Publish Date: Sat, 13 Nov 2021 (12:15 IST)
Updated Date: Sat, 13 Nov 2021 (10:18 IST)
ಮಧ್ಯಪ್ರದೇಶ: 17 ವರ್ಷದ ಅಪ್ರಾಪ್ತ ಯುವತಿ ಮನೆಯಲ್ಲಿ ಏಕಾಂಗಿಯಾಗಿದ್ದ ವೇಳೆ ನೆರೆಮನೆಯಾತ ಅತ್ಯಾಚಾರ ನಡೆಸಿದ ಘಟನೆ ಮಧ‍್ಯಪ್ರದೇಶದಲ್ಲಿ ನಡೆದಿದೆ.
ಯುವತಿ ಮನೆಯಲ್ಲಿ ಒಬ್ಬಳೇ ಇದ್ದಾಗ ಮನೆಗೆ ಬಂದ ಆರೋಪಿ ಬಾಗಿಲು ಭದ್ರಪಡಿಸಿ ಹೇಯ ಕೃತ್ಯವೆಸಗಿದ್ದಾನೆ. ಯುವತಿ ಕಿರುಚಿಕೊಂಡಾಗ ಯಾರಿಗಾದರೂ ಹೇಳಿದರೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ ಎಂದು ಬೆದರಿಸಿದ್ದಾನೆ.
ಮನೆಗೆ ತಾಯಿ ಬಂದಾಗ ಯುವತಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ತಕ್ಷಣವೇ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ.