Select Your Language

Notifications

webdunia
webdunia
webdunia
webdunia

1 ಕೋಟಿ ಆಸ್ತಿಯನ್ನು ರಿಕ್ಷಾವಾಲಾಗೆ ಹಸ್ತಾಂತರಿಸಿದ ಮಹಿಳೆ!

1 ಕೋಟಿ ಆಸ್ತಿಯನ್ನು ರಿಕ್ಷಾವಾಲಾಗೆ ಹಸ್ತಾಂತರಿಸಿದ ಮಹಿಳೆ!
ಕಟಕ್ , ಸೋಮವಾರ, 15 ನವೆಂಬರ್ 2021 (09:30 IST)
ಕಟಕ್: ಎಲ್ಲರೂ ತಮ್ಮ ಮಕ್ಕಳಿಗೋ, ಕುಟುಂಬದವರಿಗೋ ತಮ್ಮ ಆಸ್ತಿಯನ್ನು ವರ್ಗಾಯಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಮಹಿಳೆ ತನ್ನ 1 ಕೋಟಿ ರೂ. ಆಸ್ತಿಯನ್ನು ಓರ್ವ ರಿಕ್ಷಾವಾಲಾನಿಗೆ ವರ್ಗಾಯಿಸಿ ಎಲ್ಲರೂ ಬೆರಗಾಗುವಂತೆ ಮಾಡಿದ್ದಾಳೆ.  ಅಷ್ಟಕ್ಕೂ ಆಕೆ ತನ್ನ ಸಮಸ್ತ ಆಸ್ತಿಯನ್ನು ರಿಕ್ಷಾವಾಲಾನಿಗೆ ಕೊಟ್ಟಿದ್ದೇಕೆ ಗೊತ್ತಾ?

63 ವರ್ಷದ ಮಹಿಳೆ ಮಿನಾಟಿ ಪಟ್ನಾಯಕ್ ತನ್ನ ಮೂರು ಮಹಡಿಯ ಬಂಗಲೆ, ಚಿನ್ನಾಭರಣ, ನಗದು ಸೇರಿದಂತೆ ಸಮಸ್ತ ಆಸ್ತಿಯನ್ನು ತನಗಾಗಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ರಿಕ್ಷಾವಾಲಾನ ಕುಟುಂಬಕ್ಕೆ ಧಾರೆಯೆರೆದಿದ್ದಾಳೆ.

ಕಳೆದ ವರ್ಷ ಮಿನಾಟಿ ಗಂಡ ಕಿಡ್ನಿ ವೈಫಲ್ಯದಿಂದ ತೀರಿಕೊಂಡಿದ್ದರು. ಅವರ ಏಕೈಕ ಪುತ್ರಿಯೂ ಇತ್ತೀಚೆಗೆ ಹೃದಯಾಘಾತದಿಂದ ತೀರಿಕೊಂಡಿದ್ದಳು. ಇಂತಹ ಕಷ್ಟದ ಸಮಯದಲ್ಲಿ ಸಂಬಂಧಿಕರು ಯಾರೂ ಸಹಾಯಕ್ಕೆ ಬರಲಿಲ್ಲ. ಬದಲಾಗಿ ರಿಕ್ಷಾವಾಲನ ಕುಟುಂಬವೇ ಆಕೆಯ ಬೆನ್ನಿಗೆ ನಿಂತಿತ್ತು. ಹೀಗಾಗಿ ತನ್ನೆಲ್ಲಾ ಆಸ್ತಿಯನ್ನು ಆತನಿಗೇ ಹಸ್ತಾಂತರಿಸುತ್ತಿರುವುದಾಗಿ ಮಿನಾಟಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಾವುದೇ ಧರ್ಮದ ಸಂಗಾತಿಯ ಆಯ್ಕೆ ವಯಸ್ಕರ ಹಕ್ಕು: ಅಲಹಾಬಾದ್ ಹೈಕೋರ್ಟ್