Publish Date: Sun, 22 Nov 2026 (11:02 IST)
Updated Date: Sat, 21 Nov 2026 (20:51 IST)
ಪ್ರಕೃತಿಯ ಸೊಬಗು, ತಂಪಾದ ನೀರು ಮತ್ತು ಪ್ರಶಾಂತ ವಾತಾವರಣ ಕಂಡಾಗ ಯಾರಿಗಾದರೂ ನೀರಿಗಿಳಿದು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಬೇಕೆನಿಸುವುದು ಸಹಜ. ಆದರೆ, ಅಪರಿಚಿತ ನದಿಗಳು, ಕೆರೆಗಳು, ಹೊಂಡಗಳು ಅಥವಾ ಕೊಳಗಳ ವಿಷಯದಲ್ಲಿ ಸ್ವಲ್ಪ ನಿರ್ಲಕ್ಷ್ಯ ತೋರಿದರೂ ಅದು ದೊಡ್ಡ ಅಪಾಯಕ್ಕೆ ದಾರಿ ಮಾಡಿಕೊಡಬಹುದು. ಇತ್ತೀಚಿನ ಈ ಘಟನೆಯೇ ಇದಕ್ಕೆ ಸ್ಪಷ್ಟ ನಿದರ್ಶನವಾಗಿದೆ.
ಯುವತಿಯೊಬ್ಬಳು ನೀರಿನ ಕೊಳದ ಬಳಿ ಬಂದು, ಅಪಾಯದ ಅರಿವಿಲ್ಲದೆ ನೀರಿನಲ್ಲಿ ಮಲಗಿ ವಿಶ್ರಾಂತಿ ಪಡೆಯಲು ಮುಂದಾಗಿದ್ದಾಳೆ. ನೀರಿಗಿಳಿದು ಕೆಲವೇ ಸೆಕೆಂಡುಗಳು ಕಳೆಯುವುದರೊಳಗೆ, ನೀರಿನೊಳಗೆ ಹೊಂಚು ಹಾಕಿ ಕುಳಿತಿದ್ದ ಮೊಸಳೆಯೊಂದು ಏಕಾಏಕಿ ಬಂದು ನೇರವಾಗಿ ಆಕೆಯ ಹೊಟ್ಟೆಯ ಭಾಗವನ್ನು ಕಚ್ಚಿದೆ. ಅನಿರೀಕ್ಷಿತವಾಗಿ ನಡೆದ ಈ ದಾಳಿಯಿಂದ ಯುವತಿ ಕ್ಷಣಾರ್ಧದಲ್ಲಿ ಬೆಚ್ಚಿಬಿದ್ದಿದ್ದಾಳೆ.
ಸಾಮಾನ್ಯವಾಗಿ ಇಂತಹ ಪರಿಸ್ಥಿತಿಯಲ್ಲಿ ಗಾಬರಿಯಾಗುವುದು ಸಹಜವಾದರೂ, ಆ ಯುವತಿ ಧೈರ್ಯ ಕಳೆದುಕೊಳ್ಳದೆ ಮೊಸಳೆಯ ಹಿಡಿತದಿಂದ ಹೇಗೋ ತಪ್ಪಿಸಿಕೊಂಡು ದಡದ ಕಡೆಗೆ ಓಡಿ ಪ್ರಾಣ ಉಳಿಸಿಕೊಂಡಿದ್ದಾಳೆ. ಅದೃಷ್ಟವಶಾತ್ ಆಕೆಗೆ ಪ್ರಾಣಾಪಾಯ ತಪ್ಪಿದರೂ, ಈ ಘಟನೆಯು ನೀರಿನ ಸುರಕ್ಷತೆಯ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ