Select Your Language

Notifications

webdunia
webdunia
webdunia
webdunia

ಯುಪಿಯಲ್ಲಿ ಏಕಾಂಗಿಯಾಗಿ ಕಣಕ್ಕಿಳಿಯುತ್ತೇವೆ: ರಾಹುಲ್ ಗಾಂಧಿ

Congress
ಲಕ್ನೋ , ಶನಿವಾರ, 30 ಜುಲೈ 2016 (14:28 IST)
ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ್ ಚುನಾವಣೆಯಲ್ಲಿ ನಾವು ಕೇವಲ ರಾಜ್ಯದ ಜನತೆಯ ಜತೆ ಮೈತ್ರಿ ಮಾಡಿಕೊಳ್ಳುತ್ತೇವೆ, ಏಕಾಂಗಿಯಾಗಿ ಕಣಕ್ಕಿಳಿಯುತ್ತೇವೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ಜಾರೆ.

ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ , ವಿಧಾನಸಭೆಯಲ್ಲಿ ಸಂಪೂರ್ಣ ಬಹುಮತ ಪಡೆದು ನಮ್ಮದೇ ಆದ ಮುಖ್ಯಮಂತ್ರಿಯನ್ನು ಹೊಂದಲು ನಾವು ಚುನಾವಣೆಯನ್ನು ಎದುರಿಸುತ್ತಿದ್ದೇವೆ. ಕಳೆದ 27 ವರ್ಷಗಳಲ್ಲಿ ಏನಾಯಿತೆಂಬುದು ನಿಮಗೆ ಗೊತ್ತು. ವಿಭಿನ್ನ ಪಕ್ಷಗಳೇ ರಾಜ್ಯವನ್ನು ಒಡೆದವು ಎಂದು ಹೇಳಿದ್ದಾರೆ.

ಈ ಹಿಂದೆ ಬೇರೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಾಗಲೆಲ್ಲ ಪಕ್ಷಕ್ಕೆ ಹಾನಿಯೇ ಉಂಟಾಗಿದೆ. ಈ ಬಾರಿ ನಾವು ಯಾರೊಂದಿಗೂ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಭರವಸೆ ನೀಡಿ ಎಂದು ಕೇಳಿದ ಕಾರ್ಯಕರ್ತರಿಗೆ ಉತ್ತರಿಸಿದ ಗಾಂಧಿ ನಾವು ಕೇವಲ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮತ್ತು ರಾಜ್ಯದ ಪ್ರತಿಯೊಬ್ಬ ನಾಗರಿಕನೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದರು.

ಇದು ಸಿದ್ಧಾಂತಗಳ ಕದನ. ಯುಕ್ತವಾದ ಸ್ಥಾನ ಪಡೆಯಲು ನಾವು ಉತ್ತರ ಪ್ರದೇಶಕ್ಕೆ ಸಹಾಯ ಮಾಡಬೇಕು. ಕಾಂಗ್ರೆಸ್ ಎಲ್ಲರನ್ನು ಒಂದುಗೂಡಿಸುತ್ತದೆ, ಇತರೆ ಪಕ್ಷಗಳು ಅವರನ್ನು ವಿಭಜಿಸುತ್ತವೆ. ಜನರ ನಡುವೆ ಇರುವ  ಕೋಪವನ್ನು ತೊಳೆದು ಹಾಕಲು ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರವನ್ನು ರೂಪಿಸುತ್ತದೆ ಎಂದು ರಾಹುಲ್ ಹೇಳಿದ್ದಾರೆ.

ಪಕ್ಷ ಮಹಿಳೆಯರಿಗೆ ಮತ್ತು ಯುವಕರಿಗೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಣೆಯಾದ ವಿಮಾನ ಪ್ರಕರಣದಲ್ಲಿ ಹೊಸ ಟ್ವಿಸ್ಟ್