Select Your Language

Notifications

webdunia
webdunia
webdunia
webdunia

ಫೇಸ್ಬುಕ್`ನಲ್ಲಿ ಅತ್ಯಾಚಾರದ ದೃಶ್ಯ ಲೈವ್ ಮಾಡಿದ ಕಾಮುಕರು..!

webdunia
ಚಿಕಾಗೋ , ಬುಧವಾರ, 22 ಮಾರ್ಚ್ 2017 (18:40 IST)
ಕಾಮುಕರ ಅಟ್ಟಹಾಸಕ್ಕೆ ಮಿತಿಯೇ ಇಲ್ಲದಂತಾಗಿದೆ. ಚಿಕಾಗೋದಲ್ಲಿ 15 ವರ್ಷದ ಹುಡುಗಿ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಕಾಮುಕರು ಫೇಸ್ಬುಕ್ ಲೈವ್ ಮಾಡಿರುವ ಘಟನೆ ವರದಿಯಾಗಿದೆ.

ಈ ದುರಂತ ಘಟನೆ ಫೇಸ್ಬುಕ್`ನಲ್ಲಿ ಲೈವ್ ಮಾಡಲಾಗಿದೆ ಎಂದು ಸಂತ್ರಸ್ಥೆ ಸಂಬಂಧಿಕರು ತಿಳಿಸಿದ್ದು, ಹತ್ತಾರು ಜನ ನೋಡಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಐದಾರು ಕಾಮುಕರನ್ನ ಈಗಾಗಲೇ ಪೊಲೀಸರು ಗುರ್ತಿಸಿದ್ದು, ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಈ ಘಟನೆ ಮತ್ತೊಂದು ದುರಂತವೆಂದರೆ ಹತ್ತಾರು ಮಂದಿ ಫೇಸ್ಬುಕ್ ಮತ್ತು ಘಟನಾ ಸ್ಥಳದಲ್ಲೇ ಈ ಕೃತ್ಯವನ್ನ ನೋಡಿದರೂ ಯಾರೊಬ್ಬರೂ 911ಗೆ ಕರೆ ಮಾಡಿ ಮಾಹಿತಿ ನೀಡುವ ಗೋಜಿಗೆ ಹೋಗಿಲ್ಲ. ಈ ಬಗ್ಗೆ ಪೊಲೀಸರು ಸಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಭಾನುವಾರ ಶಾಪಿಂಗ್`ಗೆ ತೆರಳಿದ್ದ ಮಗಳು ನಾಪತ್ತೆಯಾದ ಬಗ್ಗೆ ಅದಾಗಲೇ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಫೇಸ್ಬುಕ್ ಲೈವ್`ನಲ್ಲಿ ಮಗಳ ಮೇಲೆ ನಡೆದ ಲೈಂಗಿಕ ಹಲ್ಲೆ ಕಂಡು ಆಘಾತಕ್ಕೊಳಗಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯರನ್ನು ಶಾಶ್ವತವಾಗಿ ಜೈಲಿಗೆ ಕಳಿಸ್ತೇನೆ: ಯಡಿಯೂರಪ್ಪ ಗುಡುಗು