Webdunia - Bharat's app for daily news and videos

Install App

ಪೋಲಿಸಪ್ಪನಿಗೆ ಬಿತ್ತು ಮಹಿಳೆಯಿಂದ ಚಪ್ಪಲಿ ಏಟು.....! ವೈರಲ್ ಆಗಿದೆ ವೀಡಿಯೊ

ಗುರುಮೂರ್ತಿ
ಮಂಗಳವಾರ, 6 ಫೆಬ್ರವರಿ 2018 (16:27 IST)
ಇತ್ತೀಚಿಗೆ ದೇಶದೆಲ್ಲೆಡೆ ಮಹಿಳೆಯರ ಮೇಲಿನ ಅತ್ಯಾಚಾರ, ಕಿರುಕುಳದ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಹಾಡಹಗಲೇ ಕರ್ತವ್ಯ ನಿರತ ಪೊಲೀಸ್ ಒಬ್ಬರು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದು, ಇದರಿಂದ ಕೋಪಗೊಂಡ ಮಹಿಳೆ ಪೊಲೀಸಪ್ಪನಿಗೆ ಚಪ್ಪಲಿಯಿಂದ ಹೊಡೆದಿರುವ ಘಟನೆ ಹರಿಯಾಣಾದಲ್ಲಿ ಬೆಳಕಿಗೆ ಬಂದಿದೆ. ಅದರ ಕುರಿತಾದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಪೊಲೀಸ್ ಇಲಾಖೆಯ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.
ಇತ್ತೀಚಿಗೆ ಹರಿಯಾಣದಲ್ಲಿ ನೆಡೆದಿರುವ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಪೊಲೀಸರೊಬ್ಬರು ಸಾರ್ವಜನಿಕ ಪ್ರದೇಶದಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿರುವುದು ಬಾರಿ ಟೀಕೆಗೆ ಗುರಿಯಾಗಿದೆ. ಅಷ್ಟೇ ಅಲ್ಲ, ಹರಿಯಾಣ ಪೊಲೀಸರು ಜನವರಿ ತಿಂಗಳಲ್ಲಿ ನಡೆದ ಅತ್ಯಾಚಾರ ಪ್ರಕರಣಗಳ ತನಿಖೆ ನಡೆಸುತ್ತಿದ್ದು ಈ ಘಟನೆಯಿಂದ ಸ್ವತಃ ಹರಿಯಾಣ ಪೊಲೀಸರೇ ತಲೆ ತಗ್ಗಿಸುವ ಸ್ಥಿತಿ ಇದೀಗ ನಿರ್ಮಾಣವಾಗಿದೆ.
 
ಈ ಘಟನೆ ನಡೆದ ಸಂದರ್ಭದಲ್ಲಿ ಈ ಪೊಲೀಸ್ ಮಹಾಶಯ ಮಧ್ಯಪಾನ ಮಾಡಿದ್ದು ನಿಲ್ಲಲೂ ಆಗದಿರುವಂತ ಸ್ಥಿತಿಯಲ್ಲಿರುವುದು ಮತ್ತು ಆ ಸಮಯದಲ್ಲಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ವಿಫಲರಾಗಿರುವುದನ್ನು ನಾವು ಈ ವೀಡಿಯೊದಲ್ಲಿ ಕಾಣಬಹುದಾಗಿದೆ.
 
ಈ ಘಟನೆ ನಡೆದ ಸಂದರ್ಭದಲ್ಲಿ ಸಾಕಷ್ಟು ಜನರು ಸೇರಿದ್ದು ಇನ್ನು ಮುಂದೆ ಈ ತರಹದ ಅನುಚಿತ ವರ್ತನೆ ತೋರದಂತೆ ಪೊಲೀಸಪ್ಪನಿಗೆ ಬುದ್ಧಿ ಹೇಳಿದ್ದಾರೆ ಎನ್ನಲಾಗಿದೆ. ಮಾಹಿತಿಯ ಪ್ರಕಾರ, ಈ ಘಟನೆಯು ಹರಿಯಾಣಾ ರಾಜ್ಯದ ಹಿಸಾರ್ ಜಿಲ್ಲೆಯ 4 ನೇ ವಲಯದಲ್ಲಿ ನೆಡೆದಿದ್ದು, ಈ ಘಟನೆ ವೇಳೆ ಅಲ್ಲಿದ್ದ ಸ್ಥಳೀಯರು ಈ ಎಲ್ಲಾ ಘಟನೆಯನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಚಿತ್ರಿಸಿದ್ದಾರೆ ಎನ್ನಲಾಗಿದೆ.
 
ಇದೀಗ ಅದೇ ವೀಡಿಯೊ ಜಾಲತಾಣಗಳಲ್ಲಿ ವೈರಲ್ ‌ಆಗಿದ್ದು, ಸ್ಥಳೀಯ ವರದಿಗಳ ಪ್ರಕಾರ ಈ ವೀಡಿಯೊದಲ್ಲಿರುವುದು ಹರಿಯಾಣಾ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಡ್ ಕಾನ್ಟೇಬಲ್ ಎಂದು ಹೇಳಲಾಗಿದೆ.
 
ಒಟ್ಟಿನಲ್ಲಿ ಸಮಾಜದ ಒಳಿತನ್ನು ಕಾಪಾಡಬೇಕಾದ ಪೋಲಿಸರೇ ಇಂತಹ ಹೀನ ಕೃತ್ಯಕ್ಕೆ ಇಳಿದಿರುವುದು ಬೇಲಿಯೇ ಎದ್ದು ಹೊಲವನ್ನು ಮೇಯ್ದ ಹಾಗಿದೆ ಎಂಬುದು ಮಾತ್ರ ಗಮನಾರ್ಹ.
 
 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments