Select Your Language

Notifications

webdunia
webdunia
webdunia
webdunia

ಗಂಡಿನ ವೇಷ ಹಾಕಿ ಎರಡು ಮದುವೆ ಆದಳು..

ಗಂಡಿನ ವೇಷ ಹಾಕಿ ಎರಡು ಮದುವೆ ಆದಳು..

ನಾಗಶ್ರೀ ಭಟ್

ಬೆಂಗಳೂರು , ಗುರುವಾರ, 15 ಫೆಬ್ರವರಿ 2018 (19:09 IST)
ಮಹಿಳೆಯೊಬ್ಬಳು ಪುರುಷನ ವೇಷ ಧರಿಸಿ ವರದಕ್ಷಿಣೆಗಾಗಿ ಎರಡೆರಡು ಮದುವೆಯಾದ ಘಟನೆ ನೈನಿತಾಲ್ ಜಿಲ್ಲೆಯಲ್ಲಿ ನಡೆದಿದೆ. ನೈನಿತಾಲ್ ಜಿಲ್ಲೆಯಲ್ಲಿ ಒಬ್ಬ ಮಹಿಳೆಗೆ ವರದಕ್ಷಿಣೆಗಾಗಿ ಪೀಡಿಸಿದ್ದು ಅವರು ವರದಕ್ಷಿಣೆ ಕಿರುಕುಳದ ಅಡಿ ಕೇಸ್ ದಾಖಲಿಸಿದ್ದು ಉತ್ತರಖಾಂಡ ಪೋಲೀಸರು ಅವಳನ್ನು ನೈನಿತಾಲದಲ್ಲಿ ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಧಂಪುರ್ ನಿಮಾಸಿಯಾದ ಕೃಷ್ಣ ಸೇನ್ ಉರುಫ್ ಸ್ವೀಟೀ ಸೇನ್ ಅನ್ನು ಹಲ್ದ್ವಾನಿ ಪೋಲೀಸರು ಬಂಧಿಸಿದ್ದಾರೆ ಎಂದು ನೈನಿತಾಲ್‌ನ ಸುಪೀರಿಎಂಟೆಡ್ ಪೋಲೀಸ್ ಜನ್ಮಜಯ್ ಖಂದೂರಿ ತಿಳಿಸಿದ್ದಾರೆ. ಈ ಮಹಿಳೆ ಫೇಸ್‌ಬುಕ್‌ನಲ್ಲಿ ಹುಡುಗನಂತೆ ಪ್ರೊಫೈಲ್ ರಚಿಸಿ ಮಹಿಳೆಯರನ್ನು ಆಕರ್ಷಿಸಿ ಅವರನ್ನು ಮದುವೆಯಾಗುತ್ತಾಳೆ ಎಂದು ತಿಳಿದು ಬಂದಿದೆ.
 
ಪೋಲೀಸರು ಹೇಳುವಂತೆ ಕೃಷ್ಣ ಸೇನ್ ಎಂಬ ಹೆಸರಿನಲ್ಲಿ 2013 ರಲ್ಲಿ ಇವಳು ಫೇಸ್‌ಬುಕ್ ಖಾತೆಯನ್ನು ರಚಿಸಿದ್ದು ಪುರುಷನ ರೂಪದಲ್ಲಿ ತನ್ನ ಚಿತ್ರವನ್ನು ಪೋಸ್ಟ್ ಮಾಡಿದ್ದಾಳೆ. ನಂತರ ಹಲವಾರು ಮಹಿಳೆಯರೊಂದಿಗೆ ಚಾಟ್ ಮಾಡಿ ಅವರನ್ನು ಆಕರ್ಷಿಸುತ್ತಿದ್ದಳು. ಅವಳು 2014 ರಲ್ಲಿ ಹೀಗೆ ತನ್ನನ್ನು ಅಲಿಘಡದ ಸಿಎಫ್‌ಎಲ್ ಬಲ್ಬ್ ಉದ್ಯಮಿಯ ಮಗ ಎಂದು ಹೇಳಿಕೊಂಡು ಹುಡುಗಿಯ ಸ್ನೇಹವನ್ನು ಬೆಳೆಸಿಕೊಂಡು ಪುರುಷನ ವೇಷದಲ್ಲಿ ಅವಳನ್ನು ವಿವಾಹವಾಗಿದ್ದಳು. ನಂತರ ಸೇನ್ ವರದಕ್ಷಿಣೆಗಾಗಿ ತನ್ನ ಹೆಂಡತಿಗೆ ಪೀಡಿಸಲು ಪ್ರಾರಂಭಿಸಿದಳು ಮತ್ತು 8.5 ಲಕ್ಷ ರೂಪಾಯಿಗಳನ್ನು ಫ್ಯಾಕ್ಟರಿ ಪ್ರಾರಂಭಿಸುವ ಸಲುವಾಗಿ ತೆಗೆದುಕೊಂಡಳು.
 
ನಂತರ 2016 ರ ಏಪ್ರಿಲ್‌ನಲ್ಲಿ ಕಲಧುಂಗಿ ಪಟ್ಟಣದ ಇನ್ನೊಂದು ಹುಡುಗಿಯನ್ನು ಮದುವೆಯಾದಳು. ಆಶ್ಚರ್ಯವೆಂದರೆ ಸೇನ್ ಮೊದಲನೆ ಮದುವೆಯಲ್ಲಿ ಎರಡನೆ ಹೆಂಡತಿ ಅತಿಥಿಯಾಗಿ ಉಪಸ್ಥಿತಳಿದ್ದಳು. ಹಲ್ದವಾಣಿ ಎನ್ನುವ ಪ್ರದೇಶದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದು ತನ್ನ ಇಬ್ಬರೂ ಹೆಂಡತಿಯರನ್ನು ಸೇನ್ ಉಳಿಸಿದ್ದಳು.
 
ಕಲಧುಂಗಿಯ ಹುಡುಗಿಗೆ ಸೇನ್ ಮಹಿಳೆ ಎನ್ನುವುದು ತಿಳಿಯಿತಾದರೂ ಸೇನ್ ಅವಳಿಗೆ ದುಡ್ಡಿನ ಆಸೆ ತೋರಿಸಿ ಸುಮ್ಮನಾಗಿಸಿದಳು. ನಂತರದಲ್ಲಿ ಮೊದಲ ಹೆಂಡತಿಗೆ ವಿಷಯ ತಿಳಿದು ವರದಕ್ಷಿಣೆಯ ಕೇಸಿನಡಿಯಲ್ಲಿ ಹಲ್ದವಾಣಿ ಪೋಲೀಸ್ ಠಾಣೆಯಲ್ಲಿ ಕೇಸನ್ನು ದಾಖಲಿಸಿದ್ದು ಪೋಲೀಸರು ಅವಳನ್ನು ಬಂಧಿಸಿದ್ದಾರೆ ಎಂದು ಖಂದೂರಿ ತಿಳಿಸಿದ್ದಾರೆ.
 
ಸ್ವೀಟಿ ಸೇನ್ ಚಿಕ್ಕಂದಿನಿಂದಲೂ ಹುಡುಗರಂತೆಯೇ ವರ್ತಿಸುತ್ತಿದ್ದು ಹುಡುಗರಂತೆ ಕಾಣಲು ತನ್ನ ಕೂದಲನ್ನು ಕಟ್ ಮಾಡಿಕೊಂಡಿದ್ದೆ, ಬೈಕ್ ಓಡಿಸುತ್ತಿದ್ದೆ ಮತ್ತು ಸಿಗರೇಟ್ ಸೇದುತ್ತಿದ್ದೆ ಎಂದು ಇಂಟರಾಗೇಶನ್ ಸಮಯಲ್ಲಿ ಪೋಲೀಸರಿಗೆ ತಿಳಿಸಿದ್ದಾಳೆ. ವಿವಾಹದ ನಂತರ ತನ್ನ ಹೆಂಡತಿಯರಿಗೆ ತನ್ನ ದೇಹವನ್ನು ನೋಡಲು ಬಿಟ್ಟಿಲ್ಲ ಮತ್ತು ತನ್ನನ್ನು ಸ್ಪರ್ಶಿಸುವುದಕ್ಕೂ ಅವಕಾಶ ನೀಡಿಲ್ಲ ಎಂದು ಪೋಲೀಸರು ಹೇಳಿದ್ದಾರೆ.
 
ಪೋಲೀಸರು ಸ್ವೀಟಿ ಸೇನ್‌ಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು ಅದರಲ್ಲಿ ಅವಳು ಮಹಿಳೆ ಪುರುಷನಲ್ಲ ಎನ್ನುವುದು ಸಾಬೀತಾಗಿದೆ. ಸೇನ್ ಮದುವೆಯಾಗುವಾಗ ಅವಳ ಜೊತೆ ಬಂದ ಕುಟುಂಬದವರನ್ನೂ ಸಹ ಪೋಲೀಸರು ಹುಡುಕುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಕಾವೇರಿ ನೀರಿನ ತೀರ್ಪು, ಸುಪ್ರೀಂನತ್ತ ಎಲ್ಲರ ಚಿತ್ತ: ಜನಜೀವನ ಅಸ್ತವ್ಯಸ್ಥ ಸಾಧ್ಯತೆ