿದರೆ ರುಚಿಯಾದ ಚಿಕನ್ ಮಂಚೂರಿ ಸವಿಯಲು ಸಿದ್ಧವಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಚಳಿಗಾಲದಲ್ಲಿ ಮೀನು ತಿನ್ನುವುದರಿಂದ ಪ್ರಯೋಜನ