Select Your Language

Notifications

webdunia
webdunia
webdunia
webdunia

ಉಲಾನ್‌ಬಾತರ್‌ನಲ್ಲಿ ಸಿಲುಕಿಕೊಂಡಿರುವ ಪ್ರಯಾಣಿಕರನ್ನು ಕರೆತರಲು ಹೊರಟ ಮತ್ತೊಂದು AI ವಿಮಾನ

Ulaanbaatar Air India Plane Case

Sampriya

ನವದೆಹಲಿ , ಮಂಗಳವಾರ, 4 ನವೆಂಬರ್ 2025 (16:34 IST)
ನವದೆಹಲಿ: ಸ್ಯಾನ್‌ಫ್ರಾನ್ಸಿಸ್ಕೊ – ದೆಹಲಿ ಮಾರ್ಗದಲ್ಲಿ 228 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಏರ್‌ ಇಂಡಿಯಾ ವಿಮಾನವು ತಾಂತ್ರಿಕ ದೋಷದಿಂದ ಮಂಗೋಲಿಯಾದ ರಾಜಧಾನಿ ಉಲಾನ್‌ಬಾತರ್‌ನಲ್ಲಿ ಲ್ಯಾಂಡ್ ಆಗಿದೆ. ಇದೀಗ ಪ್ರಯಾಣಿಕರನ್ನು ಕರೆತರಲು ಮತ್ತೊಂದು ಏರ್‌ ಇಂಡಿಯಾ ವಿಮಾನ ಹೋಗಿದೆ. 

ಕಂಪನಿ ಹೊರಡಿಸಿರುವ ಪ್ರಕಟನೆ ಪ್ರಕಾರ, ವಿಮಾನವು ಬುಧವಾರ ಬೆಳಿಗ್ಗೆ ಭಾರತಕ್ಕೆ ಮರಳಲಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಏರ್‌ ಇಂಡಿಯಾಗೆಸೇರಿದ ಬೋಯಿಂಗ್ 777 ವಿಮಾನದಲ್ಲಿ 17 ಸಿಬ್ಬಂದಿ ಹಾಗೂ 228 ಪ್ರಯಾಣಿಕರು ಸೇರಿ ಒಟ್ಟು 245 ಜನ ಇದ್ದರು. ಸ್ಯಾನ್‌ಫ್ರಾನ್ಸಸಿಸ್ಕೊದಿಂದ ಈ ವಿಮಾನವು ನ. 2ರಂದು ಹೊರಟಿತ್ತು. ಕೋಲ್ಕತ್ತ ಮಾರ್ಗವಾಗಿ ಈ ವಿಮಾನವು ದೆಹಲಿಗೆ ಪ್ರಯಾಣಿಸುತ್ತಿತ್ತು.

ಆದರೆ ಮಾರ್ಗ ಮಧ್ಯೆ ತಾಂತ್ರಿಕ ಸಮಸ್ಯೆ ಎದುರಾಗಿದ್ದರಿಂದ ಉಲಾನ್‌ಬಾತರ್‌ನಲ್ಲಿ ತುರ್ತು ಭೂಸ್ಪರ್ಶವಾಗಿದೆ. 

ಇಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಕರೆತರಲು ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನವನ್ನು ಏರ್ ಇಂಡಿಯಾ ಕಳುಹಿಸುತ್ತಿದೆ. ಈ ಕುರಿತಂತೆ ಸ್ಥಳೀಯ ಅಧಿಕಾರಿಗಳು ಮತ್ತು ಭಾರತೀಯ ರಾಯಭಾರ ಕಚೇರಿಗೆ ಕಂಪನಿ ಮಾಹಿತಿ ನೀಡಿದೆ. ಪ್ರಯಾಣಿಕರಿಗೆ ವಸತಿ ಸೌಕರ್ಯ ನೀಡಲಾಗಿದೆ ಎಂದೂ ಹೇಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು: ನಾಯಿಯನ್ನು ಕೊಂದು ಕ್ರೌರ್ಯ ಮೆರೆದಿದ್ದ ಪಾಪಿ ಕೊನೆಗೂ ಅರೆಸ್ಟ್‌