Select Your Language

Notifications

webdunia
webdunia
webdunia
webdunia

ಚಳಿಗಾಲಕ್ಕೆ ಬಿಸಿ ಬಿಸಿಯಾದ ಮಟನ್ ಸೂಪ್!

ಚಳಿಗಾಲಕ್ಕೆ ಬಿಸಿ ಬಿಸಿಯಾದ ಮಟನ್ ಸೂಪ್!
ಬೆಂಗಳೂರು , ಮಂಗಳವಾರ, 7 ಡಿಸೆಂಬರ್ 2021 (10:37 IST)
ಚಳಿಗಾಲ ಬಂತೆಂದರೆ ಸಾಕು ಮಾಂಸಾಹಾರ ಪ್ರಿಯರಿಗಂತೂ ತಮ್ಮ ನಾಲಿಗೆ ಹಸಿವನ್ನು ತಣಿಸುವ ವಿವಿಧ ಖಾದ್ಯಗಳನ್ನು ಸವಿಯಲು ನಾಲಿಗೆ ಬಯಸುತ್ತದೆ.
ಚಳಿಗಾಲಕ್ಕೆ ಎಂದೇ ಹೆಸರುವಾಸಿಯಾಗಿರುವ ಕೆಲವೊಂದು ರುಚಿಕರ ಮತ್ತು ಸ್ವಾದಿಷ್ಟವಾದ ಕೆಲವು ಸೂಪ್ಗಳಿವೆ. ಬಿಸಿ ಬಿಸಿ, ಖಾರ ಖಾರದ ವಿಭಿನ್ನ ರುಚಿಯನ್ನು ಹೊಂದಿರುವ ಮಟನ್ ಸೂಪ್ ಎಂದಾದರೂ ಸೇವಿಸಿದ್ದೀರಾ..? ಈ ಸೂಪ್ ಮಾಡೋ ಸರಳ ವಿಧಾನ ನಿಮಗೆ ಗೊತ್ತಾ..?
ಬೇಕಾಗುವ ಸಾಮಗ್ರಿಗಳು
* ಮಟನ್- 1 ಕೆಜಿ
* ಟೊಮೆಟೋ- 1
* ಕರಿಬೇವಿನ ಎಲೆಗಳು- ಸ್ವಲ್ಪ
* ಎಳ್ಳಿನ ಎಣ್ಣೆ- 1 ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ಕೊತ್ತಂಬರಿ ಸೊಪ್ಪು- ಸ್ವಲ್ಪ
* ಆಲೂಗಡ್ಡೆ- 1
* ಕಾಳುಮೆಣಸು- 1 ಟೀಸ್ಪೂನ್
* ಜೀರಿಗೆ- 2 ಟೀಸ್ಪೂನ್
* ಶುಂಠಿ ಸ್ವಲ್ಪ
* ಬೆಳ್ಳುಳ್ಳಿ – 2
* ಅರಿಶಿಣ ಪುಡಿ- 1 ಚಮಚ
* ಅಡುಗೆ ಎಣ್ಣೆ- ಅರ್ಧ ಕಪ್
ಮಾಡುವ ವಿಧಾನ
* ಮೊದಲಿಗೆ ಮಟನ್ ಸ್ವಚ್ಛ ಮಾಡಿಕೊಳ್ಳಬೇಕು.
* ಟೊಮೆಟೋ, ಆಲೂಗಡ್ಡೆ, ಕಾಳುಮೆಣಸು, ಜೀರಿಗೆ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಮತ್ತು ಅರಿಶಿಣವನ್ನು ಸೇರಿಸಿ ರುಬ್ಬಿ ಇಟ್ಟುಕೊಳ್ಳಿ. 
 * ಕುಕ್ಕರಲ್ಲಿ ಅಡುಗೆ ಎಣ್ಣೆ, ಮಟನ್ ತುಂಡುಗಳು ಹಾಗೂ ರುಬ್ಬಿದ ಮಸಾಲೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
* ನಂತರ ಕರಿಬೇವಿನ ಎಲೆ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ನಂತರ ನೀರು ಮತ್ತು ಎಣ್ಣೆಯನ್ನು ಅದಕ್ಕೆ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಬೇಯಿಸಿಕೊಳ್ಳಬೇಕು.
* ಮಟ್ಟನ್ ಬೇಯಿಸಿದ ನಂತರ ಎಳ್ಳಿನ ಎಣ್ಣೆ, ಕೊತ್ತಂಬರಿ ಸೊಪ್ಪು ಸೇರಿಸಿದರೆ ರುಚಿ ರುಚಿಯಾದ ಮಟ್ಟನ್ ಸೂಪ್ ಸವಿಯಲು ಸಿದ್ಧವಾಗುತ್ತದೆ. 


Share this Story:

Follow Webdunia kannada

ಮುಂದಿನ ಸುದ್ದಿ

ಬೆಳಗ್ಗಿನ ತಿಂಡಿಗೆ ಮಾಡಿ ಶೇಂಗಾ ಬಾತ್