Publish Date: Sun, 11 Oct 2020 (13:21 IST)
Updated Date: Sun, 11 Oct 2020 (13:23 IST)
ನವದೆಹಲಿ: ಚಲಿಸುವ ವಾಹನದಲ್ಲಿ 35 ವರ್ಷದ ಮಹಿಳೆ ಮೇಲೆ ಯುವಕರಿಬ್ಬರು ಮಾನಭಂಗ ಮಾಡಲು ಯತ್ನಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಆಸ್ತಿ ಕಾಗದ ಪತ್ರಕ್ಕೆ ಸಂಬಂಧಿಸಿದಂತೆ ಸಹಿ ಹಾಕಲು ಜತೆಗೇ ಬರಬೇಕೆಂದು ಮಹಿಳೆಯ ಮನ ಒಲಿಸಿದ ಯುವಕರು ವಾಹನದಲ್ಲಿ ಆಕೆಯನ್ನು ಕರೆದುಕೊಂಡು ಹೋಗುವಾಗ ಮಾನಭಂಗಕ್ಕೆ ಯತ್ನಿಸಿದ್ದಾರೆ. ಆದರೆ ವಿಫಲರಾದಾಗ ದಾರಿ ಮಧ್ಯದಲ್ಲೇ ಬಿಟ್ಟು ತೆರಳಿದ್ದಾರೆ. ಬಳಿಕ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಸಂಬಂಧ ಇಬ್ಬರೂ ಆರೋಪಿಗಳನ್ನೂ ಪೊಲೀಸರು ತಕ್ಷಣವೇ ಬಂಧಿಸಿದ್ದಾರೆ.