Select Your Language

Notifications

webdunia
webdunia
webdunia
webdunia

ಜೈಲಿನಲ್ಲಿರುವ ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ಗೆ ಹೈಟೆಕ್ ಭದ್ರತೆ: 12 ಲಕ್ಷ ಮಾಸಿಕ ಖರ್ಚು

Pakistan Former Prime Minister Imran Khan

Sampriya

ನವದೆಹಲಿ , ಮಂಗಳವಾರ, 9 ಏಪ್ರಿಲ್ 2024 (16:07 IST)
Photo Courtesy X
ನವದೆಹಲಿ: ರಾವಲ್ಪಿಂಡಿಯ ಅದಿಯಾಲ ಜೈಲಿನಲ್ಲಿ ಬಂಧಿಯಾಗಿರುವ ಪಾಕ್ ಮಾಜಿ ಪ್ರಧಾನಿ ‌ಇಮ್ರಾನ್ ಖಾನ್‌ ಭದ್ರತೆಗೆ ಬರೋಬ್ಬರಿ ವರ್ಷಕ್ಕೆ 12 ಲಕ್ಷ ಖರ್ಚಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಜೈಲು ಆವರಣಕ್ಕೆ 5 ಲಕ್ಷ ಮೌಲ್ಯದ ಸಿಸಿಟಿವು  ಕ್ಯಾಮೆರಾ ಅವಳಡಿಕೆಯೊಂದಿಗೆ , ವಿಶೇಷ ವ್ಯವಸ್ಥೆಗಳನ್ನು  ಕಲ್ಪಿಸಲಾಗಿದೆ.

ಇನ್ನೂ ಇಮ್ರಾನ್‌ಗೆ ತರಾಯಿಸುವ ಅಡುಗೆಯ ಪರಿವೀಕ್ಷಣೆಗೆಂದೇ ಸಹಾಯಕ ವರಿಷ್ಠಾಧಿಕಾರಿಯೊಬ್ಬರನ್ನು ನೇಮಿಸಲಾಗಿದೆ. ಇನ್ನೂ ಅವರ ಆಹಾರ ತಪಾಸಣೆ ನಂತರವೇ ಇಮ್ರಾನ್‌ಗೆ  ನೀಡಲಾಗುತ್ತದೆ.

ಇನ್ನು ಆರೋಗ್ಯ ತಪಾಸಣೆಗೆ ಹೋಲಿ ಫ್ಯಾಮಿಲಿ ಆಸ್ಪತ್ರೆಯ ಆರಕ್ಕೂ ಅಧಿಕ ವೈದ್ಯರು ಆರೋಗ್ಯ ತಪಾಸಣೆ ಮಾಡುತ್ತಾರೆ. ಏಳು ವಿಶೇಷ ಸೆಲ್‌ಗಳ ಪೈಕಿ ಎರಡನ್ನು ಇಮ್ರಾನ್‌ ಅವರಿಗೆ ಮೀಸಲಿರಿಸಲಾಗಿದ್ದು, ಉಳಿದ ಐದು ಸೆಲ್‌ಗಳನ್ನು ಭದ್ರತಾ ದೃಷ್ಟಿಯಿಂದ ಬಂದ್ ಮಾಡಲಾಗಿದೆ. ಇದರಲ್ಲಿ 35 ಕೈದಿಗಳನ್ನು ಇಡಬಹುದಾಗಿದೆ.

ಇನ್ನೂ ಇಮ್ರಾನ್ ಅವರ ಸೆಲ್‌ಗೆ ಬಿಗಿ ಭದ್ರತೆ ನೀಡಿದ್ದು 15 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ ಆರೋಗ್ಯದ ದೃಷ್ಟಿಯಲ್ಲಿ ವ್ಯಾಯಮಕ್ಕೆ ಯಂತ್ರಗಳು ಹಾಗೂ ಇತರ ಸೌಕರ್ಯಗಳನ್ನು ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವೈದ್ಯಕೀಯ ಕ್ಷೇತ್ರಕ್ಕೆ ಮೋದಿ ಕೊಡುಗೆ ಬಗ್ಗೆ ಪಟ್ಟಿ ಮಾಡಿ ತಿಳಿಸಿದ ಡಾ ಸಿಎನ್ ಮಂಜುನಾಥ್