Select Your Language

Notifications

webdunia
webdunia
webdunia
webdunia

ಕಾಶ್ಮೀರದಲ್ಲಿ ಕಲ್ಲೆಸೆಯುವವರಿಗೆ ಉತ್ತರ ನೀಡಲು ಸಿದ್ಧಗೊಂಡಿದೆ ಮಹಿಳಾ ಪಡೆ!

ಕಾಶ್ಮೀರದಲ್ಲಿ ಕಲ್ಲೆಸೆಯುವವರಿಗೆ ಉತ್ತರ ನೀಡಲು ಸಿದ್ಧಗೊಂಡಿದೆ ಮಹಿಳಾ ಪಡೆ!
Kashmir , ಶುಕ್ರವಾರ, 28 ಏಪ್ರಿಲ್ 2017 (07:56 IST)
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ಸೇನೆಯ ವಿರುದ್ಧ ಪ್ರತಿಭಟನೆಯ ಅಂಗವಾಗಿ ಕಲ್ಲೆಸೆದು ಹಿಂಸಾಚಾರಕ್ಕಿಳಿದಿದ್ದರು. ಇವರನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಕೊನೆಗೂ ಒಂದು ಐಡಿಯಾ ಮಾಡಿದೆ.

 
ಅದರಂತೆ ಇಲ್ಲಿ ಭದ್ರತೆಗಾಗಿ ಅದರಲ್ಲೂ ವಿಶೇಷವಾಗಿ ಕಲ್ಲೆಸೆದು ಪ್ರತಿಭಟನೆ ಮಾಡುವವರ ನಿಗ್ರಹಕ್ಕಾಗಿ 1000 ಮಹಿಳಾ ಪೊಲೀಸರನ್ನು ನಿಯೋಜಿಸಲು ಸಿದ್ಧತೆ ನಡೆಸಿದೆ. ಕಾಶ್ಮೀರ ಕಣಿವೆಯಲ್ಲಿ ಕಲ್ಲೆಸೆತ ಮಾಡುವ ಪ್ರತಿಭಟನಾಕಾರರನ್ನು ಹತ್ತಿಕ್ಕುವುದೇ ಇವರ ಮುಖ್ಯ ಉದ್ದೇಶವಾಗಲಿದೆ.

ಫೈವ್ ಇಂಡಿಯಾ ರಿಸರ್ವ್ಡ್ ಬೆಟಾಲಿಯನ್ (ಐಆರ್ ಬಿಎಸ್) ಪಡೆಯ ಭಾಗವಾಗಿ ಈ ಮಹಿಳಾ ಅಧಿಕಾರಿಗಳು ಕೆಲಸ ಮಾಡಲಿದ್ದಾರೆ. ಮಹಿಳಾ ಅಧಿಕಾರಿಗಳ ವಲಯದಲ್ಲೂ ಇಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಳ್ಳುವುದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.

ನಿನ್ನೆ ಗೃಹಸಚಿವ ರಾಜನಾಥ್ ಸಿಂಗ್ ಜತೆ ಸಭೆಯ ವೇಳೆ ಈ ನಿರ್ಧಾರಕ್ಕೆ ಬರಲಾಯಿತು. ಐಆರ್ ಬಿಎಸ್ ಪಡೆಯಲ್ಲಿ ಹೆಚ್ಚಾಗಿ ಸ್ಥಳೀಯರಿಗೆ ಉದ್ಯೋಗ ನೀಡಲಾಗುತ್ತದೆ. ಹೀಗಾಗಿ ಈ ಐಡಿಯಾ ವರ್ಕೌಟ್ ಆಗಬಹುದು ಎಂಬ ಲೆಕ್ಕಾಚಾರ ಸರ್ಕಾರದ್ದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಕಾರ್ಪೋರೇಟರ್ ಗಳ ಕೈಯಿಂದ ಆಣೆ ಮಾಡಿಸಿಕೊಂಡ ಸಿಎಂ ಕೇಜ್ರಿವಾಲ್