Select Your Language

Notifications

webdunia
webdunia
webdunia
webdunia

ಜೂನ್ 15ರೊಳಗೆ 1500 ಕೋಟಿ ರೂ. ಜಮೆ ಮಾಡದಿದ್ದರೆ ಮತ್ತೆ ಜೈಲಿಗಟ್ಟುತ್ತೇವೆ: ಸುಬ್ರತಾ ರಾಯ್`ಗೆ ಸುಪ್ರೀಂಕೋರ್ಟ್ ಎಚ್ಚರಿಕೆ

ಜೂನ್ 15ರೊಳಗೆ 1500 ಕೋಟಿ ರೂ. ಜಮೆ ಮಾಡದಿದ್ದರೆ ಮತ್ತೆ ಜೈಲಿಗಟ್ಟುತ್ತೇವೆ: ಸುಬ್ರತಾ ರಾಯ್`ಗೆ ಸುಪ್ರೀಂಕೋರ್ಟ್ ಎಚ್ಚರಿಕೆ
ನವದೆಹಲಿ , ಗುರುವಾರ, 27 ಏಪ್ರಿಲ್ 2017 (18:19 IST)
ಜೂನ್ 15ರೊಳಗೆ ಡೆಡ್ ಲೈನ್ ಅವಧಿ 1500 ಕೋಟಿ ರೂಪಾಯಿ ಪಾವತಿಸದಿದ್ದರೆ ಮತ್ತೆ ಜೈಲಿಗೆ ಕಳುಹಿಸುತ್ತೇವೆ ಎಂದು ಸಹರಾ ಮುಖ್ಯಸ್ಥ ಸುಬ್ರತಾ ರಾಯ್`ಗೆ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದೆ. ಜೂನ್ 19ರವರೆಗೆ ಸುಬ್ರತಾ ರಾಯ್ ಪೆರೋಲ್ ವಿಸ್ತರಿಸಿದ ಕೋರ್ಟ್ ಈ ಖಡಕ್ ಎಚ್ಚರಿಕೆ ನೀಡಿದೆ.
 

ಕಳೆದ ಬಾರಿ ಕೋರ್ಟ್`ಗೆ ವಿಚಾರಣೆ ವೇಳೆಯೇ ಕೋರ್ಟ್ ನೀಡಿದ ಮಾರ್ಗ ಸೂಚಿ ಪ್ರಕಾರವೇ ಹಣ ಪಾವತಿಸುತ್ತೇನೆ ಎಂದ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದ ಸುಬ್ರತೋ ರಾಯ್, ತಪ್ಪಿದ್ದಲ್ಲಿ ಜೈಲು ಶಿಕ್ಷೆ ಅನುಭವಿಸುವುದಾಗಿ ಹೇಳಿದ್ದರು. ಜೂನ್ 15 ರೊಳಗೆ 1,500 ಕೋಟಿ ರೂಪಾಯಿ ಮತ್ತು ಜುಲೈ 15ರೊಳಗೆ 522.22 ಕೋಟಿ ರೂಪಾಯಿಯನ್ನ ಸೆಬಿ-ಸಹಾರಾ ಖಾತೆಗೆ ಜಮಾ ಮಾಡುವುದಾಗಿ ಸುಬ್ರತಾ ರಾಯ್ ಪ್ರಮಾಣಪತ್ರ ಸಲ್ಲಿಸಿದ್ದರು. ನಿಗದಿತ ಸಮಯದಲ್ಲಿ ಹಣ ಜಮೆ ಮಾಡದಿದ್ದರೆ ಜೈಲಿಗಟ್ಟುವುದಾಗಿ ಕೋರ್ಟ್ ಎಚ್ಚರಿಸಿತ್ತು.

ಇದೇವೇಳೆ, ಜಸ್ಟೀಸ್ ರಂಜನ್ ಗೋಗೊಯ್ ಮತ್ತು ಎ.ಕೆ. ಸಿಕ್ರಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ಹಿಂದಿನ ಆದೇಶದಂತೆ 10 ಕೋಟಿ ರೂ. ಡೆಪಾಸಿಟ್ ಮಾಡಲು ವಿಫಲನಾದ ಚೆನ್ನೈ ಮೂಲದ ಪ್ರಕಾಶ್ ಸ್ವಾಮಿ ಬಂಧನಕ್ಕೆ ಆದೇಶಿಸಿದೆ. ನ್ಯಾಯಾಂಗ ನಿಂದನೆಯಡಿ ಈತನಿಗೆ ಒಂದು ತಿಂಗಳು ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈಶ್ವರಪ್ಪಗೆ ಟಾಂಗ್ ಕೊಡಲು ಯಡಿಯೂರಪ್ಪ ಮಾಸ್ಟರ್ ಪ್ಲಾನ್.. ಎಚ್. ವಿಶ್ವನಾಥ್ ಕರೆತರಲು ತಂತ್ರ..?