ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋಲು ಕಂಡ ಮೇಲೆ ಪಕ್ಷದ ಒಬ್ಬೊಬ್ಬ ನಾಯಕರು ಪಕ್ಷ ಬಿಡುತ್ತಿರುವುದನ್ನು ನೋಡಿ ಸಿಎಂ ಕೇಜ್ರಿವಾಲ್ ತಮ್ಮ ಕಾರ್ಪೋರೇಟರ್ ಗಳಿಂದ ಆಣೆ ಮಾಡಿಸಿಕೊಂಡಿದ್ದಾರೆ.
ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಎಪಿ ಪಕ್ಷದಿಂದ 48 ಅಭ್ಯರ್ಥಿಗಳು ಗೆಲುವು ಕಂಡಿದ್ದರು. ಈ ವಿಜಯಿ ಅಭ್ಯರ್ಥಿಗಳ ಜತೆ ಸಭೆ ನಡೆಸಿದ ಕೇಜ್ರಿವಾಲ್ ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲವೆಂದು ಪ್ರಮಾಣ ಮಾಡಿಸಿಕೊಂಡರು.
ವಿರೋಧಿಗಳು ನಿಮ್ಮನ್ನು ಸೆಳೆಯಲು ಯತ್ನಿಸಬಹುದು. ಅವರು ನಿಮಗೆ 10 ಕೋಟಿಯವರೆಗೆ ಆಮಿಷ ಒಡ್ಡಬಹುದು. ಆದರೆ ನೀವು ಅವರ ಬಲೆಗೆ ಬೀಳಬೇಡಿ. ಒಂದು ವೇಳೆ ಧಿಕ್ಕರಿಸಿ ಹೋದರೆ ತಕ್ಕ ಬೆಲೆ ತೆರಬೇಕಾದೀತು ಎಂದು ಕೇಜ್ರಿವಾಲ್ ತಮ್ಮ ಪಕ್ಷದ ಕಾರ್ಪೋರೇಟರ್ ಗಳಿಗೆ ಬೋಧನೆ ಮಾಡಿದ್ದಾರೆ.
ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಜತೆಗಿರುತ್ತೇವೆ ಎಂದು ನನಗೆ ಮಾತು ಕೊಡಿ ಎಂದು ಕೇಜ್ರಿವಾಲ್ ಪ್ರಮಾಣ ಮಾಡಿಸಿದ್ದಾರೆ. ಈ ವಿಡಿಯೋವನ್ನು ಯೂ ಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಲಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ