ಕಾಮಕ್ಕೆ ಕಣ್ಣಿಲ್ಲ ಅನ್ನುತ್ತಾರೆ. ಈ ಘೋರ ಕಥನವನ್ನು ಓದಿದ ಬಳಿಕ ನಮ್ಮ ಪೂರ್ವಜರ ಈ ಮಾತು ಸತ್ಯ ಎನ್ನಿಸದಿರದು. 100 ವರ್ಷದ ವೃದ್ಧೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಪಂಜಾಬ್‌ನ ಪಟಿಯಾಲಾದ ದೌಬ್ ಕಲಾನ್ ಗ್ರಾಮದಲ್ಲಿ ನಡೆದಿದೆ. ಪರಿವಾರದವರು ಹೇಳುವ ಪ್ರಕಾರ ಆಕೆಯನ್ನು ಅತ್ಯಾಚಾರಗೈದು ಕೊಲೆಗೈಯ್ಯಲಾಗಿದೆ.
ಕೃತ್ಯದ ಹಿಂದೆ ಮಾದಕ ವ್ಯಸನಿಗಳ ಕೃತ್ಯವಿರಬಹುದೆಂದು ಅವರು ಅನುಮಾನ ವ್ಯಕ್ತ ಪಡಿಸಿದ್ದಾರೆ.
ರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ ಬಿತ್ತರವಾಗಿರುವ ವರದಿಗಳ ಪ್ರಕಾರ ರಾತ್ರಿ ಮನೆಯ ಹೊರಗೆ ಮಲಗಿದ್ದ ವೃದ್ಧೆ ಮರುದಿನ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಳು. ಆಕೆ ದೇಹ ಅರೆ ಬೆತ್ತಲೆ ಸ್ಥಿತಿಯಲ್ಲಿ ಭತ್ತದ ಗದ್ದೆ ಸಮೀಪ ಬಿದ್ದಿತ್ತು.
ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪರೀಕ್ಷೆಯ ಬಳಿಕ ಅತ್ಯಾಚಾರ ನಡೆಸಿ ಕೊಲೆಗೈಯಯ್ಯಲಾಗಿದೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಲಿದೆ.
ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ