ಬೆಣ್ಣೆಯಂತಿರುವ ಕೆಂಪು ಗಲ್ಲದ ಹುಡುಗಿ ನೀ ಕಾಶ್ಮೀರಿಯಾ? : ಮತ್ತೊಂದು ವಿವಾದದಲ್ಲಿ ಆಸಾರಾಂ ಬಾಪು
ನವದೆಹಲಿ , ಮಂಗಳವಾರ, 27 ಸೆಪ್ಟಂಬರ್ 2016 (13:05 IST)
ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿರುವ ಆರೋಪ ಹೊತ್ತು ಜೈಲು ಪಾಲಾಗಿರುವ ಸ್ವಯಂಘೋಷಿತ ದೇವ ಮಾನವ ಆಸಾರಾಂ ಬಾಪು ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ವೈದ್ಯಕೀಯ ಪರೀಕ್ಷೆಗೆಂದು ಏಮ್ಸ್‌ಗೆ ದಾಖಲಾಗಿದ್ದ ಅವರು ಅಲ್ಲಿನ ನರ್ಸ್ ಜತೆ ಆಕ್ಷೇಪಾರ್ಹವಾಗಿ ನಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಅವರಿಗೆ ಮುಂಜಾನೆಯ ಉಪಹಾರವಾಗಿ ಬ್ರೆಡ್ ಮತ್ತು ಬೆಣ್ಣೆಯನ್ನು ತಿನ್ನಿಸಲು ಬಂದ ನರ್ಸ್ ಬಳಿ, ಆಸಾರಾಂ ಬೆಣ್ಣೆ ಬೇಡ, ನೀನೇ ಬೆಣ್ಣೆ ತರಹ ಇದ್ದೀಯಾ. ನಿನ್ನ ಕೆನ್ನೆಗಳು ಸೇಬೆ ಹಣ್ಣಿನಂತಿವೆ. ನೀನು ಕಾಶ್ಮೀರಿಯಾ ಎಂದು 72 ವರ್ಷದ ಆಸಾರಾಂ ಕೇಳಿದ್ದಾರೆ ಎಂದು ವರದಿಯಾಗಿದೆ. ಆಸಾರಾಂ ಅವರ ವರ್ತನೆಯಿಂದ ಕೆರಳಿದ ನರ್ಸ್ ಆಸ್ಪತ್ರೆಯ ಆಡಳಿತ ಮಂಡಳಿಯಲ್ಲಿ ಈ ಕುರಿತು ದೂರನ್ನಿತ್ತಿದ್ದಾಳೆ.
16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪವನ್ನು ಎದುರಿಸುತ್ತಿರುವ ಆಸಾರಾಂ ಆಗಸ್ಟ್ 20, 2013ರಿಂದ ಜೈಲಿನಲ್ಲಿದ್ದಾರೆ. ಅವರ ವಿರುದ್ಧ ಪೋಸ್ಕೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.
ತಾವು ಅನಾರೋಗ್ಯದಿಂದ ಬಳಲುತ್ತಿರುವುದಾಗ ಅವರು ದೂರುತ್ತಿರುವ ಹಿನ್ನೆಲೆಯಲ್ಲಿ ಏಮ್ಸ್‌ನಲ್ಲಿ ಅವರ ಆರೋಗ್ಯ ಪರೀಕ್ಷೆ ಮಾಡುವಂತೆ ಸುಪ್ರಿಂಕೋರ್ಟ್ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಏಮ್ಸ್‌ಗೆ ದಾಖಲಿಸಿದಾಗ ಈ ಪ್ರಸಂಗ ನಡೆದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಮುಂದಿನ ಸುದ್ದಿ