Webdunia - Bharat's app for daily news and videos

Install App

ರುಚಿಕರವಾದ ಈ ಮಟನ್ ಕುರ್ಮ ! ಒಮ್ಮೆ ಟ್ರೈ

Webdunia
ಭಾನುವಾರ, 12 ಡಿಸೆಂಬರ್ 2021 (11:39 IST)
ಮಟನ್ ಪ್ರಿಯರಿಗಂತೂ ತುಂಬಾನೇ ಇಷ್ಟವಾಗುವ ಮಟನ್ ಕುರ್ಮ. ಸಾಂಪ್ರದಾಯಿಕ ಮಸಾಲೆಗಳ ಮಿಶ್ರಣದಲ್ಲಿ ತಯಾರಾಗುವ ಮಟನ್ ಕುರ್ಮ ರಸಭರಿತವಾದ ಖಾದ್ಯ.

ಇದನ್ನು ಸಾಮಾನ್ಯ ದಿನಗಳಲ್ಲಿ ಮತ್ತು ಅತಿಥಿಗಳು ಮನೆಗೆ ಬಂದಾಗ ವಿಶೇಷವಾಗಿ ತಯಾರಿಸಲು ಉತ್ತಮ ಆಯ್ಕೆ ಆಗುವುದು.
ನೀವು ಸಹ ಸರಳ ವಿಧಾನಗಳ ಮೂಲಕ ಮನೆಯಲ್ಲಿಯೇ ಮಟನ್ ಕುರ್ಮವನ್ನು ತಯಾರಿಸಬಹುದು.
ಬೇಕಾಗುವ ಸಾಮಗ್ರಿಗಳು

 1/2 ಕಿ.ಗ್ರಾಂ ಮಟನ್
•             1 ಕಪ್ ಮೊಸರು
•             3 ಚಮಚ ಜಿಂಜರ್ ಜ್ಯೂಸ್
•             3 ಚಮಚ ಬೆಳ್ಳುಳ್ಳಿ
•             1 ಕಪ್ fried onion
•             1 ಚಮಚ ಗರಂ ಮಸಾಲ ಪುಡಿ
•             2 ಚಮಚ ಖಾರದ ಪುಡಿ
•             2 - ಲವಂಗದ ಎಲೆ
•             2 - ಕಪ್ಪು ಏಲಕ್ಕಿ
•             2 - ಚಕ್ಕೆ
•             6 - ಹಸಿರು ಏಲಕ್ಕಿ
•             6 - ಲವಂಗ
•             ಅಗತ್ಯಕ್ಕೆ ತಕ್ಕಷ್ಟು ಉಪ್ಪು
•             ಅಗತ್ಯಕ್ಕೆ ತಕ್ಕಷ್ಟು ನೀರು
- ಒಂದು ಪಾತ್ರೆಯಲ್ಲಿ ಕುರಿ ಮಾಂಸ/ ಮಟನ್, ಶುಂಠಿ, ಬೆಳ್ಳುಳ್ಳಿ ನೀರು, ಮೊಸರು, ಮೆಣಸಿನ ಪುಡಿ, ಗರಮ್ ಮಸಾಲ ಮತ್ತು ಉಪ್ಪನ್ನು ಸೇರಿಸಿ, ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಗೊಳಿಸಿ.- ಮಿಶ್ರಣವು ಚೆನ್ನಾಗಿ ಮಿಶ್ರವಾಗಲು 4-5 ನಿಮಿಷಗಳ ಕಾಲ ಒಂದೆಡೆ ಇಡಿ.

- ಕುಕ್ಕರ್ ಪಾತ್ರೆಗೆ ಎಣ್ಣೆಯನ್ನು ಸೇರಿಸಿ ಬಿಸಿ ಮಾಡಿ.- ಬಿಸಿಯಾದ ಬಳಿಕ ಬೇ ಎಲೆ, ಗರಮ್ ಮಸಾಲ, ಅರ್ಧ ಬೌಲ್ ಕ್ಯಾರಮೈಸ್ಡ್ ಈರುಳ್ಳಿ ಮತ್ತು ಸ್ವಲ್ಪ ನೀರನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.- ಮಿಶ್ರಣವು ಚೆನ್ನಾಗಿ ಬೆರೆತು ಬೇಯಲು ಸ್ವಲ್ಪ ಸಮಯ ಬಿಡಿ.

- ಅದೇ ಕುಕ್ಕರ್ ಪಾತ್ರೆಗೆ ಮ್ಯಾರಿನೇಟ್ ಮಾಡಿದ ಮಟನ್ ಮಿಶ್ರಣ ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.- ಒಂದು ಅಥವಾ ಎರಡು ನಿಮಿಷಗಳ ಕಾಲ ಕುದಿಸಿ, ನಂತರ ಮುಚ್ಚಳವನ್ನು ಮುಚ್ಚಬೇಕು.- ಮಿಶ್ರಣವು ಚೆನ್ನಾಗಿ ಬೇಯಲು 5-6 ಸೀಟಿಯನ್ನು ಕೂಗಿಸಿ.

- ಮಟನ್ ಕುರ್ಮ ಸಿದ್ಧವಾದ ಬಳಿಕ ನಿಮ್ಮ ಆಯ್ಕೆಗೆ ಅನುಗುಣವಾಗಿ ಅನ್ನ ಅಥವಾ ರೊಟ್ಟಿಯೊಂದಿಗೆ ಸವಿಯಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಈ ಹಣ್ಣು ಯಾವುದು ಗುರುತಿಸಿ, ಈ ಸಮಸ್ಯೆ ಇರುವವರು ಇದನ್ನು ತಪ್ಪದೇ ಸೇವಿಸಿ

International Women's Day: ನಿಮ್ಮ ಜೀವನದ ವಿಶೇಷ ಮಹಿಳೆಗೆ ಈ ರೀತಿ ಗಿಫ್ಟ್ ಮಾಡಿ

ಬೇಸಿಗೆಯಲ್ಲಿ ಮೈ ಕೈ ನೋವಾಗುತ್ತಿದೆಯೇ ಇದಕ್ಕೆ ಈ ಕಾರಣವೂ ಇರಬಹುದು

ಬೇಸಿಗೆಯಲ್ಲಿ ನುಗ್ಗೆಕಾಯಿ ಸೇವನೆ ಮಾಡಬಹುದೇ

ಬೆಳಿಗ್ಗೆ ಜೀರಿಗೆ ನೀರು ಕುಡಿಯುವುದರಿಂದ ಅನೇಕ ಪ್ರಯೋಜನ

ಮುಂದಿನ ಸುದ್ದಿ
Show comments