Select Your Language

Notifications

webdunia
webdunia
webdunia
webdunia

ಕಸಾಯಿಖಾನೆಗಳ ವಿರುದ್ಧ ಸಮರ ಸಾರಿದ ಯೋಗಿ ಆದಿತ್ಯನಾಥ್

ಕಸಾಯಿಖಾನೆಗಳ ವಿರುದ್ಧ ಸಮರ ಸಾರಿದ ಯೋಗಿ ಆದಿತ್ಯನಾಥ್
ಲಖನೌ , ಬುಧವಾರ, 22 ಮಾರ್ಚ್ 2017 (20:16 IST)
ಅಧಿಕಾರ ವಹಿಸಿಕೊಂಡ ಬಳಿಕ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಆಸ್ತಿ ವಿವರ ಘೋಷಿಸುವಂತೆ ಕಟ್ಟಪ್ಪಣೆ ಮಾಡಿದ್ದ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾತ್, ಇದೀಗ, ಗೋಹತ್ಯೆ ವಿರುದ್ಧ ಸಮರ ಸಾರಿದ್ದಾರೆ.

ಗೋಹತ್ಯೆ ಮತ್ತು ಅಕ್ರಮ ಗೋವುಗಳ ಸಾಗಣೆಯನ್ನ ಸಹಿಸಲು ಸಾಧ್ಯವಿಲ್ಲ ಎಂದಿರುವ ಆದಿತ್ಯನಾತ್, ಅಕ್ರಮ ಕಸಾಯಿಖಾನೆಗಳ ನಾಮಾವಶೇಷ ಮಾಡುವಂತೆ ಪೊಲಿಸರಿಗೆ ಆದೇಶಿಸಿದ್ದಾರೆ.  ಈ ಬಗ್ಗೆ ಕ್ರಿಯಾಯೋಜನೆ ರೂಪಿಸುವಂತೆ ಖಡಕ್ ಆದೇಶ ನೀಡಿದ್ದಾರೆ. ಆದರೆ, ಉತ್ತರಪ್ರದೇಶದಲ್ಲಿ ಹಲವು ಪರವಾನಗಿ ಪಡೆದಿರುವ ಕಸಾಯಿಖಾನೆಗಳಿದ್ದು, ಅವುಗಳನ್ನ ಯೋಗಿ ಹೇಗೆ ತೊಡೆದುಹಾಕುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಇದೇವೇಳೆ, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೂ ಆಂಟಿ-ರೋಮಿಯೋ ಸ್ಕ್ವಾಡ್ ರಚನೆಗೂ ಪೊಲೀಸರಿಗೆ ಸೂಚಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಧ್ಯಮಗಳ ವಿರುದ್ಧ ಹರಿಹಾಯ್ದಿರುವುದು ತಪ್ಪು: ಬಸವರಾಜ ರಾಯರೆಡ್ಡಿ