Select Your Language

Notifications

webdunia
webdunia
webdunia
webdunia

ಸಹೋದರನ ಮುಂದೆ ಯುವತಿಯ ಅತ್ಯಾಚಾರ

ಸಹೋದರನ ಮುಂದೆ ಯುವತಿಯ ಅತ್ಯಾಚಾರ

ಗುರುಮೂರ್ತಿ

ಬೆಂಗಳೂರು , ಗುರುವಾರ, 8 ಫೆಬ್ರವರಿ 2018 (16:14 IST)
23 ವರ್ಷದ ಯುವತಿಯ ಮೇಲೆ ಯುವಕನೋರ್ವನು ಅತ್ಯಾಚಾರ ನಡೆಸಿದ್ದು ಉತ್ತರ ಪ್ರದೇಶದ ಮುಜಾಫರ್‌ನಗರ್‌ದ ಕೊತ್ವಾಲಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ನಡೆಸಿದ್ದು, ಈ ವೇಳೆಯಲ್ಲಿ ಆಕೆಯ ಬುದ್ದಿಮಾಂಧ್ಯ ಸಹೋದರನ ಮುಂದೆಯೇ ಆರೋಪಿಯು ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಸಂತ್ರಸ್ತೆಯ ದೂರಿನ ಪ್ರಕಾರ ಕೊತ್ವಾಲಿ ಪೊಲೀಸ್ ಠಾಣಾ ವಲಯದಲ್ಲಿ ಕೆಲವು ಔಷಧಗಳನ್ನು ಖರೀದಿಸಿಕೊಂಡು ಬರಲು ಸಹೋದರನ ಜೊತೆಗೆ ಹೊರಗೆ ತೆರಳಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಅವಳು ಹೇಳಿದ್ದು, ಆರೋಪಿಯಾದ ಮೋನು ತನ್ನ ಮೋಟಾರು ಸೈಕಲ್‌ನಲ್ಲಿ ಅಂಗಡಿಯವರೆಗೂ ಬಿಡುವುದಾಗಿ ಅವರಿಗೆ ಹೇಳಿರುವುದಾಗಿ ತಿಳಿಸಿದ್ದಾಳೆ.
 
ನಂತರ ಅವರನ್ನು ತನ್ನ ಮೋಟಾರು ಸೈಕಲ್‌ನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯ ಬುದ್ದಿಮಾಂಧ್ಯ ಸಹೋದರನ ಮುಂದೆಯೇ ಅತ್ಯಾಚಾರವೆಸಗಿರುವುದಷ್ಟೇ ಅಲ್ಲ ಈ ವಿಷಯವನ್ನು ಯಾರಿಗಾದೂ ತಿಳಿಸಿದಲ್ಲಿ ತೊಂದರೆ ಮಾಡುವುದಾಗಿ ಬೆದರಿಕೆಯನ್ನು ಹಾಕಿದ್ದಾನೆ ಎನ್ನಲಾಗಿದೆ. ಈ ದೂರಿಗೆ ಸ್ಪಂದಿಸಿರುವ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಮುಸ್ಲಿಮರ ಅಗತ್ಯವಿಲ್ಲ: ಬಿಜೆಪಿ ಸಂಸದ ವಿನಯ್ ಕಟಿಯಾರ್