Webdunia - Bharat's app for daily news and videos

Install App

ಸಕ್ಕತ್ ಟೇಸ್ಟಿ ಕೇರಳ ಶೈಲಿಯ ಚಿಕನ್ ಪಕೋಡಾ!

Webdunia
ಭಾನುವಾರ, 12 ಡಿಸೆಂಬರ್ 2021 (11:51 IST)
ವಿವಿಧ ಮಸಾಲೆಯಿಂದ ಕೂಡಿರುವ ಚಿಕನ್ ನಾಲಿಗೆಗೆ ಅದ್ಭುತ ರುಚಿಯನ್ನು ನೀಡುವುದು.

ಕೇರಳ ಶೈಲಿಯ ಪಕೋಡವು ಭಾರತದಾದ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಸುಲಭ ಹಾಗೂ ಸರಳ ವಿಧಾನಗಳಿಂದ ಕೂಡಿರುವ ಈ ಪಾಕವಿಧಾನವನ್ನು ನೀವು ಮನೆಯಲ್ಲಿ ತಯಾರಿಸಬಹುದು.

ಬಂಧುಗಳು ಅಥವಾ ನಿಮ್ಮ ಆಪ್ತರು ಆಗಮಿಸಿದಾಗ ಅವರನ್ನು ಖುಷಿಪಡಿಸಲು ನೀವು ಈ ಪಾಕವಿಧಾನವನ್ನು ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು

•             350 ಗ್ರಾಮ್ಸ್ ಅಗತ್ಯಕ್ಕೆ ತಕ್ಕಷ್ಟು ಕೋಳಿ
•             1 ಕಪ್ ಅಗತ್ಯಕ್ಕೆ ತಕ್ಕಷ್ಟು ಮೈದಾ
•             1 ಕಪ್ ಅಗತ್ಯಕ್ಕೆ ತಕ್ಕಷ್ಟು ಅಕ್ಕಿ ಹಿಟ್ಟು
•             2 ಚಮಚ ಅಗತ್ಯಕ್ಕೆ ತಕ್ಕಷ್ಟು ಜೋಳದ ಹಿಟ್ಟು
•             2 - ಅಗತ್ಯಕ್ಕೆ ತಕ್ಕಷ್ಟು ಕಂದು ಮೊಟ್ಟೆ
•             1 ಚಮಚ ಅಗತ್ಯಕ್ಕೆ ತಕ್ಕಷ್ಟು ಖಾರದ ಪುಡಿ
•             2 ಚಮಚ ಅಗತ್ಯಕ್ಕೆ ತಕ್ಕಷ್ಟು ಕೊತ್ತಂಬರಿ ಪುಡಿ
•             1 ಚಮಚ ಪುಡಿ ಮಾಡಿದ ಕರಿಮೆಣಸು
•             1/2 ಚಮಚ ಅಗತ್ಯಕ್ಕೆ ತಕ್ಕಷ್ಟು ಅರಿಶಿಣ
•             3 - ಅಗತ್ಯಕ್ಕೆ ತಕ್ಕಷ್ಟು ಈರುಳ್ಳಿ
•             4 - ಕತ್ತರಿಸಿದ ಕೊತ್ತಂಬರಿ ಸೊಪ್ಪು
•             2 ಚಮಚ ಕತ್ತರಿಸಿದ ಬೆಳ್ಳುಳ್ಳಿ
•             2 ಚಮಚ ಅಗತ್ಯಕ್ಕೆ ತಕ್ಕಷ್ಟು ಶುಂಠಿ
•             ಹಸಿಮೆಣಸಿನಕಾಯಿ
•             1 ಚಮಚ ಅಗತ್ಯಕ್ಕೆ ತಕ್ಕಷ್ಟು ಜೀರಿಗೆ
•             1 ಚಮಚ ಅಗತ್ಯಕ್ಕೆ ತಕ್ಕಷ್ಟು ಮಾಂಸದ ಅಡುಗೆಗೆ ಬಳಸುವ ಮಸಾಲ
•             1 ಚಮಚ ಅಗತ್ಯಕ್ಕೆ ತಕ್ಕಷ್ಟು ಗರಂ ಮಸಾಲ ಪುಡಿ
•             1 ಚಮಚ ಅಗತ್ಯಕ್ಕೆ ತಕ್ಕಷ್ಟು ಅಡುಗೆ ಸೋಡಾ

- ಒಂದು ಪಾತ್ರೆಯಲ್ಲಿ ಮೈದಾ, ಕಾರ್ನ್ ಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನ ಪುಡಿ, ಧನಿಯಾ, ಮೆಣಸಿನ ಪುಡಿ, ಅರಿಶಿನ, ಮೊಟ್ಟೆ, ಕತ್ತರಿಸಿದ ಬೆಳ್ಳುಳ್ಳಿ, ಶುಂಠಿ, ಕರಿಬೇವಿನ ಎಲೆ, ಹಸಿ ಮೆಣಸಿನಕಾಯಿ, ಜೀರಿಗೆ ಪುಡಿ, ಚಿಕನ್ ಮಸಾಲ, ಗರಂ ಮಸಾಲ, ಇಂಗು, ಬೇಕಿಂಗ್ ಪೌಡರ್ ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಸೇರಿಸಿ.

- ಎಲ್ಲಾ ಸಾಮಾಗ್ರಿಗಳಿಗೆ ಸ್ವಲ್ಪ ನೀರನ್ನು ಬೆರೆಸಿ, ಚೆನ್ನಾಗಿ ಮಿಶ್ರಗೊಳಿಸಿ.- ನಂತರ ಚಿಕನ್ ತುಂಡುಗಳನ್ನು ಹಾಕಿ ಚೆನ್ನಾಗಿ ಬೆರೆಸಿ.- ಎರಡು ಚಮಚ ವಿನೆಗರ್ ಸೇರಿಸಿ, ಮಿಶ್ರಗೊಳಿಸಿ. ಅದು ಪಕೋಡಕ್ಕೆ ಉತ್ತಮ ರುಚಿ ನೀಡುವುದು.

- ಪಕೋಡ ಬೇಯಿಸುವ ಮೊದಲು 30 ನಿಮಿಷಗಳ ಕಾಲ ಫ್ರಿಜ್ ನಲ್ಲಿ ಇಟ್ಟು ತಣ್ಣಗಾಗಿಸಿಕೊಳ್ಳಿ.
- ಒಂದು ಬಾಣಲೆಯಲ್ಲಿ ಕರಿಯಲು ಎಣ್ಣೆಯನ್ನು ಹಾಕಿ ಬಿಸಿ ಮಾಡಲು ಇಡಿ.- ಎಣ್ಣೆ ಬಿಸಿಯಾದ ಬಳಿಕ ಮಿಶ್ರಣವನ್ನು ಎಣ್ಣೆಯಲ್ಲಿ ಬಿಡಿ.- ಪಕೋಡವು ಎರಡು ಭಾಗದಲ್ಲೂ ಚೆನ್ನಾಗಿ ಬೆಂದು ಹೊಂಬಣ್ಣಕ್ಕೆ ಬರಬೇಕು.

- ಗರಿಗರಿಯಾದ ಪಕೋಡವನ್ನು ಸಾಸ್ ಜೊತೆಗೆ ಸೇವಿಸಿ.- ಇದನ್ನು ಸಂಜೆ ಸಮಯದ ಟೀ ಅಥವಾ ಊಟದ ಮೊದಲು ಸ್ಟಾರ್ಟರ್ ಆಗಿ ಸೇವಿಸಬಹುದು.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ
Show comments