Select Your Language

Notifications

webdunia
webdunia
webdunia
webdunia

ಇಂದು ಪ್ರಿಯಾಂಕಾ ಗಾಂಧಿ ಪಕ್ಷದ ಹುದ್ದೆಗೆ ರಾಜೀನಾಮೆ?

ಇಂದು ಪ್ರಿಯಾಂಕಾ ಗಾಂಧಿ ಪಕ್ಷದ ಹುದ್ದೆಗೆ ರಾಜೀನಾಮೆ?
ನವದೆಹಲಿ , ಭಾನುವಾರ, 13 ಮಾರ್ಚ್ 2022 (07:10 IST)
ನವದೆಹಲಿ : ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆ ಪಕ್ಷದಲ್ಲಿ ಬಿರುಗಾಳಿ ಎಬ್ಬಿಸುವ ಮುನ್ಸೂಚನೆ ಸಿಕ್ಕಿದೆ.
 
ಪಂಚ ಸೋಲಿನ ಹೊಣೆ ಹೊತ್ತು ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಉತ್ತರ ಪ್ರದೇಶ ಚುನಾವಣೆ ಉಸ್ತುವಾರಿ ಹೊತ್ತಿದ್ದ ಪ್ರಿಯಾಂಕಾ ಗಾಂಧಿ ತಮ್ಮ ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

ಎಐಸಿಸಿ ಕಚೇರಿಯಲ್ಲಿ ನಡೆಯಲಿರುವ ಸಿಡಬ್ಲುಸಿ ಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎನ್ನಲಾಗುತ್ತಿದೆ.

ಆದ್ರೆ, ಗಾಂಧಿ ಕುಟುಂಬದ ಮೇಲೆ ನಿಷ್ಠೆ ಹೊಂದಿರುವವರಿಂದ್ಲೇ ತುಂಬಿರುವ ಕಾರ್ಯಕಾರಣಿ ಮಂಡಳಿ ಇದಕ್ಕೆ ಅವಕಾಶ ನೀಡುತ್ತಾ? ಒಪ್ಪಿಗೆ ಸೂಚಿಸುತ್ತಾ? ಪ್ರತಿಬಾರಿಯಂತೆ ಈ ಸಭೆಯಲ್ಲೂ ಈ ಹೈಡ್ರಾಮಾದಲ್ಲೇ ಮುಗಿಯುತ್ತಾ? ಅಥ್ವಾ ನಿಜವಾಗಿಯೂ ಸೋನಿಯಾ ಕುಟುಂಬ ವರ್ಗ ರಾಜೀನಾಮೆ ನೀಡಿ,

ಹೊಸಬರಿಗೆ ಅವಕಾಶ ನೀಡುತ್ತಾ? ಪಕ್ಷದಲ್ಲಿ ಹೊಸ ಗಾಳಿ ಬೀಸುತ್ತಾ ಎಂಬ ಕುತೂಹಲ ಈಗ ಎಲ್ಲರಲ್ಲಿ ಮನೆ ಮಾಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ತಲಕಾವೇರಿ-ಭಾಗಮಂಡಲ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ: ಸಚಿವೆ ಶಶಿಕಲಾ ಜೊಲ್ಲೆ