Publish Date: Mon, 05 Feb 2018 (09:31 IST)
Updated Date: Mon, 05 Feb 2018 (09:37 IST)
ಲಕ್ನೋ: ಹೆಣ್ಣು ತನ್ನ ಸಂಸಾರದ ವಿಚಾರಕ್ಕೆ ಬಂದರೆ ದುರ್ಗಾವತಾರ ತಾಳಲೂ ಹಿಂದೆ ಮುಂದೆ ನೋಡುವುದಿಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿ.
ಉತ್ತರ ಪ್ರದೇಶದಲ್ಲಿ ಗಂಡನ ರಕ್ಷಣೆಗಾಗಿ ಮಹಿಳೆಯೊಬ್ಬರು ಗನ್ ಹಿಡಿದಿದ್ದಾಳೆ. ಲಕ್ನೋದಲ್ಲಿ ಈ ಘಟನೆ ನಡೆದಿದೆ. ಅಬಿದ್ ಆಲಿ ಎಂಬಾತನನ್ನು ದುಷ್ಕರ್ಮಿಗಳ ಗುಂಪೊಂದು ಮನೆಯೆದುರು ಸಾರ್ವಜನಿಕವಾಗಿಯೇ ಹಿಗ್ಗಾ ಮುಗ್ಗಾ ಮಾರಕಾಸ್ತ್ರ ಬಳಸಿ ಥಳಿಸುತ್ತಿತ್ತು. ಆದರೆ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ.
ಕೊನೆಗೆ ಅಬಿದ್ ಆಲಿ ಸಹಾಯಕ್ಕೆ ಸ್ವತಃ ಪತ್ನಿ ರಂಗಕ್ಕಿಳಿದಳು. ವೃತ್ತಿಯಲ್ಲಿ ವಕೀಲೆಯಾಗಿರುವ ಆಕೆ ತನ್ನ ಪರವಾನಗಿ ಪಡೆದ ಪಿಸ್ತೂಲ್ ಬಳಸಿ ದುಷ್ಕರ್ಮಿಗಳತ್ತ ಗುಂಡು ಹಾರಿಸಲಾರಂಭಿಸಿದಳು. ತಕ್ಷಣ ದುಷ್ಕರ್ಮಿಗಳು ಪ್ರಾಣ ಭಯದಿಂದ ಕಾಲ್ಕಿತ್ತರು. ಈ ದೃಶ್ಯವೆಲ್ಲಾ ಅಲ್ಲೇ ಇದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ