Select Your Language

Notifications

webdunia
webdunia
webdunia
webdunia

ಅರ್ನಬ್ ಗೋಸ್ವಾಮಿ ವಿರುದ್ಧ 500 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಝಾಕೀರ್ ನಾಯ್ಕ

Zakir Naik
ನವದೆಹಲಿ , ಶನಿವಾರ, 30 ಜುಲೈ 2016 (14:31 IST)
'ಟೈಮ್ಸ್‌ ನೌ' ವಾಹಿನಿ ಮುಖ್ಯ ಸಂಪಾದಕ ಅರ್ನಬ್‌ ಗೋಸ್ವಾಮಿ ವಿರುದ್ಧ ವಿವಾದಾತ್ಮಕ ಧರ್ಮ ಪ್ರವಚನಕಾರ ಝಾಕೀರ್‌ ನಾಯ್ಕ 500 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಜುಲೈ 16 ರಂದು ಜಾರಿಯಾಗಿರುವ ನೋಟಿಸ್‌ನಲ್ಲಿ, ಗೋಸ್ವಾಮಿ ತಾವು ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ನನ್ನ ವಿರುದ್ಧ ಸುಳ್ಳು ಮತ್ತು ಮಾನನಷ್ಟಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಅಲ್ಲದೆ ಮಾಧ್ಯಮ ತನಿಖೆ ಮೂಲಕ ತಮ್ಮನ್ನು ತಪ್ಪಿತಸ್ಥನ ರೀತಿಯಲ್ಲಿ ಬಿಂಬಿಸಲಾಗಿತ್ತು . ಈ ಮೂಲಕ ಸಾರ್ವಜನಿಕರ ಮುಂದೆ ನನ್ನ ಗೌರವಕ್ಕೆ ಧಕ್ಕೆ ತರಲಾಗಿದೆ ಎಂದು ಝಾಕೀರ್  ಆರೋಪಿಸಿದ್ದಾರೆ.

ಝಾಕೀರ್ ಪರ ವಕೀಲ ಮುಬಿನ್ ಸೋಲ್ಕರ್ ಈ ದಾವೆಯನ್ನು ಹೂಡಿದ್ದಾರೆ.

ಬಾಂಗ್ಲಾದೇಶದ ಢಾಕಾದಲ್ಲಿ ಇತ್ತೀಚೆಗೆ ನಡೆದ ಉಗ್ರ ದಾಳಿಗೆ ಝಾಕೀರ್ ಅವರೇ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪವಿದೆ. ಹೀಗಾಗಿ ಬಾಂಗ್ಲಾ ಮತ್ತು ಭಾರತ ದೇಶಗಳೆರಡ ತನಿಖಾ ತಂಡಗಳು ಅವರ ಮೇಲೆ ತೀವ್ರ ನಿಗಾ ಇಟ್ಟಿವೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಯುಪಿಯಲ್ಲಿ ಏಕಾಂಗಿಯಾಗಿ ಕಣಕ್ಕಿಳಿಯುತ್ತೇವೆ: ರಾಹುಲ್ ಗಾಂಧಿ