Select Your Language

Notifications

webdunia
webdunia
webdunia
webdunia

ಬೆಂಗಳೂರು: ನಾಯಿಯನ್ನು ಕೊಂದು ಕ್ರೌರ್ಯ ಮೆರೆದಿದ್ದ ಪಾಪಿ ಕೊನೆಗೂ ಅರೆಸ್ಟ್‌

Bengaluru Dog Crime

Sampriya

ಬೆಂಗಳೂರು , ಮಂಗಳವಾರ, 4 ನವೆಂಬರ್ 2025 (15:53 IST)
Photo Credit X
ಬೆಂಗಳೂರು: ಲಿಫ್ಟ್‌ನಲ್ಲಿ ನೆಲಕ್ಕೆ ಬಡಿದು ನಾಯಿಯನ್ನು ಕೊಂದು ಕ್ರೌರ್ಯ ಮೆರೆದಿದ್ದ ಕೆಲಸದಾಕೆ ಮಹಿಳೆಯನ್ನು ಪೊಲೀಸರು ಅರೆಸ್ಟ್  ಮಾಡಿದ್ದಾರೆ. 

ಬಾಗಲೂರಿನ ಅಪಾರ್ಟ್‌ಮೆಂಟ್‌ವೊಂದರ ಲಿಫ್ಟ್‌ನಲ್ಲಿ ನಾಯಿಮರಿಯನ್ನು ನೆಲಕ್ಕೆ ಬಡಿದು ಕೊಂದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.  ಈ ಘಟನೆ ನವೆಂಬರ್ 1 ರಂದು ನಡೆದಿದೆ. 

ನಾಯಿಗಳನ್ನು ಲಿಫ್ಟ್‌ನೊಳಗೆ ತಂದೆ ಕೆಲಸದಾಕೆ ಅದನ್ನು ನೆಲಕ್ಕೆ ಬಡಿಯುತ್ತಾಳೆ. ಇದು ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿದೆ. 

ಈ ಸಂಬಂಧ 23 ವರ್ಷದ ಮಹಿಳೆಯೊಬ್ಬರು ದೂರು ಸಲ್ಲಿಸಿದ್ದು, ತನ್ನ ನಾಲ್ಕು ವರ್ಷದ ನಾಯಿ ಗೋಫಿಯನ್ನು ನೋಡಿಕೊಳ್ಳಲು ಪುಷ್ಪಲತಾ ಎಂಬಾಕೆಯನ್ನು ತಿಂಗಳಿಗೆ ರೂ.23,000 ಸಂಬಳಕ್ಕೆ ಸೆಪ್ಟೆಂಬರ್ 11 ರಿಂದ ನೇಮಿಸಿಕೊಳ್ಳಲಾಗಿತ್ತು. ನವೆಂಬರ್ 1 ರಂದು ನಾಯಿ ಸಾವನ್ನಪ್ಪಿತ್ತು. ಹೇಗೆ ನಾಯಿ ಸಾವನ್ನಪ್ಪಿತ್ತು ಎಂದು ಪುಷ್ಪಲತಾಳನ್ನು ಪ್ರಶ್ನಿಸಿದಾಗ ಗೊತ್ತಿಲ್ಲ ಎಂದಿದ್ದರು. 

ತದನಂತರ ಸಿಸಿವಿಟಿ ದೃಶ್ಯಾವಳಿ ಪರಿಶೀಲಿಸಿದಾಗ ಲಿಫ್ಟ್ ಬಳಿ ನಾಯಿ ಇರುವುದು ಕಂಡುಬಂದಿತ್ತು. ಆಕೆ ನಾಯಿಯನ್ನು ಲಿಫ್ಟ್ ನೊಳಗೆ ಕರೆದೊಯ್ದು, ನೆಲಕ್ಕೆ ಬಡಿದಿರುವುದರಿಂದ ಅದು ಸಾವನ್ನಪ್ಪಿದೆ ಎಂದು ದೂರುದಾರ ಮಹಿಳೆ ಆರೋಪಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತಾದ ಸೆಕ್ಷನ್ 325 ( ಪ್ರಾಣಿಯನ್ನು ಕೊಲ್ಲುವ ಅಥವಾ ಅಂಗವಿಕಲಗೊಳಿಸುವ ಮೂಲಕ ಮಾಡುವ ದುಷ್ಕೃತ್ಯ) ಅಡಿಯಲ್ಲಿ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಬಾನುವಾರ ಪುಷ್ಪಲತಾ ಅವರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಮೋದಿ ಯುವಜನತೆಯನ್ನು ರೀಲ್ಸ್ ದಾಸರನ್ನಾಗಿಸಿದ್ದಾರೆ: ರಾಹುಲ್