Publish Date: Fri, 09 Oct 2026 (11:42 IST)
Updated Date: Fri, 09 Oct 2026 (11:45 IST)
ಅನೇಕ ಬಾರಿಗೆ ನದಿ, ಕೆರೆ ಹಾಗೂ ಹಳ್ಳಗಳ ನೀರು ಮೇಲ್ನೋಟಕ್ಕೆ ಅತ್ಯಂತ ಶಾಂತವಾಗಿ ಕಾಣಿಸುತ್ತದೆ. ಆದರೆ ನೀರಿನ ಅಡಿಯಲ್ಲಿ ಅಡಗಿರುವ ಸುಳಿಗಳು ಅಥವಾ ಅಪಾಯಕಾರಿ ಜಲಚರಗಳು ಕಣ್ಣಿಗೆ ಕಾಣಿಸುವುದಿಲ್ಲ. ಈ ಬಾಲಕ ನದಿಗೆ ಜಿಗಿದ ತಕ್ಷಣವೇ ಅಲ್ಲೇ ಹತ್ತಿರದಲ್ಲೇ ಹೊಂಚು ಹಾಕಿ ಕುಳಿತಿದ್ದ ಮೊಸಳೆಯೊಂದು ಕ್ಷಣಾರ್ಧದಲ್ಲಿ ಆತನನ್ನು ನುಂಗಲು ವೇಗವಾಗಿ ಈಜಿಕೊಂಡು ಬಂದಿದೆ. ಅದೃಷ್ಟವಶಾತ್, ಬಾಲಕ ಸಮಯಪ್ರಜ್ಞೆ ಮೆರೆದು ತನಗೆ ಎದುರಾದ ಆಪತ್ತನ್ನು ತಕ್ಷಣವೇ ಗುರುತಿಸಿ, ತಡಮಾಡದೆ ನೀರಿನಿಂದ ಹೊರಗೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾನೆ.
ಬೇಸಿಗೆಯಲ್ಲೋ ಅಥವಾ ಶೋಕಿಗಾಗಿಯೋ ಅಪರಿಚಿತ ನದಿ ಅಥವಾ ಕೆರೆಗಳಿಗೆ ಇಳಿಯುವುದು ಅತ್ಯಂತ ಅಪಾಯಕಾರಿ. ಮೊಸಳೆಗಳು ನೀರಿನಲ್ಲಿ ಅತ್ಯಂತ ಸೈಲೆಂಟ್ ಆಗಿ ಶಿಕಾರಿ ನಡೆಸುವ ಪ್ರಾಣಿಗಳು. ಕಣ್ಣಿಟ್ಟು ಕಾಯುವ ಅವು ಸೆಕೆಂಡುಗಳ ಅಂತರದಲ್ಲಿ ಜೀವವನ್ನೇ ತೆಗೆದುಬಿಡುತ್ತವೆ. ಈ ಬಾಲಕ ಸ್ವಲ್ಪವೇ ತಡ ಮಾಡಿದ್ದರೂ ಅಥವಾ ಗಮನಿಸದೇ ಇದ್ದಿದ್ದರೆ ಭೀಕರ ದುರಂತವೊಂದು ಸಂಭವಿಸುತ್ತಿತ್ತು.
ನದಿಯ ನೀರು ಶಾಂತವಾಗಿದೆ ಎಂದರೆ ಅದು ಸುರಕ್ಷಿತ ಎಂದು ಅರ್ಥವಲ್ಲ. ನಿಮ್ಮ ಒಂದು ಕ್ಷಣದ ನಿರ್ಲಕ್ಷ್ಯ ಅಥವಾ ಸಾಹಸ ಪ್ರವೃತ್ತಿ ಅಮೂಲ್ಯವಾದ ಜೀವಕ್ಕೇ ಕಂಠಕವಾಗಬಹುದು. ಆದ್ದರಿಂದ ಸದಾ ಜಾಗರೂಕರಾಗಿರಿ ಮತ್ತು ಸುರಕ್ಷತೆಗೆ ಮೊದಲ ಆದ್ಯತೆ ನೀಡಿ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ