Webdunia - Bharat's app for daily news and videos

Install App

170ಕಿಮೀ ಆಧ್ಯಾತ್ಮಿಕ ಪಾದಯಾತ್ರೆಯನ್ನು ಮುಗಿಸಿದ ಅನಂತ್ ಅಂಬಾನಿ ಮಾತು ಕೇಳಿದ್ರೆ ಶಾಕ್‌ ಆಗ್ತೀರಾ

Sampriya
ಭಾನುವಾರ, 6 ಏಪ್ರಿಲ್ 2025 (11:45 IST)
Photo Courtesy X
ದ್ವಾರಕ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ನಿರ್ದೇಶಕ ಅನಂತ್ ಅಂಬಾನಿ ಅವರು ಭಾನುವಾರ ಮುಂಜಾನೆ ಶ್ರೀ ದ್ವಾರಕಾಧೀಶ ದೇವಸ್ಥಾನಕ್ಕೆ ಆಗಮಿಸಿದರು. ಮಾರ್ಚ್ 29 ರಂದು ಜಾಮ್‌ನಗರದಿಂದ ಗುಜರಾತ್‌ಗೆ 170 ಕಿಲೋಮೀಟರ್ ಆಧ್ಯಾತ್ಮಿಕ ಪಾದಯಾತ್ರೆಯನ್ನು ಈ ಮೂಲಕ ಪೂರ್ಣಗೊಳಿಸಿದರು.

ತಮ್ಮ ಯಾತ್ರೆಯ ಸಮಾರೋಪದಲ್ಲಿ ಮಾತನಾಡಿದ ಅಂಬಾನಿ, ಭಗವಾನ್ ದ್ವಾರಕಾಧೀಶರಿಗೆ ಕೃತಜ್ಞತೆ ಸಲ್ಲಿಸುತ್ತಾ, "ನೋಡಿ, ಇದು ನನ್ನದೇ ಆದ ಆಧ್ಯಾತ್ಮಿಕ ಪ್ರಯಾಣ. ನಾನು ಇದನ್ನು ದೇವರ ಹೆಸರನ್ನು ತೆಗೆದುಕೊಳ್ಳುವ ಮೂಲಕ ಪ್ರಾರಂಭಿಸಿದೆ ಮತ್ತು ಅವರ ಹೆಸರನ್ನು ತೆಗೆದುಕೊಳ್ಳುವ ಮೂಲಕ ಅದನ್ನು ಕೊನೆಗೊಳಿಸುತ್ತೇನೆ. ನಾನು ಭಗವಾನ್ ದ್ವಾರಕಾಧೀಶರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಆಧ್ಯಾತ್ಮಿಕ ಪ್ರಯಾಣದಲ್ಲಿ ನನ್ನೊಂದಿಗೆ ಸೇರಿದ ಜನರಿಗೆ ನಾನು ಕೃತಜ್ಞನಾಗಿದ್ದೇನೆ. ನನ್ನ ಹೆಂಡತಿ ಮತ್ತು ತಾಯಿ ಶೀಘ್ರದಲ್ಲೇ ತಲುಪಲಿದ್ದಾರೆ ಎಂದರು.

ಅನಂತ್ ಅಂಬಾನಿ ಅವರು ತಮ್ಮ ಹುಟ್ಟುಹಬ್ಬದ ಮೊದಲು ಮಾರ್ಚ್ 29ರಂದು ಆಧ್ಯಾತ್ಮಿಕ ಪ್ರಯಾಣ ಪ್ರಾರಂಭಿಸಿದರು. ಇದೀಗ ಅಂದಾಜು 170 ಕಿಲೋಮೀಟರ್ ದೂರ ನಡೆದು ತಮ್ಮ ಪಾದಯಾತ್ರೆಯನ್ನು ಕೊನೆಗೊಳಿಸಿದರು.

ಪಾದಯಾತ್ರೆಯ ಕೊನೆಯ ದಿನದಂದು, ಅನಂತ್ ಅಂಬಾನಿ ಅವರ ಪತ್ನಿ ರಾಧಿಕಾ ಮರ್ಚೆಂಟ್ ಮತ್ತು ತಾಯಿ ನೀತಾ ಅಂಬಾನಿ ಅವರೊಂದಿಗೆ ಇದ್ದರು.

ಅನಂತ್ ಅಂಬಾನಿ ಅವರು ತಮ್ಮ ತಂದೆ ಮುಖೇಶ್ ಅಂಬಾನಿ ಅವರೊಂದಿಗೆ ಆಧ್ಯಾತ್ಮಿಕ ನಡಿಗೆಗೆ ಹೋಗುವ ನಿರ್ಧಾರದ ಬಗ್ಗೆ ಮಾತನಾಡಿದ ಸಮಯವನ್ನು ನೆನಪಿಸಿಕೊಂಡರು. ಜಾಮ್ ನಗರದಿಂದ ದ್ವಾರಕಾದವರೆಗೆ ಪಾದಯಾತ್ರೆ ನಡೆಸಲು ಪ್ರೇರೇಪಿಸಿದ್ದಕ್ಕಾಗಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಿಗೆ ಅವರು ಕೃತಜ್ಞತೆ ಸಲ್ಲಿಸಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಟ್ರೇ ಮೈಸೂರು ಸ್ಯಾಂಡಲ್ ಸೋಪ್‌ಗೆ ನಾನೇ ಫ್ರೀಯಾಗಿ ರಾಯಭಾರಿಯಾಗ್ತೀನಿ: ವಾಟಾಳ್ ನಾಗರಾಜ್‌

ಕರಾಳ ನೆನಪು ಮಾಸುವ ಮುನ್ನವೇ ಮತ್ತೆ ಕೋವಿಡ್ ಭೀತಿ: ಸಿಲಿಕಾನ್ ಸಿಟಿಯಲ್ಲಿ ಮಗುವಿಗೆ ಸೋಂಕು ದೃಢ

Gang Rape: ಸಾಂಗ್ಲಿಯಲ್ಲಿ MBBS ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್‌

ರಾಮನಗರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಅಧಿಕಾರ ಸರ್ಕಾರಕ್ಕಿದೆ: ಸಿದ್ದರಾಮಯ್ಯ

ಅರ್ಜುನ್ ಜನ್ಯಾ, ಹಂಸಲೇಖ ಸೇರಿದಂತೆ ಸಂಗೀತ ನಿರ್ದೇಶಕರಿಗೆ ಪತ್ರ ಬರೆದ ಡಿಕೆ ಶಿವಕುಮಾರ್

ಮುಂದಿನ ಸುದ್ದಿ
Show comments