ಮೆಡಿಸನ್ ಗೆ ಸಂಬಂಧಿಸಿದ ಇಂಗ್ಲೀಷ್ ಪತ್ರಿಕೆಯೊಂದು ಈ ವಿಚಿತ್ರ ಕಾಯಿಲೆಯ ಬಗ್ಗೆ ವರದಿ ಪ್ರಕಟಿಸಿದ್ದು, ಗಂಟಲು ನೋವು, ಹೊಟ್ಟೆ ನೋವು, ಚರ್ಮದ ಕಾಂತಿ ಮಂಕಾಗಿರುವುದು ಹಾಗೂ ಕಪ್ಪು ಬಣ್ಣದ ಮೂತ್ರ ವಿಸರ್ಜನೆ ಸಮಸ್ಯೆ ಹಿನ್ನೆಲೆಯಲ್ಲಿ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು.
ಟೊರೆಂಟೊದಲ್ಲಿನ ಮಕ್ಕಳ ಚಿಕಿತ್ಸಾ ಆಸ್ಪತ್ರೆ ವೈದ್ಯರು ಆರಂಭದಲ್ಲಿ ಬಾಲಕನಿಗೆ ಜಾಂಡಿಸ್ ಆಗಿರಬಹುದು ಎಂದು ಶಂಕಿಸಿದ್ದರು. ಸಾಮಾನ್ಯವಾಗಿ ಜಾಂಡಿಸ್ ಪ್ರಮಾಣ ಹೆಚ್ಚಾದರೆ, ನಾಲಗೆ, ಕಣ್ಣು ಹಾಗೂ ಚರ್ಮ ಹಳದಿ ಬಣ್ಣಕ್ಕೆ ತಿರುಗುತ್ತದೆ ಎಂದು ಹೇಳಿದ್ದರು.
ನಂತರ ಕೆಲವು ಪರೀಕ್ಷೆ ಮಾಡಿದಾಗ ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡು ಬರುವ ಎಪಿಸ್ಟೈನ್ ಬಾರ್ ವೈರಸ್ ಇರಬಹುದು ಎಂದು ಹೇಳಿದರು. ನಂತರ ಅನಿಮಿಯಾ ಎಂದು ಶಂಕಿಸಲಾಯಿತು. ಆದರೆ ಶೀತದಲ್ಲಿ ಇರಿಸಿ ತಪಾಸಣೆಗೊಳಪಡಿಸಿದಾಗ ಹಾರ್ಮೊನ್ ನಲ್ಲಿ ಕಂಡು ಬಂದ ವಿಚಿತ್ರ ವೈರಸ್ ನಿಂದಾಗಿ ಈ ಸಮಸ್ಯೆ ಕಂಡು ಬಂದಿದ್ದು, ಇದು ತನ್ನದೇ ಕೆಂಪುರಕ್ತ ಕಣಗಳನ್ನು ಕೊಲ್ಲುತ್ತಿದ್ದವು.
ಕೂಡಲೇ ಮಗುವಿಗೆ ರಕ್ತ ಶುದ್ದೀಕರಣ ಹಾಗೂ ಬ್ಲಡ್ ಟ್ರಾನ್ಸ್ ಫ್ಯೂಶನ್ ಮೂಲಕ ಚಿಕಿತ್ಸೆ ನೀಡಲಾಗಿದ್ದು, ಸತತ 7 ವಾರಗಳ ಚಿಕಿತ್ಸೆ ನಂತರ ಬಾಲಕ ಇದೀಗ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.