Publish Date: Wed, 22 Mar 2017 (19:45 IST)
Updated Date: Wed, 22 Mar 2017 (19:48 IST)
ಮಾಧ್ಯಮಗಳ ವಿರುದ್ಧ ಹರಿಹಾಯ್ದಿರುವುದು ತಪ್ಪು. ಯಾರೇ ತಪ್ಪು ಮಾಡಲಿ ಮಾಧ್ಯಮಗಳು ಬೆಳಕಿಗೆ ತರುತ್ತೇವೆ ಎಂದು ಉನ್ನತ ಶಿಕ್ಷಣ ಖಾತೆ ಸಚಿವ ಬಸವರಾಜ ರಾಯರೆಡ್ಡಿ ಮಾಧ್ಯಮಗಳ ಪರ ಬ್ಯಾಟಿಂಗ್ ಮಾಡಿದ್ದಾರೆ.
ಕುಂಬಳಕಾಯಿ ಕಳ್ಳ ಅಂದರೆ, ಬೆನ್ನು ಮುಟ್ಟಿ ನೋಡಿಕೊಳ್ಳುವುದು ಯಾಕೆ? ಜನಪ್ರತಿನಿಧಿಗಳು ತಪ್ಪು ಮಾಡಿದಾಗ ಅದನ್ನು ಜನತೆಯ ಮುಂದಿಡುವುದು ಮಾಧ್ಯಮಗಳ ಕರ್ತವ್ಯವಾಗಿದೆ ಎಂದರು.
ವಿಧಾನಸಭೆ ಅಧಿವೇಶನದಲ್ಲಿ ಬಹುತೇಕ ಶಾಸಕರು ಮಾಧ್ಯಮಗಳ ವಿರುದ್ಧ ಕೆಂಡಕಾರುತ್ತಿರುವಾಗ ಏಕಾಂಗಿಯಾಗಿಯೇ ಸಚಿವ ರಾಯರೆಡ್ಡಿ ಮಾಧ್ಯಮಗಳ ಪರವಹಿಸಿ, ತಮ್ಮ ಅಭಿಪ್ರಾಯವನ್ನು ಮಂಡಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.